ಈಜಲು ತೆರಳಿ ಐವರ ಸಾವು : ಬೆಂಗಳೂರು

No comments

ಬೆಂಗಳೂರು: ಈಜಲು ತೆರಳಿದ ಒಂದೇ ಕುಟುಂಬದ ಐವರು ಕಲ್ಯಾಣಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸಿದ್ದರಬೆಟ್ಟದಲ್ಲಿ ನಡೆದಿದೆ.
ಮೃತರೆಲ್ಲರೂ ಬೆಂಗಳೂರಿನ ಕೆಂಗೇರಿ ನಿವಾಸಿಗಳಾಗಿದ್ದು ರೇಷ್ಮಾ(22), ಮುನೀರ್​ ಖಾನ್​(49), ಯಾರಬ್​ ಖಾನ್​(21), ಮುಬೀನ್​ ತಾಜ್​ (21), ಸಲ್ಮಾನ್​ ಮೃತ ದುರ್ದೈವಿಗಳು.ಕಲ್ಯಾಣಿಯಲ್ಲಿ ಈಜಲು ತೆರಳಿದ್ದ ವೇಳೆ ಘಟನೆ ನಡೆದಿದ್ದು, ಇಬ್ಬರ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದಾರೆ. ದಾಬಸ್​ಪೇಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

No comments

Post a Comment