ಏಪ್ರಿಲ್ ೨೯ ರಿಂದ ಮೇ ೩ ವರೆಗೆ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟ

No comments
ಕ್ರೀಡೆ 

ಏಪ್ರಿಲ್ 29 ರಿಂದ ಮೇ 3ರವರೆಗೆ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟ:
ಚೆಟ್ಟಳ್ಳಿ: ಕೊಂಡಂಗೇರಿ ಯುವಕ ಸಂಘ (ರಿ) ಇವರ ವತಿಯಿಂದ ಎರಡನೇ ವರ್ಷದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಸೂಪರ್ ಸೆವೆನ್  ಕಾಲ್ಚೆಂಡು ಪಂದ್ಯಾಟ  ಇದೇ ಏಪ್ರಿಲ್ ೨೯ ರಿಂದ ಮೇ ೩ರವರೆಗೆ ಕೊಂಡಂಗೇರಿಯ ಫಾಸಿಲ್ ಮೈದಾನದಲ್ಲಿ ನಡೆಯಲಿದೆ ಎಂದು ಕೊಡಗು ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟ ಸಂಸ್ಥಾಪಕ ಆಶಿಫ್ (ಆಪು) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..
ಕಳೆದ ವರ್ಷ ಮೂರ್ನಾಡುವಿನಲ್ಲಿ ನಡೆದ ಮೊದಲನೇ ವರ್ಷದ ಕಾಲ್ಚೆಂಡು ಪಂದ್ಯಾಟವು ಮೂರ್ನಾಡು ಕಾಲೇಜಿನ ಮೈದಾನದಲ್ಲಿ ನಡೆಸಿದ್ದವು, ಈ ಬಾರಿ ಕೊಂಡಂಗೇರಿಯಲ್ಲಿ ನಡೆಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರಥಮ , ದ್ವಿತೀಯ ,ತೃತೀಯ ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಗಳಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ನೀಡಲಿದ್ದೇವೆ.ಅಲ್ಲದೇ ಅತ್ಯುತ್ತಮ ಆಟಗಾರ, ಹೆಚ್ಚು ಗೋಲು ಬಾರಿಸುವ ಆಟಗಾರ, ಅತ್ಯುತ್ತಮ ತಂಡ, ಅತ್ಯುತ್ತಮ ಡಿಫೆಂಡರ್, ಹಾಗೂ ಎಮರ್ಜಿಂಗ್ ಆಟಗಾರ ಪ್ರಶಸ್ತಿಯನ್ನು ನೀಡಲಿದ್ದೇವೆ ಎಂದರು.
ಕಾರ್ಯಕ್ರಮದ ಸಮಾರೋಪ ಸಮಾರಂಭದ ದಿನ ಜಿಲ್ಲೆಯಲ್ಲಿ ಕ್ರೀಡೆ, ಶೈಕ್ಷಣಿಕ, ಹಾಗೂ ಸಾಮಾಜಿಕ ರಂಗದಲ್ಲಿ ಸಾಧನೆಗೈದ ಪ್ರತಿಭಾವಂತರನ್ನು ಸನ್ಮಾನಿಸಲಾಗುವುದು ಎಂದರು.
ಆಸಕ್ತ ತಂಡಗಳು ಏಪ್ರಿಲ್ ೨೨ ರೊಳಗೆ ತಂಡದ ಹೆಸರು ನೋಂದಣಿ ಮಾಡಬೇಕಾಗಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಇಸ್ಮಾಯಿಲ್ ಕಂಡಕರೆ, ೯೭೩೧೬೮೭೫೯೮, ನಾಸೀರ್, ೯೬೧೧೦೬೧೯೨೯
ಅಸ್ಕರ್, ೮೭೬೨೦೦೮೯೯೫ ಸಂಪರ್ಕಿಸಿಲು ಕೋರಿದ್ದಾರೆ.

No comments

Post a Comment