ರೌಡಿಯಾಗಲು ಹೋಗಿ ಸತ್ತ....!

No comments

ಬೆಂಗಳೂರು: ಆರ್.ಕೆ. ಬ್ಲಾಕ್​ನಲ್ಲಿ ನಡೆದಿದ್ದ ವಿಘ್ನೇಶ್ (22) ಕೊಲೆ ಪ್ರಕರಣ ಸಂಬಂಧ ಜೆ.ಸಿ. ನಗರ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.
ಜೆ.ಸಿ.ನಗರದ ಮುಖೇಶ್ (38), ಡಿ.ಎಸ್. ಸಂತೋಷ್ (37), ಆರ್.ಟಿ. ನಗರದ ಸಂದೀಪ್ (29), ಎಂ.ಸಿ. ಸೋಮಯ್ಯ (25), ಯೋಗೇಶ್ (28) ಮತ್ತು ಚೇತನ್(22) ಬಂಧಿತರು. ರಮೇಶ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಏ.21ರ ರಾತ್ರಿ 9 ಗಂಟೆಯಲ್ಲಿ ವಿಘ್ನೇಶ್ ಮೇಲೆ ಹಲ್ಲೆ ನಡೆಸಿದ್ದರು. ತಡರಾತ್ರಿ 1 ಗಂಟೆಯಲ್ಲಿ ಬೌರಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ವಿಘ್ನೇಶ್ ವಿರುದ್ಧ ಸುಲಿಗೆ, 2 ಕೊಲೆ ಪ್ರಕರಣ ದಾಖಲಾಗಿದ್ದವು. ಆರೋಪಿಗಳು ಚಮ್ಮಾರ ವೃತ್ತಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕೆಲ ದಿನಗಳ ಹಿಂದೆ ವಿಘ್ನೇಶ್ ತನ್ನ ಏರಿಯಾದಲ್ಲಿ ಹಿಡಿತ ಸಾಧಿಸುವ ಉದ್ದೇಶಕ್ಕೆ ರಮೇಶ್ ಮತ್ತು ಸಂತೋಷ್ ಬಳಿಗೆ ಹೋಗಿ ಹಲ್ಲೆ ನಡೆಸಿ ಹಣ ಸುಲಿಗೆ ಮಾಡುತ್ತಿದ್ದ. ದೂರು ಕೊಟ್ಟರೆ ತಮ್ಮ ವೃತ್ತಿಗೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಹಲ್ಲೆಗೊಳಗಾದವರು ಸುಮ್ಮನಾಗಿದ್ದರು. ಆದರೂ ವಿಘ್ನೇಶ್ ತನ್ನ ಹುಡುಗರ ಗುಂಪು ಕಟ್ಟಿಕೊಂಡು ಪದೇಪದೆ ರಮೇಶ್ ಮತ್ತು ಸಂತೋಷ್ ಮೇಲೆ ಹಲ್ಲೆ ನಡೆಸುತ್ತಿದ್ದ. ಇಬ್ಬರು ತಮ್ಮ ಸ್ನೇಹಿತರಿಗೆ ಈ ಬಗ್ಗೆ ಹೇಳಿಕೊಂಡಿದ್ದರು.ವಿಘ್ನೇಶ್ ಬಳಿಯೇ ರಾಜೀಸಂಧಾನ ಮಾಡಿಕೊಂಡರೆ ನಮಗೆ ಸ್ಥಳೀಯವಾಗಿ ಸಮಸ್ಯೆ ಇರುವುದಿಲ್ಲ ಎಂದು ನಿರ್ಧರಿಸಿದ್ದರು. ಅದಕ್ಕಾಗಿ ವಿಘ್ನೇಶ್ ಬಳಿಗೆ ರಾಜೀಸಂಧಾನಕ್ಕೆ ಆರೋಪಿಗಳು ಹೋಗಿ ಶರಣಾಗಿದ್ದರು. ಅಲ್ಲಿಯೂ ಬಿಡದೆ ಸಂತೋಷ್ ಮೇಲೆ ವಿಘ್ನೇಶ್ ಮೇಲೆ ಹಲ್ಲೆ ನಡೆಸಿದ್ದ. ಕೆರಳಿದ ಆರೋಪಿಗಳು ಗುಂಪಾಗಿ ಸೇರಿ ಚಪ್ಪಲಿ ಹೊಲಿಯುವ ಸಲಕರಣೆಗಳಲ್ಲಿ ವಿಘ್ನೇಶ್ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ಜೆ.ಸಿ. ನಗರ ಇನ್​ಸ್ಪೆಕ್ಟರ್ ಬಿ.ಕೆ. ಮಂಜಯ್ಯ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

No comments

Post a Comment