ಇಂದು ಸಂವಿಧಾನ ಶಿಲ್ಪಿ ಡಾ.ಬಿಆರ್ ದಾದಾ ಸಾಹೇಬ್ ಅಂಬೇಡ್ಕರ್ ಅವರ ೧೨೮ ನೇ ಜನ್ಮದಿನ
ಭೀಮರಾವ್ ರಾಮ್‌ಜೀ ಅಂಬೇಡ್ಕರ್, ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು ‘ಸಂವಿಧಾನ ಶಿಲ್ಪಿ’ ಎಂದು ಕರೆಯುತ್ತಾರೆ.
ಭಾರತದ ಸುಪುತ್ರರಲ್ಲಿ ಒಬ್ಬರಾದ ಭೀಮ ರಾವ್ ಅಂಬೇಡ್ಕರ್ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬವಾಡೆಯಲ್ಲಿ ರಾಮ್‌ಜಿ ಸಕ್ಪಾಲ್ ಹಾಗೂ ಭೀಮಬಾಯಿ ದಂಪತಿಗಳ 14ನೇ ಮಗನಾಗಿ 1891ರ ಏಪ್ರಿಲ್ 14ರಂದು ಜನಿಸಿದರು. ಅನ್ಯಾಯ, ಶೋಷಣೆ, ಅಸ್ಪೃಶ್ಯತೆ ಮೊದಲಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿ ಜಯ ಗಳಿಸಿದ ಧೀರ ವ್ಯಕ್ತಿ. ಅಶಕ್ತ ದಲಿತ ಸಮೂಹದ ನೋವಿನ ಮಾರ್ದನಿ ಎಂದೇ ಪ್ರಸಿದ್ಧ ರಾಗಿದ್ದರು. ಓದುವುದರಲ್ಲಿ ಅಪಾರ ಆಸಕ್ತಿ, ಚುರುಕು ತನದಿಂದ ಅಧ್ಯಾಪಕರ ಮೆಚ್ಚುಗೆಗೆ ಪಾತ್ರರಾಗಿದ್ದ ಅಂಬೇಡ್ಕರ್ ಅವರಿಗೆ ಅಸ್ಪೃಶ್ಯನೆಂಬ ಕಾರಣಕ್ಕಾಗಿ ಸವರ್ಣೀಯರು ನಡೆಸಿಕೊಳ್ಳುತ್ತಿದ್ದ ರೀತಿ ಮನ ನೋಯಿಸಿತು. ಪ್ರಾಣಿಯಾದ ನಾಯಿಗೂ ಮನೆ ಒಳಗೆ ಪ್ರವೇಶಿಸುವ ಅವಕಾಶ ಉಂಟು. ಅನ್ಯ ಧರ್ಮೀಯರಾದ ಮುಸ್ಲಿಮರಿಗೂ ಅದು ಸಾಧ್ಯವಾಗುವುದಾದರೆ ಮಾನವನಾಗಿ ಹಿಂದೂ ಧರ್ಮೀಯನೇ ಆಗಿರುವ ನನಗೇಕೆ ಅವಕಾಶವಿಲ್ಲ? ಹಾಗಾದರೆ ಅಸ್ಪೃಶ್ಯರು ಪ್ರಾಣಿಗಳಿಗಿಂತಲೂ ಕೀಳೇ? ಎಂಬೆಲ್ಲಾ ಯೋಚನೆಗಳು ಅವರನ್ನು ಕಾಡತೊಡಗಿ ಮೂಕವೇದನೆ ಅನುಭವಿಸಿದರು. ಇವರ ಬುದ್ಧಿವಂತಿಕೆ ಮೆಚ್ಚಿಕೊಂಡು ಪ್ರೀತಿ, ವಾತ್ಸಲ್ಯದಿಂದ ನೋಡುತ್ತಿದ್ದ ಬ್ರಾಹ್ಮಣ ಅಧ್ಯಾಪಕರೊಬ್ಬರು ಅಂಬೇಡ್ಕರ್ ಎಂಬ ಮನೆತನದವರು. ಈ ಅಂಬೇಡ್ಕರ್ ನಾಮಾಂಕಿತ ಆ ಗುರುಗಳ ಉಡುಗೊರೆಯಾಗಿ ಭೀಮರಾವ್‌ಗೆ ಲಭ್ಯವಾಯಿತು. ಅವರು ಮುಂಬಯಿ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರ ಮತ್ತು ರಾಜನೀತಿ ವಿಷಯಗಳಲ್ಲಿ ಬಿ.ಎ. ಪದವಿ ಗಳಿಸಿದರು.
