*ರಕ್ತದಾನ ಜೀವದಾನವಾಗಿದೆ. ಎಸ್.ಎಸ್.ಎಫ್ ಉಪಾಧ್ಯಕ್ಷ ಶಾಫಿ ಸಹದಿ ಸೋಮವಾರಪೇಟೆ*
ಚೆಟ್ಟಳ್ಳಿ:
ರಕ್ತದಾನ ಜೀವದಾನವಾಗಿದೆ
ಜೀವನದಾನವಾಗಿದೆ.ಒಬ್ಬ ವ್ಯಕ್ತಿಯ ಜೀವನವನ್ನು ಉಳಿಸಿದರೆ ಮನುಕುಲದ ಜೀವನವನ್ನು ಉಳಿಸಿದ ಸಮಾನವಾಗಿದೆ ಎಂದು ಕೊಡಗು ಜಿಲ್ಲಾ ಎಸ್.ಎಸ್.ಎಫ್ ಉಪಾಧ್ಯಕ್ಷರಾದ ಶಾಫಿ ಸಹದಿ ಸೋಮವಾರಪೇಟೆ ಹೇಳಿದರು.
ರಕ್ತದಾನ ಜೀವದಾನವಾಗಿದೆ
ಜೀವನದಾನವಾಗಿದೆ.ಒಬ್ಬ ವ್ಯಕ್ತಿಯ ಜೀವನವನ್ನು ಉಳಿಸಿದರೆ ಮನುಕುಲದ ಜೀವನವನ್ನು ಉಳಿಸಿದ ಸಮಾನವಾಗಿದೆ ಎಂದು ಕೊಡಗು ಜಿಲ್ಲಾ ಎಸ್.ಎಸ್.ಎಫ್ ಉಪಾಧ್ಯಕ್ಷರಾದ ಶಾಫಿ ಸಹದಿ ಸೋಮವಾರಪೇಟೆ ಹೇಳಿದರು.
ಇಂಡಿಯನ್ ರೆಡ್ ಕ್ರಾಸ್ ಲೇಡಿಗ್ರೋಷನ್ ಸೊಸೈಟಿ ಆಸ್ಪತ್ರೆ ಮಂಗಳೂರು, ಮತ್ತು ಎಸ್.ಎಸ್.ಎಫ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಕೊಡಗು ಕುಶಾಲನಗರದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಪಾಳ್ಗೊಂಡು ಇವರು ಮಾತನಾಡಿದರು.
ಈ ರಕ್ತದಾನ ಶಿಬಿರದಲ್ಲಿ
ಜಾತಿ ,ಧರ್ಮ, ಪಂಗಡಗಳ ವ್ಯತ್ಯಾಸವಿಲ್ಲದೆ, ಎಲ್ಲರು ಸಹಕರಿಸಿದ್ದು ನಿಜಕ್ಕೂ ಶ್ಲಾಘನೀಯ ವಿಷಯ ಎಂದರು.
ಈ ರಕ್ತದಾನ ಶಿಬಿರದಲ್ಲಿ
ಜಾತಿ ,ಧರ್ಮ, ಪಂಗಡಗಳ ವ್ಯತ್ಯಾಸವಿಲ್ಲದೆ, ಎಲ್ಲರು ಸಹಕರಿಸಿದ್ದು ನಿಜಕ್ಕೂ ಶ್ಲಾಘನೀಯ ವಿಷಯ ಎಂದರು.
ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆಯಿದ್ದಲ್ಲಿ ಎಸ್.ಎಸ್.ಎಫ್ ಕೊಡಗು ಜಿಲ್ಲಾ ಸಮಿತಿಯು , ರಕ್ತದ ಪೂರೈಕೆಗೆ ಸಂಬಂಧಿಸಿದಂತೆ ಹೊಸ ತಂಡವನ್ನು ರಚಿಸಿದ್ದೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಎಸ್.ಎಸ್.ಎಫ್.ಅಧ್ಯಕ್ಷರಾದ ಅಜೀಜ್ ಸಖಾಫಿ ಮಾತನಾಡಿ,
ಎಸ್.ಎಸ್.ಎಫ್ ಕೊಡಗು ಜಿಲ್ಲಾ ಸಮಿತಿಯು ರಕ್ತದ ಬೇಡಿಕೆಯನ್ನು ಮನಗಂಡು ತುರ್ತು ಸಂದರ್ಭಗಳಲ್ಲಿ ಸಹಕಾರಿಯಾಗುವ ಇಂತಹ ವಿಚಾರಗಳನ್ನು ಜಿಲ್ಲಾದ್ಯಂತ ಹಮ್ಮಿಕೊಳ್ಳಯವ ಯೋಜನೆಯನ್ನುಟ್ಟುಕೊಂಡಿದ್ದೇವೆ ಎಂದರು..
