ಕೊಲೆ ಆರೋಪಿ ಸಂಘದ ಸದಸ್ಯನಲ್ಲ.ಲಾರಿ ಮಾಲೀಕರು ಹಾಗೂ ಚಾಲಕರ ಸ್ಪಷ್ಟನೆ

No comments
ಕೊಲೆ ಆರೋಪಿ ಸಂಘದ ಸದಸ್ಯನಲ್ಲ : ಲಾರಿ ಮಾಲೀಕರು, ಚಾಲಕರ ಸ್ಪಷ್ಟನೆ
ಮಡಿಕೇರಿ ಏ.೨ : ಇತ್ತೀಚೆಗೆ ಸುಪಾರಿ ಕೊಲೆ ಆರೋಪದಡಿ ಬಂಧಿತನಾಗಿರುವ ಲಾರಿ ಚಾಲಕ, ಬೊಳ್ಳೂರು ಗುಡ್ಡೆಹೊಸೂರು ನಿವಾಸಿ ಜಯನ್ ಎಂಬಾತ ಮಡಿಕೇರಿ ತಾಲ್ಲೂಕು ಲಾರಿ ಮಾಲೀಕರ ಮತ್ತು ಚಾಲಕರ ಸಂಘದ ಸದಸ್ಯನಲ್ಲ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
                              
ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಕೆ.ಕೆ.ಶಿವ ಹಾಗೂ ಕಾರ್ಯದರ್ಶಿ ಎಂ.ಶ್ರೀನಿವಾಸ್ ಸಂಘಕ್ಕೂ ಕೊಲೆ ಆರೋಪಿ ಜಯನ್‌ಗೂ ಯಾವುದೇ ಸಂಬಂಧವಿರುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಸಂಘ ಕಳೆದ ಅನೇಕ ವರ್ಷಗಳಿಂದ ಜನಪರ ಹಾಗೂ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ, ಅಲ್ಲದೆ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ಮೂಲಕ ದೇಶಪ್ರೇಮವನ್ನು ಮೆರೆದಿದೆ ಎಂದು ಅವರು ತಿಳಿಸಿದ್ದಾರೆ.

No comments

Post a Comment