ಕೊಡಗು ಸಾಂತ್ವನ ಕೇಂದ್ರ : 3590 ಪ್ರಕರಣಗಳು ಇತ್ಯರ್ಥ
ಮಡಿಕೇರಿ ಏ.೧೨ : ಕೊಡಗು ಸಾಂತ್ವನ ಕೇಂದ್ರದಲ್ಲಿ ಈವರೆಗೆ ೩೬೧೪ ವಿವಿಧ ಸ್ವರೂಪದ ಪ್ರಕರಣಗಳು ದಾಖಲಾಗಿದ್ದು, ೩೫೯೦ ಪ್ರಕರಣಗಳು ಇತ್ಯರ್ಥಗೊಂಡಿರುತ್ತದೆ. ೨೦೧೮-೧೯ನೇ ಆರ್ಥಿಕ ಸಾಲಿನಲ್ಲಿ ಒಟ್ಟು ೩೭೦ ಪ್ರಕರಣಗಳು ದಾಖಲಾಗಿ ೩೪೬ ಪ್ರಕರಣಗಳು ಇತ್ಯರ್ಥಗೊಂಡು ಉಳಿದ ೨೪ ಪ್ರಕರಣಗಳು ಇತ್ಯರ್ಥದ ಹಂತದಲ್ಲಿರುತ್ತದೆ.
ಈವರೆಗೆ ವಿವಿಧ ಸ್ವರೂಪದ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ರೂ.೧೩,೧೬,೦೦೦ ಗಳನ್ನು ಸಾಂತ್ವನ ಕೇಂದ್ರ ಹಾಗೂ ನ್ಯಾಯಾಲಯದ ಮೂಲಕ ೧೪ ಫಲಾನುಭವಿಗಳಿಗೆ ೨೦೧೮-೧೯ನೇ ಸಾಲಿನಲ್ಲಿ ಕೊಡಿಸಿಕೊಡಲಾಗಿದೆ. ಮಹಿಳಾ ಸಹಾಯವಾಣಿಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಾಂತ್ವನ ಕೇಂದ್ರದ ಅಧ್ಯಕ್ಷರಾದ ಮೋಹನ್ ಮೊಣ್ಣಪ್ಪ ಹಾಗೂ ಪ್ರಧಾನ ಕಾರ್ಯದರ್ಶಿಯವರಾದ ಸೀತಾಲಕ್ಷ್ಮಿ ರಾಮಚಂದ್ರ ಅವರು ಕೋರಿದ್ದಾರೆ.
ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ೨೦೦೨ ರ ನವೆಂಬರ್ ೪ ರಿಂದ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಪ್ರಾರಂಭಗೊಂಡ ಸಾಂತ್ವನ ಮಹಿಳಾ ಸಹಾಯವಾಣಿ ಕೊಡಗಿನಾದ್ಯಂತ ಸಮಾಜದ ನೊಂದ ಮಹಿಳೆಯರು ಪ್ರತಿಯೊಂದು ಸ್ತರದಲ್ಲಿ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ದಾಖಲಿಸಿಕೊಂಡು ತಕ್ಷಣಕ್ಕೆ ಸೂಕ್ತ ಸಲಹೆ ಸೂಚನೆ ನೀಡಿ ನೆರವು ಕಲ್ಪಿಸುತ್ತಾ ಬಂದಿದೆ ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗೆ ದೂ.ಸಂ: ೧೦೯೧(ಕೊಡಗಿನೊಳಗಿಂದ ಬಿ.ಎಸ್.ಎನ್.ಎಲ್. ಸ್ಥಿರ ದೂರವಾಣಿ(ಲ್ಯಾಂಡ್ ಲೈನ್) ಉಚಿತ ಕರೆ), ೦೮೨೭೨-೨೨೯೦೦೪, ೯೪೮೦೭೪೫೭೭೬(ಕಚೇರಿ) ನ್ನು ಸಂಪರ್ಕಿಸಬಹುದು.

No comments
Post a Comment