ಕೇರಳ ಕಾಂಗ್ರೆಸ್ (ಎಂ) ನಾಯಕ ಕೆ.ಎಂ ಮಾಣಿ ನಿಧ‌ನ

No comments


ಕೇರಳ ಕಾಂಗ್ರೆಸ್ (ಎಂ) ನಾಯಕ ಕೆ.ಎಂ.ಮಾಣಿ ನಿಧನ

ಕೊಚ್ಚಿ, ಎ.9:ಕೇರಳದ ಮಾಜಿ ಹಣಕಾಸು ಸಚಿವ ಮತ್ತು ಕೇರಳ ಕಾಂಗ್ರೆಸ್ (ಎಂ) ನಾಯಕ ಕೆ.ಎಂ.ಮಾಣಿ (86) ಅಸೌಖ್ಯದಿಂದಾಗಿ ಇಲ್ಲಿನ  ಆಸ್ಪತ್ರೆಯೊಂದರಲ್ಲಿ ಮಂಗಳವಾರ ನಿಧನರಾದರು.

50 ವರ್ಷಗಳಿಂದ ಪಾಲ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದ ಮಾಣಿ ಅವರು ಪತ್ನಿ, ಪುತ್ರ ರಾಜ್ಯ ಸಭಾ ಸದಸ್ಯ ಜೋಶ್ ಕೆ. ಮಾಣಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

No comments

Post a Comment