ಮಸ್ಟರಿಂಗ್ ಕೇಂದ್ರಕ್ಕೆ ಮತಗಟ್ಟೆ ಅಧಿಕಾರಿಗಳು;ಕೊಡಗು ಬಸ್ ಮಾರ್ಗದ ವಿವರ

No comments

ಮಸ್ಟರಿಂಗ್ ಕೇಂದ್ರಕ್ಕೆ ಮತಗಟ್ಟೆ ಅಧಿಕಾರಿಗಳು : ಕೊಡಗು ಬಸ್ ಮಾರ್ಗದ ವಿವರ
ಮಡಿಕೇರಿ ