ಸುಂಟಿಕೊಪ್ಪದಲ್ಲಿ ಮಹಿಳಾ ದಿನಾಚರಣೆ

No comments

ಸುಂಟಿಕೊಪ್ಪದಲ್ಲಿ ವಿಶ್ವ ಮಹಿಳಾ ದಿನಾಚರಣೆ : ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಮಹಿಳೆಯರದೇ ಸಿಂಹಪಾಲು : ಫಾಧರ್ ಎಡ್ವರ್ಡ್ ವಿಲಿಯಂ ಸಾಲ್ಡಾನಾ
ಸುಂಟಿಕೊಪ್ಪ,ಏ.೨: ಶಿಕ್ಷಣ ಹಾಗೂ ಆರೋಗ್ಯ ನಮ್ಮ ದೇಶದ ಬಲಿಷ್ಠವಾದ ಕಂಬಗಳಾಗಿದ್ದು ಈ ಕ್ಷೇತ್ರದಲ್ಲಿ ಮಹಿಳೆಯರದೇ ಸಿಂಹಪಾಲಾಗಿದೆ ಎಂದು ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಫಾಧರ್ ಎಡ್ವರ್ಡ್ ವಿಲಿಯಂ ಸಾಲ್ಡಾನಾ ಹೇಳಿದರು.
ಸಂತ ಅಂತೋಣಿ ಶಾಲಾ ಸಭಾಂಗಣದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ’ರಾಷ್ಟ್ರ ನಿರ್ಮಾಣದಲ್ಲಿ ಮಹಿಳೇಯರ ಪಾತ್ರ’ ಎಂಬ ವಿಷಯ ಇಲ್ಲಿ ಅಪ್ರಸ್ತುತ ಪ್ರಪಂಚದಾದ್ಯಂತ ಶಿಕ್ಷಣ ಇಲಾಖೆಯಲ್ಲಿ ಹೆಚ್ಚಿನ ಮಹಿಳೆಯರೇ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ಆರೋಗ್ಯ ಇಲಾಖೆಯಲ್ಲಿ ದಾದಿಯರೇ ಅಧಿಕವಾಗಿದ್ದು ರಾಷ್ಟ್ರ ನಿರ್ಮಾಣದಲ್ಲಿ ಇವರುಗಳಪಾತ್ರ ಮಹತ್ವದಾಗಿದೆ ಎಂದು ಬಣ್ಣಿಸಿದರು.
ಮುಖ್ಯತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಸಮಿತಿಯ ಅಪ್ತ ಸಮಾಲೋಚಕಿ ಸಿಸ್ಟರ್ ಮಿಲಾಗ್ರಿಸ್ ಮಾತನಾಡಿ ಮಕ್ಕಳ ಪಾಲನೆ ಪೋಷಣೆಯಲ್ಲಿ ಅವರಿಗೆ ಶಿಕ್ಷಣಕೊಡಿಸಿ ಸಂಸ್ಕಾರ, ಒಳ್ಳೆಯ ಗುಣಗಳನ್ನು ಕಲಿಸಿ ಸತ್ಪ್ರಜೆಯಾಗಿ ಮಾಡುವಲ್ಲಿ ಮಹಿಳೆಯರ ಪಾತ್ರ ಮಹತ್ವದಾಗಿದೆ. ಕೇವಲ ವಿದ್ಯೆಕೊಡಿಸಿ ಪೋಷಕರು ತಮ್ಮ ಜವಾಬ್ಧಾರಿ ಮುಗಿಯಿತು ಎಂದು ತಿಳಿದುಕೊಳ್ಳದೆ ಶಾಲೆ ಕಾಲೇಜಿಗೆ ತೆರಳಿ ಅವರ ಶಿಕ್ಷಣದ ಪ್ರಗತಿ ಬಗ್ಗೆ ಗುಣ ನಡತೆ ಬಗ್ಗೆ ವಿಚಾರಿಸಿಕೊಳ್ಳುವ ಅಗತ್ಯತೆ ಇದೆ. ವಿದ್ಯಾರ್ಥಿಗಳು ಹಾದಿ ತಪ್ಪುತ್ತಿರುವ ಇಂದಿನ ಕಾಲಘಟ್ಟದಲ್ಲಿ ಪೋಷಕರು ಅದರಲ್ಲೂ ಗೃಹಿಣಿಯರ ಜವಾಬ್ಧಾರಿ ಹೆಚ್ಚಿದೆ. ಮಕ್ಕಳ ಸರ್ವತೋಮುಖ ಏಳಿಗೆಗೆ ಮಹಿಳೆಯ ಪಾತ್ರ ಅನನ್ಯವಾದುದು ಎಂದೂ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ವಲಯ ಮೇಲ್ವಿಚಾರಕ ಗುರುಗಳಾದ ಫಾಧರ್ ಲೈನ್ಸ್ ಮೊರೆಸ್ ಯಾವುದೇ ಸಮಸ್ಯೆಯನ್ನು ವೈಯಕ್ತಿಕ ನೆಲೆಕಟ್ಟಿನಲ್ಲಿ ನೋಡದೆ ಒಗ್ಗಟ್ಟಾಗಿ ವಿಶಾಲ ಮನೋಬಾವನೆಯಿಂದ ಬಗೆಹರಿಸಲು ಮಹಿಳೆಯರು ಮುಂದೆ ಬರಬೇಕು. ಈ ವೇದಿಕೆ ಕೇವಲ ಮಹಿಳಾ ದಿನಾಚರಣೆಗೆ ಸೀಮಿತವಾದ ವೇದಿಕೆಯಾಗದೆ ಮಹಿಳೆಯ ಅಭಿವೃದ್ಧಿಗೆ ಪೂರಕ ವೇದಿಕೆಯಾಗಬೇಕೆಂದು ಹಿತವಚನ ನೀಡಿದರು.
ಸಮಾರಂಭದ ವೇದಿಕೆಯಲ್ಲಿ ಜಿಲ್ಲಾ ಘಟಕ ಅಧ್ಯಕ್ಷೆ ಜೂಡಿತ್ ಮಸ್ಕಾರನೇಸ್, ಡಿಕ್ಕನ್ ಪ್ರಾನ್ಸಿಸ್ ಜಾಕ್ಸನ್ ಪಿ.ಜೆ., ಬ್ರದರ್ ಜಾನ್ ಸಂತಕ್ಲಾರ ಕನ್ಯಾಸ್ತ್ರೀಮಠದ ಮದರ್ ಸೂಪಿರಿಯರ್ ಸಿಸ್ಟರ್ ವೈಲೆಟ್ ಹಾಗೂ ರೀಟಾ ಸೆಲ್ವರಾಜ್ ಇದ್ದರು.
ದಿನದ ಅಂಗವಾಗಿ ಮಹಿಳೆಯರು ಸಾಂಸ್ಕೃತಿಕ ಕಾರ್ಯಕ್ರಮಗಳು ನರೆದಿದ್ದ ಜನಮನಸೂರೆಗೊಳಿಸಿತು.

No comments

Post a Comment