ವಾಪಸು ಬಂದ ಮೇಲೆ ಬರೋಡ ಸಂಸ್ಥಾನದಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಬೇಕು ಎಂಬ ಷರತ್ತಿನ ಮೇಲೆ ಅವರಿಗೆ ಪರದೇಶದಲ್ಲಿ ಓದು ಮುಂದುವರಿಸಲು ವಿದ್ಯಾರ್ಥಿವೇತನ ದೊರಕಿತು. 1903ರಿಂದ 1906ರವರೆಗೆ ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ತತ್ವಶಾಸ್ತ್ರ, ಮಾನವಶಾಸ್ತ್ರ ಮತ್ತು ರಾಜನೀತಿ/ರಾಜ್ಯಶಾಸ್ತ್ರ ಅಭ್ಯಾಸ ಮಾಡಿದರು. 1905ರಲ್ಲಿ ಅರ್ಥ ಶಾಸ್ತ್ರದಲ್ಲಿ ಎಂ.ಎ, ಪದವಿ ಗಳಿಸಿದರು. 1906ರಲ್ಲಿ, ಅವರು ಮುಂದೆ ಪುಸ್ತಕರೂಪದಲ್ಲಿ ಪ್ರಕಟಿಸಿದ ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಹಣಕಾಸು ಪದ್ಧತಿಯ ವಿಕಾಸ ಎಂಬ ಮಹಾಪ್ರಬಂಧವನ್ನು ಮಂಡಿಸಿ, ಪಿ.ಹೆಚ್.ಡಿ. ಪದವಿಯನ್ನು ಪಡೆದುಕೊಂಡರು. ಭಾರತದಲ್ಲಿ ಜಾತಿ ಪದ್ಧತಿ: ತಂತ್ರ, ಹುಟ್ಟು ಮತ್ತು ಬೆಳವಣಿಗೆ ಎಂಬ ಪ್ರಬಂಧ ಅವರ ಮೊಟ್ಟವೊದಲ ಪ್ರಕಾಶಿತ ಕೃತಿ. 1907 ಜೂನ್ ನಲ್ಲಿ ಅಮೇರಿಕದಲ್ಲಿ ಓದು ಮುಗಿಸಿದ ಅಂಬೇಡ್ಕರ್ ಮುಂದೆ ಲಂಡನ್ನಿನ “ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಎಂಡ್ ಪೊಲಿಟಿಕಲ್ ಸೈನ್ಸ್” ಸೇರಿ ನಂತರ ಗ್ರೇಸ್ ಇನ್ ಸಂಸ್ಥೆಯನ್ನು ಸೇರಿದರು.
“ಮೂಕನಾಯಕ” ಎಂಬ ಮರಾಠಿ ಸಾಪ್ತಾಹಿಕವನ್ನು ಹೊರಡಿಸುತ್ತಿದ್ದ ಅಂಬೇಡ್ಕರ್, ಮತ್ತೆ ಲಂಡನ್ನಿಗೆ ಮರಳಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಮುಂದಿನ ಮೂರು ವರ್ಷಗಳಲ್ಲಿ ಅವರು “ ರೂಪಾಯಿಯ ಬಿಕ್ಕಟ್ಟು” (ದಿ ಪ್ರಾಬ್ಲಮ್ ಆಫ್ ರುಪಿ) ಎಂಬ ಮಹಾಪ್ರಬಂಧ ಬರೆದು, ಲಂಡನ್ ವಿಶ್ವವಿದ್ಯಾನಿಲಯದಿಂದ ಡಿ.ಎಸ್.ಸಿ. ಗೌರವವನ್ನು ಸಂಪಾದಿಸಿದರು. ಇದರೊಂದಿಗೇ, ಬಾರ್-ಎಟ್-ಲಾ ಪದವಿ ಓದಿ ಬ್ಯಾರಿಸ್ಟರ್ ಆಗಿ, ಬ್ರಿಟಿಷ್ ಬಾರಿಗೆ ಸದಸ್ಯತ್ವ ಪಡೆದರು. ಇಂಗ್ಲೆಂಡಿನಿಂದ ಶಾಶ್ವತವಾಗಿ ವಾಪಸು ಬರುವ ಮುನ್ನ, ಅಂಬೇಡ್ಕರ್ ಮೂರು ತಿಂಗಳು ಜರ್ಮನಿಯಲ್ಲಿ ಬಾನ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಹೆಚ್ಚಿನ ಅಭ್ಯಾಸ ಮಾಡಿದರು.
