ಶತ್ರಘ್ನ ಸಿನ್ಹಾ ಕಾಂಗ್ರೆಸ್ ಸೇರ್ಪಡೆ

No comments


ಬಿಜೆಪಿ ಮಾಜಿ ಸಂಸದ, ಹಿರಿಯ ನಟ ಶತ್ರುಘ್ನ ಸಿನ್ಹಾ ಕಾಂಗ್ರೆಸ್‌ಗೆ ಸೇರ್ಪಡೆ

ಹೊಸದಿಲ್ಲಿ, ಎ.6: ಬಿಜೆಪಿಯ ಬಂಡಾಯ ನಾಯಕ ಹಾಗೂ ಹಿರಿಯ ನಟ ಶತ್ರುಘ್ನ ಸಿನ್ಹಾ ಶನಿವಾರ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಸಿನ್ಹಾ ಬಿಹಾರದ ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಚುನಾಯಿತರಾಗಿದ್ದಾರೆ.ಈ ಬಾರಿ ಸಿನ್ಹಾರನ್ನು ಕೈಬಿಟ್ಟಿರುವ ಬಿಜೆಪಿ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್‌ರನ್ನು ಕಣಕ್ಕಿಳಿಸಿದೆ.

ಸಿನ್ಹಾ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ಬಹಿರಂಗವಾಗಿ ಟೀಕಿಸುತ್ತಾ ಬಂದಿದ್ದರು.

ಸಿನ್ಹಾರನ್ನು ಪಕ್ಷಕ್ಕೆ ಬರಮಾಡಿಕೊಂಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ‘‘ಸಿನ್ಹಾ ಓರ್ವ ಚಾಣಾಕ್ಷ ನಾಯಕ. ದುರದೃಷ್ಟವಶಾತ್ ಈ ತನಕ ಅವರ ವ್ಯಕ್ತಿತ್ವಕ್ಕೆ ಒಪ್ಪದ ಪಕ್ಷದಲ್ಲಿದ್ದರು ಎಂದು ಹೇಳಿದ್ದಾರೆ.

ಸಿನ್ಹಾ ಪಕ್ಷ ಸೇರ್ಪಡೆ ವೇಳೆ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ

No comments

Post a Comment