ಕಂಡಕರೆಯಲ್ಲಿರೋ ಮತದಾರನ‌ ಮತಗಟ್ಟೆ ಕೂಡಮಂಗಳೂರಿನಲ್ಲಿ

No comments

ಕಂಡಕರೆಯಲ್ಲಿರೋ ಮತದಾರನ ಮತಗಟ್ಟೆ ಕೂಡಮಂಗಳೂರಿನಲ್ಲಿ.

ಅಧಿಕಾರಿಗಳ ಎಡವಟ್ಟು.
ಚೆಟ್ಟಳ್ಳಿ:ಇಲ್ಲಿನ  ಗ್ರಾಮ ಪಂಚಾಯತಿ ವ್ಯಾಪ್ತಿಯ ಕಂಡಕರೆಯ ಮತದಾರರ ಮತಗಟ್ಟೆ (೨೩೩ ) ಸಮೀಪದ ಪೊನ್ನತ್ ಮೊಟ್ಟೆಯಲ್ಲಿ ಮತದಾನ ಮಾಡಬೇಕಾಗಿದೆ.

ಆದರೆ ಇಲಾಖೆ ಲೋಕಸಭಾ ಚುನಾವಣೆಗೆ ನೀಡಿರುವ ವೋಟರ್ ಲಿಸ್ಟ್ನಲ್ಲಿ ಮತಗಟ್ಟೆ ವಿವರ ಕೂಡಮಂಗಳೂರು ಎಂದಾಗಿದೆ ಇದರಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ.
ಇಲ್ಲಿನ ಮತದಾರರು ಕೂಡಮಂಗಳೂರು ಹೋಗಿ ಮತದಾನ ಮಾಡಬೇಕೋ? ಅಥವಾ ತಮ್ಮ ಮತಗಟ್ಟೆಯಲ್ಲೇ ಮತದಾನ ಮಾಡಬೋಕು ಎಂಬ ಸಂಶಯದಲ್ಲಿದ್ದಾರೆ.
ಅಧಿಕಾರಿಗಳ ಈ ಎಡವಟ್ಟಿನಿಂದ ಮತದಾರರ ಕಂಗಾಲಾಗಿದ್ದಾನೆ.ಇದರ ಬಗ್ಗೆ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಬೇಕಾಗಿದೆ.

ಅಲ್ಲದೇ ಭಾವಚಿತ್ರವಿರುವ ಗುರತಿನ ಚೀಟಿಯಲ್ಲೂ ಲೋಪಗಳಿವೆ.
ಪ್ರತೀ ಚುನಾವಣೆಯ ಸಂದರ್ಭವೂ ಚುನಾವಣಾ ಇಲಾಖೆ ಮತದಾರರ ಪಟ್ಟಿಗೆ  ಅರ್ಹರನ್ನು ಸೇರ್ಪಡೆಗೊಳಿಸಲು ನಾಣಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನಜಾಗೃತಿ ಮೂಡಿಸುತ್ತಿದೆ.

ಆದರೆ ಇಂತಹ ಎಡವಟ್ಟುಗಳಿಗೆ ಇಲಾಖೆ ಉತ್ತರ ನೀಡಬೇಕಾಗಿದೆ.

*ಕೋಟ್*
ನಾನು ಇದೇ ಮೊದಲ ಬಾರಿ ಮತದಾನ ಮಾಡುತ್ತಿದ್ದೇನೆ.ಆದರೆ ಓಟರ್ ಲಿಸ್ಟ್ ನೋಡಿದ್ರೇ ನನಗೆ ಅಚ್ಚರಿಯಾಗಿದೆ.ಓಟರ್ ಲಿಸ್ಟ್ ನಲ್ಲಿ    ಮತಗಟ್ಟೆ ಹೆಸರು ಕೂಡಮಂಗಳೂರು ಎಂದಾಗಿದೆ.‌ಭಾಗದ ವಿಳಾಸ ಪೊನ್ನತ್ ಮೊಟ್ಟೆ ಸರ್ಕಾರಿ ಶಾಲೆ ಎಂದಾಗಿದೆ ಇದರ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ಮಾಡಬೇಕು.

ಹೊಸ ಮತದಾರ

No comments

Post a Comment