ಭಾರತಕ್ಕೆ ಮರಳಿ ಮುಂಬಯಿಯಲ್ಲಿ ನೆಲೆನಿಂತ ಅಂಬೇಡ್ಕರ್ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಅವರು ಕಾಲೇಜೊಂದರಲ್ಲಿ ಬೋಧಿಸುತ್ತಲೇ, ವಿವಿಧ ಸರಕಾರೀ ಸಂಸ್ಥೆಗಳಲ್ಲಿ ಸಾಕ್ಷ್ಯ ನೀಡುತ್ತಲೇ, ಹೊಸ ವೃತ್ತ ಪತ್ರಿಕೆಯನ್ನು ನಡೆಸುತ್ತಲೇ, ಮುಂಬಯಿ ಲೆಜಿಸ್ಲೇಟಿವ್ ಕೌನ್ಸಿಲ್ಲಿಗೆ ನಾಮಕರಣಗೊಂಡು, ಅದರೊಂದಿಗೇ ವಕೀಲಿ ವೃತ್ತಿಯನ್ನೂ ಬೆಳೆಸಿಕೊಂಡರು.
ಪುಸ್ತಕ ಪ್ರೇಮಿಯಾದ ಇವರು, ಅಮೂಲ್ಯ ಗ್ರಂಥಗಳನ್ನು ಸಂಗ್ರಹಿಸಿದ್ದರು. ಹಿಂದೂ ಧಾರ್ಮಿಕ ಗ್ರಂಥಗಳನ್ನೆಲ್ಲ ಅಧ್ಯಯನ ಮಾಡಿದ್ದರು. ಧಾರ್ಮಿಕವಾಗಿ, ಸಾಮಾಜಿಕವಾಗಿ ಎಷ್ಟೊಂದು ಅಂಧಾನುಕರಣೆಗಳಿವೆ, ಅದರಿಂದ ದೀನದಲಿತರು ಅನುಭವಿಸಬೇಕಾಗಿರುವ ನೋವುಗಳನ್ನು ನೆನೆದು, ಅವುಗಳನ್ನು ತೊಡೆದು ಹಾಕುವ ಬಗ್ಗೆ ಕುರಿತು ಚಿಂತಿಸತೊಡಗಿದರು. ಇದೇ ವೇಳೆಯಲ್ಲಿ ಗಾಂಧೀಜಿಯವರು ಸ್ವಾತಂತ್ರ್ಯ ಸಂಗ್ರಾಮದ ಮುಂದಾಳಾಗಿದ್ದು, ಇಡೀ ಜನತೆಯ ಮೇಲೆ ಪ್ರಭಾವ ಉಳ್ಳ ವ್ಯಕ್ತಿಯಾಗಿದ್ದರು. ಸ್ವಾತಂತ್ರ್ಯ ಚಳುವಳಿ ಜೊತೆಗೆ ಸಮಾಜೋದ್ಧಾರ ಕಾರ್ಯಕ್ರಮದಡಿ ಹರಿಜನೋದ್ಧಾರಕ್ಕಾಗಿ ಕೂಡ ಶ್ರಮಿಸುತ್ತಿದ್ದರು. ಅವರನ್ನು ಸಂಪರ್ಕಿಸಿದ ಅಂಬೇಡ್ಕರ್ ಅಸ್ಪೃಶ್ಯತೆಯನ್ನು ನಿರ್ಮೂಲ ಮಾಡಲು ವ್ಯಾಪಕ ಆಂದೋಲನದ ಬಗ್ಗೆ ಚರ್ಚಿಸಿದರು. 1927ರಲ್ಲಿ ಮುಂಬೈ ಗವರ್ನರ್ ಡಾ।। ಅಂಬೇಡ್ಕರ್‌ರನ್ನು “ಲೇಜಿಸ್ಲೇಟಿವ್ ಕೌನ್ಸಿಲ್ “ನ ಸದಸ್ಯರನ್ನಾಗಿ ನೇಮಿಸಿದರು. 