ಎಸ್.ಎಸ್.ಎಫ್ ಕೊಡಗು ಜಿಲ್ಲಾ ಸಮಿತಿಯು ರಕ್ತದ ಬೇಡಿಕೆಯನ್ನು ಮನಗಂಡು ತುರ್ತು ಸಂದರ್ಭಗಳಲ್ಲಿ ಸಹಕಾರಿಯಾಗುವ ಇಂತಹ ವಿಚಾರಗಳನ್ನು ಜಿಲ್ಲಾದ್ಯಂತ ಹಮ್ಮಿಕೊಳ್ಳಯವ ಯೋಜನೆಯನ್ನುಟ್ಟುಕೊಂಡಿದ್ದೇವೆ ಎಂದರು..
ರೆಡ್ ಕ್ರಾಸ್ ಸಂಸ್ಥೆಯ ಮುಖ್ಯಸ್ಥರಾದ ಎಡ್ವರ್ಡ್ ವಾಸು ಮಾತನಾಡಿ, ರಕ್ತದಾನ ಮಹತ್ವ ಹಾಗೂ ರಕ್ತದಾನದಿಂದಾಗುವ ಲಾಭಗಳನ್ನು ವಿವರಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಬ್ದುಲ್ ಕರೀಂರವರು ಮಾಡಿದರು.ಜಿಲ್ಲೆಯ ಕುಶಾಲನಗರ ಹಾಗೂ ವಿರಾಜಪೇಟೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ೨೦೦ ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.
*ವಿರಾಜಪೇಟೆ* : ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಹಾಗೂ ಲೇಡಿಗ್ರೋಷನ್ ಆಸ್ಪತ್ರೆ ಇವರ ಆಶ್ರಯದಲ್ಲಿ ವಿರಾಜಪೇಟೆ ಅನ್ವಾರುಲ್ ಹುದಾ ದಹ್ವಾ ಕಾಲೇಜಿನಲ್ಲಿ ಕೊಡಗು ಜಿಲ್ಲಾ ಎಸ್.ಎಸ್.ಎಫ್ ವತಿಯಿಂದ ಬೃಹತ್ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಶ್ರಫ್ ಅಹ್ಸನಿ ಇಸ್ಲಾಮಿನ ಪ್ರಕಾರ ಶರೀರ ಹಾಗೂ ಅಂಗಾಂಗಳು ನಮಗೆ ಸೇರಿದಲ್ಲ ಅದು ದೇವರ ಸ್ವತ್ತು ಎಂದರು.
ಆದರೆ ಅತ್ಯಂತ ತುರ್ತು ಸಂದರ್ಭಗಳಲ್ಲಿ ರಕ್ತವನ್ನು ನೀಡುವುದು ಅನಿವಾರ್ಯವಾಗಿದೆ ಎಂದರು..
ಆದರೆ ಅತ್ಯಂತ ತುರ್ತು ಸಂದರ್ಭಗಳಲ್ಲಿ ರಕ್ತವನ್ನು ನೀಡುವುದು ಅನಿವಾರ್ಯವಾಗಿದೆ ಎಂದರು..
ವೈದ್ಯರಾದ ಡಾ:ರವಿ ಮಾತನಾಡಿ ಎಸ್.ಎಸ್.ಎಫ್ ಸಂಘಟನೆಯು ವಿದ್ಯಾರ್ಥಿ ಹಂತದಲ್ಲಿ ರಕ್ತದಾನ ದಂತಹಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ವಿಷಯ ಎಂದರು.
ಈ ಸಂದರ್ಭ ರಾಜ್ಯ ಎಸ್.ಎಸ್.ಎಫ್ ಅಧ್ಯಕ್ಷರಾದ ಯಾಕೂಬ್ ಮಾಸ್ಟರ್, ಮುಬಶ್ಶರ್ ಅಹ್ಸನಿ, ಜಿಲ್ಲಾ ಕಾರ್ಯದರ್ಶಿ ಮುಸ್ತಫಾ , ಇದ್ದರು.

No comments
Post a Comment