ಐಟಿ ದಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ - ದಾಳಿ ಮಾಡಿದವರು ಅಧಿಕಾರಿಗಳೇ ಅಲ್ಲ..!!

No comments

ಮಂಡ್ಯ: ಜೆಡಿಎಸ್ ಭದ್ರಕೋಟೆ ಮಂಡ್ಯ ಬಳಿಕ ಹಾಸನದ ಹದರನಹಳ್ಳಿ ಈಶ್ವರ ದೇವಾಲಯದ ಅರ್ಚಕರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇನ್ನೊಂದು ವಿಚಾರವೆಂದರೆ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್‌ .ಡಿ ದೇವೇಗೌಡ ಅವರ ಮನೆ ದೇವರು ಇರುವ ದೇವಸ್ಥಾನವಾಗಿದೆ ಇದೀಗ ಐಟಿ ದಾಳಿ ಗೊಂದಲಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.ಘಟನೆ ಸಂಭಂದ ದಿನಕ್ಕೊಂದು ಪ್ರಕರಣ ತಿರುವು ಪಡೆದುಕೊಳ್ಳುತ್ತಿದ್ದು. ಅರ್ಚಕ ಪ್ರಕಾಶ್ ಭಟ್ ರಿಂದ ಹೊಳೆನರಸೀಪುರ ಪೊಲೀಸ್ ಠಾಣೆಗೆ ಇಂದು ದೂರು ಸಲ್ಲಿಕೆಯಾಗಿದೆ. ಮೊಕದ್ದಮೆ ಸಂಖ್ಯೆ 55/2019 ರಲ್ಲಿ ಐಪಿಸಿ ಸಕ್ಷನ್ 341, 487, 417 ರೀತ್ಯಾ ಪ್ರಕರಣ ದಾಖಲು ಮಾಡಲಾಗಿದೆ.ನಿನ್ನೆ ಯಾರೋ ಅಪರಿಚಿತರು ಐಟಿ ಅಧಿಕಾರಿಗಳು ಎಂದು ಹೇಳಿ ದೇವಾಲಯ ಮತ್ತು ಅರ್ಚಕರ ಮನೆಯಲ್ಲಿ ಶೋಧ ನಡೆಸಿದ್ದಾರೆಂದು ದೂರಿನಲ್ಲಿ ದಾಖಲು ಮಾಡಲಾಗಿದೆ.ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯ ಈಶ್ವರ ದೇವಾಲಯದ ಆರ್ಚಕರಾಗಿದ್ದು, ಮಾಜಿ ಪ್ರಧಾನಿ ಹೆಚ್,ಡಿ,ದೇವೇಗೌಡರ ಹುಟ್ಟೂರಿನಲ್ಲಿ ಈ ದಾಳಿ ನಡೆದಿದೆ, ಚುನಾವಣಾ ಸಮಯದಲ್ಲಿ ಈ ಘಟನೆ ನಡೆದಿರುವುದು ಭಾರೀ ಮಹತ್ವ ಪಡೆದುಕೊಂಡಿದೆ.

No comments

Post a Comment