1931ರಲ್ಲಿ ನಡೆದ ದುಂಡು ಮೇಜಿನ ಶಾಸನ ಸಭೆಗಳಲ್ಲಿ ಕೋಮುವಾರು ಪ್ರಾತಿನಿಧ್ಯವಿರಬೇಕೆಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಭಾರತ ಸ್ವಾತಂತ್ರ್ಯ ಗಳಿಸಿದ ಮೇಲೆ (1947) ಹೊಸ ಮಂತ್ರಿಮಂಡಲದಲ್ಲಿ ಅಂಬೇಡ್ಕರರರು ಪ್ರಪ್ರಥಮ ಕಾನೂನು ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿ, ಸಂವಿಧಾನದ ಕರಡು ಪ್ರತಿ ತಯಾರಿ ಸಭೆಯ ಅಧ್ಯಕ್ಷರಾಗಿದ್ದು, ಅಮೂಲ್ಯ ಸಲಹೆಗಳನ್ನಿತ್ತರು. ಆ ಪ್ರಕಾರ ಅಸ್ಪೃಶ್ಯತೆ ಕಾನೂನು ಬಾಹಿರ, ಅದರ ಆಚರಣೆ ಶಿಕ್ಷಾರ್ಹ ಅಪರಾಧ ಎಂಬುದಾಗಿ ಸಂವಿಧಾನದಲ್ಲಿ ಸೇರಿಸಲಾಯಿತು. ತಮ್ಮ ಕಾರ್ಯ ಸಾಧನೆಯ ಹೋರಾಟದಲ್ಲಿ ಅವರು ತಮ್ಮ ಇಡೀ ಬದುಕನ್ನು ದೀನ ದಲಿತರ ಹಿತ ರಕ್ಷಣೆಗಾಗಿ ದುಡಿದ ಅಂಬೇಡ್ಕರ್, 1956 ಡಿಸೆಂಬರ್ 6 ರಂದು ಕೊನೆಯುಸಿರೆಳೆದರು.
1952, ಜೂನ್ 15ರಂದು ಕೊಲಂಬಿಯಾ ವಿಶ್ವವಿದ್ಯಾನಿಲಯವು ಅವರಿಗೆ ಕಾನೂನಿನ ಡಾಕ್ಟರೇಟ್ (ಎಲ್‌ಎಲ್.ಡಿ) ಗೌರವ ಪದವಿ ಪ್ರದಾನ ಮಾಡಿತು. 1953, ಜನವರಿ 12ರಂದು ಉಸ್ಮಾನಿಯಾ ವಿಶ್ವವಿದ್ಯಾನಿಲಯ1952, ಜೂನ್ 15ರಂದು ಕೊಲಂಬಿಯಾ ವಿಶ್ವವಿದ್ಯಾನಿಲಯವು ಅವರಿಗೆ ಕಾನೂನಿನ ಡಾಕ್ಟರೇಟ್ (ಎಲ್‌ಎಲ್.ಡಿ) ಗೌರವ ಪದವಿ ಪ್ರದಾನ ಮಾಡಿತು. 1953, ಜನವರಿ 12ರಂದು ಉಸ್ಮಾನಿಯಾ ವಿಶ್ವವಿದ್ಯಾನಿಲಯವು ಅವರಿಗೆ ಎಲ್‌ಎಲ್.ಡಿ ಗೌರವ ಪದವಿ ಕೊಟ್ಟು ಪುರಸ್ಕರಿಸಿತು.
ಭಾರತ ಸರ್ಕಾರ ಅವರಿಗೆ 1989ರಲ್ಲಿ “ಭಾರತ ರತ್ನ” ನೀಡಿ ಗೌರವಿಸಿತು. ಅಂಬೇಡ್ಕರ್ ಕೇವಲ ದಲಿತರಿಗೆ ಮಾತ್ರವಲ್ಲದೆ, ಅವರಲ್ಲಿನ ಸಾಮಾಜಿಕ ಕಳಕಳಿ, ಉದಾತ್ತ ನಿಲುವಿನಿಂದ ಭಾರತೀಯರೆಲ್ಲರ ಮನದಲ್ಲಿ ನೆಲೆಯಾಗಿದ್ದಾರೆ.

No comments
Post a Comment