ಏಪ್ರಿಲ್ ೧೧ ರಂದು ವಿದ್ಯುತ್ ವ್ಯತ್ಯಯ

No comments

ಏ.11 ರಂದು ವಿದ್ಯುತ್ ವ್ಯತ್ಯಯ
     ಮಡಿಕೇರಿ:ವಿದ್ಯುತ್ ವಿತರಣಾ ಕೇಂದ್ರ ಮತ್ತು ಮಾರ್ಗದಲ್ಲಿ ತುರ್ತು ನಿರ್ವಹಣೆ ಹಾಗೂ ದುರಸ್ತಿ ಕಾರ್ಯವನ್ನು  ನಿರ್ವಹಿಸಬೇಕಿರುವುದರಿಂದ ಕ.ವಿ.ಪ್ರ.ನಿ.ನಿ. ರವರ ಕೋರಿಕೆಯಂತೆ ಏಪ್ರಿಲ್, 11 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ  2 ಗಂಟೆಯವರೆಗೆ ವಿರಾಜಪೇಟೆ, ಸಿದ್ದಾಪುರ ಹಾಗೂ ಮೂರ್ನಾಡು ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.


      ಆದ್ದರಿಂದ ವಿರಾಜಪೇಟೆ, ಬಿ ಶೆಟ್ಟಿಗೇರಿ, ಬೇತ್ರೀ, ಕಡಗಮರೂರು, ಕಾಕೋಟುಪರಂಬು, ಅಮ್ಮತ್ತಿ, ಸಿದ್ದಾಪುರ, ಐಮಂಗಲ, ಕಾರ್ಮಾಡು, ಬಿಳುಗುಂದ, ಕಾವಾಡಿ, ಕಣ್ಣಂಗಾಲ, ಬೈರಂಬಾಡ, ಹಾಲುಗುಂದ, ಮಾಲ್ದಾರೆ, ಮೂರ್ನಾಡು, ಮರುಗೋಡು, ನಾಪೋಕ್ಲು, ಕಕ್ಕಬೆ, ಅರೆಕಾಡು, ಐಯ್ಯಂಗೇರಿ ನಾಪೋಕ್ಲು ಕುಂಜಿಲ, ಕಕ್ಕಬೆ, ಯವಕಪಾಡಿ, ಪಾಲೂರು, ಹಳೇತಾಲ್ಲೂಕು ಎಮ್ಮೆಮಾಡು, ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮಶೇಖರ್ ಅವರು ಕೋರಿದ್ದಾರೆ.

No comments

Post a Comment