ಕೊಟ್ಟಮುಡಿ ಮರ್ಕಝ್ ನಲ್ಲಿ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ : ರಈಸುಲ್ ಉಲಮಾ ಇ ಸುಲೈಮಾನ್ ಉಸ್ತಾದ್ ಭಾಗಿ

No comments

ನಾಪೋಕ್ಲು : ಕೊಟ್ಟಮುಡಿಯ ಮತಭೌತಿಕ  ಸಮನ್ವಯ  ಮರ್ಕಝುಲ್ ಹಿದಾಯ ಇದರಲ್ಲಿ 7 ವರ್ಷಗಳ ಕಾಲ ಕಲಿತು ಉನ್ನತ ವಿದ್ಯಾಭ್ಯಾಸಕ್ಕಾಗಿ ಮರ್ಕಝುಸ್ಸಖಾಫತಿಸುನ್ನಿಯ್ಯಗೆ ತೆರಳುತ್ತಿರುವ 9 ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಸಮಾರಂಭವು 25 ಗುರುವಾರ ಸಂಜೆ 7:00 ಗಂಟೆಗೆ ಮರ್ಕಝ್ ಮಸೀದಿಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ನಾಯಿಬ್ ಖಾಝಿ ಮಹ್ಮೂದ್ ಮುಸ್ಲಿಯಾರ್ ನೇರವೇರಿಸಿದರು. ನಂತರ 9 ವಿದ್ಯಾರ್ಥಿಗಳಿಗೆ  ಸಮಸ್ತ ಕೇರಳ ಜಂಞಯ್ಯತುಲ್ ಉಲಮಾ ಅಧ್ಯಕ್ಷರು ಪ್ರಖ್ಯಾತ ವಿದ್ವಾಂಸರು ಆದ ರಈಸುಲ್ ಉಲಮಾ ಇ ಸುಲೈಮಾನ್ ಶಿರವಸ್ತ್ರ ತೊಡಿಸಿ ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ  ಸುಲೈಮಾನ್ ಉಸ್ತಾದರ ಮಕ್ಕಳಾದ ಶೈಖುನಾ ಅಬ್ದುಲ್ಲಾ ಅಹ್ಸನಿ , ಮರ್ಕಝ್ ಕೊಟ್ಟಮುಡಿ ಪ್ರಿನ್ಸಿಪಾಲ್ ಶಿಹಾಬುದ್ದೀನ್ ನೂರಾನಿ , ಅನ್ವಾರುಲ್ ಹುದಾ ಸಾರಥಿ ಅಶ್ರಫ್ ಅಹ್ಸನಿ , ಮರ್ಕಝ್ ಸಾರಥಿಗಳಾದ ಇಸ್ಮಾಯಿಲ್ ಸಖಾಫಿ ಮತ್ತು ಸದಸ್ಯರು ,  
ಸುನ್ನಿ ಸಂಘಕುಟುಂಬದ ನೇತಾರರು , ಮರ್ಕಝ್ ವಿದ್ಯಾರ್ಥಿಗಳು ಭಾಗವಹಿಸಿದ್ದರು

No comments

Post a Comment