ಏ. 15 ರಂದು ರಾಜಾಸೀಟ್‌ನಲ್ಲಿ ಮತದಾನ ಮಹತ್ವ ಸಾರುವ ಬೃಹತ್ ಕ್ಯಾನ್ವಸ್ ರಚನೆ
ಮಡಿಕೇರಿ ಏ.೧೩ : ಮಡಿಕೇರಿಯ ರಾಜಾಸೀಟ್ ನಲ್ಲಿ ಏ.೧೫ ರಂದು ಸೋಮವಾರ ವಿಶ್ವಕಲಾ ದಿನಾಚರಣೆ ಅಂಗವಾಗಿ ಮಡಿಕೇರಿ ತಾಲೂಕು ಜಾನಪದ ಪರಿಷತ್ ಆಯೋಜಿಸಿರುವ ಮತದಾನದ ಮಹತ್ವ ವಿಷಯ ಕುರಿತ ಚಿತ್ರಕಲಾ ಸ್ಪಧೆ೯ಯನ್ನು ಜಿ.ಪಂ. ಮುಖ್ಯಕಾಯ೯ನಿವ೯ಹಣಾಧಿಕಾರಿ, ಜಿಲ್ಲಾ ಮತದಾರ ಶಿಕ್ಷಣ, ಸಹಭಾಗಿತ್ವ ಸಮಿತಿ ಅಧ್ಯಕ್ಷೆ ಲಕ್ಷ್ಮೀಪ್ರಿಯ ಉದ್ಘಾಟಿಸಲಿದ್ದಾರೆ.
ಬೆಳಗ್ಗೆ ೯. ೩೦ ಗಂಟೆಗೆ ಮಡಿಕೇರಿ ರಾಜಾಸೀಟ್ ನಲ್ಲಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಜಿಲ್ಲಾ ಮತದಾರ ಶಿಕ್ಷಣ, ಸಹಭಾಗಿತ್ವ ಸಮಿತಿ ಸಂಯುಕ್ತಾಶ್ರಯದಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ಹೆಸರಾಂತ ಚಿತ್ರಕಲಾವಿದ ಬಿ.ಆರ್.ಸತೀಶ್ ಮತದಾನದ ಮಹತ್ವ ಬಿಂಬಿಸುವ ಬೃಹತ್ ಕ್ಯಾನ್ವಸ್ ನ್ನು ರಚಿಸಲಿದ್ದು ಸಾವ೯ಜನಿಕರೂ ಪಾಲ್ಗೊಂಡು ಮತದಾನ ಮುಖ್ಯ ಎಂಬ ಸಂದೇಶದ ಕ್ಯಾನ್ವಸ್‌ನಲ್ಲಿ ಸಹಿ ಹಾಕಬಹುದಾಗಿದೆ. ಇದೇ ಸಂದಭ೯ ೫ ರಿಂದ ೭ ನೇ ತರಗತಿ, ೮ ರಿಂದ ೧೦ ನೇ ತರಗತಿ ಮತ್ತು ಸಾವ೯ಜನಿಕ ವಿಭಾಗದಲ್ಲಿ ಮತದಾನದ ಮಹತ್ವ ವಿಷಯ ಕುರಿತ ಚಿತ್ರಕಲಾ ಸ್ಪಧೆ೯ ಆಯೋಜಿತವಾಗಿದೆ ಎಂದು ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ ತಿಳಿಸಿದ್ದಾರೆ.
