ಸುಂಟಿಕೊಪ್ಪ,ಏ.1: ಕಾಂಡನಕೊಲ್ಲಿ ಕಾಫಿ ತೋಟದಿಂದ ಆಕ್ರಮವಾಗಿ 8 ಲಕ್ಷ ರೂ ಮೌಲ್ಯದ ಬೀಟೆಮರದ ದಿಂಬಿಗಳು ಲಾರಿಯನ್ನು ಸುಂಟಿಕೊಪ್ಪ ಪೊಲೀಸರು ಸೋಮವಾರ ಮುಂಜಾನೆ ವಶಪಡಿಸಿಕೊಂಡಿದ್ದಾರೆ.
ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಕಾಂಡನಕೊಲಿ ವ್ಯಾಪ್ತಿಯ ರಾಮನಾಥ ಚೆಟ್ಟಿಯರ್ ಎಂಬವರಿಗೆ ಸೇರಿದ ತೋಟದೊಳಗೆ ಸೋಮವಾರ ಮುಂಜಾನೆ 5.30 ಗಂಟೆಯ ಸಂದರ್ಭದಲ್ಲಿ ಲಾರಿಯೊಂದರಲ್ಲಿ (ಕೆಎಲ್58 ಜಿ8242) ಆಕ್ರಮವಾಗಿ ಬೀಟೆಮರದ ದಿಮ್ಮಿಗಳನ್ನು ತುಂಬಿಸಿರುವುದನ್ನು ಸುಂಟಿಕೊಪ್ಪ ಠಾಣಾಧಿಕಾರಿಗೆ ಖಚಿತ ಮಾಹಿತಿ ದೊರೆತ ಮೇರೆಗೆ ಕೂಡಲೇ ಕಾರ್ಯಪವೃತ್ತರಾದ ಸುಂಟಿಕೊಪ್ಪ ಠಾಣಾಧಿಕಾರಿ ಮೊಕದ್ದಮೆ ದಾಖಲಿಸಿಕೊಂಡು, ಮೇಲಾಧಿಕಾರಿಗಳ ಆದೇಶದ ಕಾರ್ಯಚರಣೆಗಿಳಿದ ಪೊಲೀಸರು ಕಾಫಿ ತೋಟದ ಮದ್ಯಭಾಗದಲ್ಲಿ ನಿಲ್ಲಿಸಿದ ಲಾರಿಯನ್ನು ಪರಿಶೀಲಿಸಲಾಗಿ ಆಕ್ರಮವಾಗಿ ಬೀಟೆಮರದ 17 ತುಂಡು ದಿಮ್ಮಿಗಳನ್ನು ತುಂಬಿಸಿಟ್ಟಿರುವುದು ಕಂಡು ಬಂದಿದೆ. ಸುಮಾರು 8ಲಕ್ಷ ಮೌಲ್ಯದ ಬೀಟೆಮರದ ದಿಮ್ಮಿಗಳು ಲಾರಿ ಸೇರಿದಂತೆ 33 ಲಕ್ಷ ಮೌಲ್ಯದ ವಸ್ತುವನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ವಾಹನವನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳ ಪತ್ತೆಗೆ ಕ್ರಮಕೈಗೊಂಡಿದ್ದಾರೆ.
ಈ ಕಾರ್ಯಚರಣೆಯಲ್ಲಿ ಠಾಣಾಧಿಕಾರಿ ಜಯರಾಂ, ಮುಖ್ಯಪೇದೆಗಳಾದ ಖಾದರ್, ವಿಜಕುಮಾರ್, ಪೇದೆಗಳಾದ ಪುನೀತ್, ಸತೀಶ್ ಈಳಗೆg,ಪ್ರಶಾಂತ್, ಅಬ್ದುಲ್ ರಹೆಮಾನ್, ಹರೀಶ್,ಅಭಿಲಾಷ್ ಪಾಲ್ಗೊಂಡಿದ್ದರು.

No comments
Post a Comment