ಕಾಯ೯ಕ್ರಮದಲ್ಲಿ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಜಿ.ಆರ್.ರವಿಶಂಕರ್, ಕಾಯ೯ದಶಿ೯ ಎಂ.ಯು.ಮಹೇಶ್, ಜಿಲ್ಲಾ ಪತ್ರಕತ೯ರ ಸಂಘದ ಅಧ್ಯಕ್ಷೆ ಸವಿತಾರೈ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜಿಲ್ಲಾ ವಾತಾ೯ಧಿಕಾರಿ ಚಿನ್ನಸ್ವಾಮಿ, ಹಿರಿಯ ಜಾನಪದ ಕಲಾವಿದೆ ಸುಳ್ಳಿಮಾಡ ಗೌರು ನಂಜಪ್ಪ, ಮಡಿಕೇರಿ ತಾಲೂಕು ಜಾನಪದ ಪರಿಷತ್ ಪ್ರಧಾನ ಕಾಯ೯ದಶಿ೯ ಸಂಗೀತ ಪ್ರಸನ್ನ, ಖಜಾಂಚಿ ಅಂಬೆಕಲ್ ನವೀನ್ ಕುಶಾಲಪ್ಪ, ಮಡಿಕೇರಿಯ ಅರುಣ್ ಸ್ಟೋರ್ಸ್ ಮಾಲೀಕ ಎಂ.ಕೆ.ಅರುಣ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಮಮ್ತಾಜ್ ಪಾಲ್ಗೊಳ್ಳಲಿದ್ದಾರೆ.
ವಿಶ್ವಚಿತ್ರಕಲಾ ದಿನಾಚರಣೆ ಸಂದಭ೯ ಕಳೆದ ೩ ವಷ೯ಗಳಿಂದ ತಾಲೂಕು ಜಾನಪದ ಪರಿಷತ್ ಚಿತ್ರಕಲಾ ಸ್ಪಧೆ೯ ಆಯೋಜಿಸುತ್ತಿದ್ದು, ೨ ವಷ೯ಗಳಿಂದ ಮತದಾನದ ಮಹತ್ವ ಸಂಬಂಧಿತ ಚಿತ್ರಕಲೆ ಸ್ಪಧೆ೯ ನಡೆಸುತ್ತಿದೆ. ಬೃಹತ್ ಕ್ಯಾನ್ವಸ್ ಮೂಲಕ ಮತದಾನದ ಮಹತ್ವ ಸಾರಲಾಗುತ್ತಿದೆ ಎಂದೂ ಅನಿಲ್ ತಿಳಿಸಿದ್ದಾರೆ. ಅಂತೆಯೇ, ಗಾಯಕರಾದ ಟಿ.ಡಿ. ಮೋಹನ್ , ಕ್ಲಿಫಡ್೯ ಡಿಮೆಲ್ಲೋ ಅವರಿಂದ ಗಾಯನ ಕಾಯ೯ಕ್ರಮವೂ ಆಯೋಜಿತವಾಗಿದೆ.
ಈ ಬಾರಿ ಜಿಲ್ಲಾ ಮತದಾರ ಶಿಕ್ಷಣ, ಸಹಭಾಗಿತ್ವ ಸಮಿತಿ ವತಿಯಿಂದ ಮತದಾನದ ಮಹತ್ವ ಸಂಬಂಧಿತ ಕಾಟೂ೯ನ್ ಗಳ ಪ್ರದಶ೯ನವೂ ರಾಜಾಸೀಟ್ ನಲ್ಲಿ ಗಮನ ಸೆಳೆಯಲಿದೆ. ವಿದ್ಯಾಥಿ೯ಗಳು ಬೆಳಗ್ಗೆ ೯.೩೦ ಗಂಟೆಗೆ ರಾಜಾಸೀಟ್ ಗೆ ಬಂದು ಚಿತ್ರಕಲೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಸಾವ೯ಜನಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮತದಾನ ಜಾಗ?ತಿ ಕ್ಯಾನ್ವಸ್ ನಲ್ಲಿ ಸಹಿ ಹಾಕಿ ಪ್ರಜಾಪ್ರಭುತ್ವದ ಅತೀ ದೊಡ್ಡ ಹಬ್ಬವಾಗಿರುವ ಮತದಾನ ಸಂಬಂಧಿತ ಜಾಗೃತಿ ಸಂದೇಶಕ್ಕೆ ಬೆಂಬಲ ನೀಡುವಂತೆ ಪ್ರಕಟಣೆಯಲ್ಲಿ ಅನಿಲ್ ಕೋರಿದ್ದಾರೆ.
No comments
Post a Comment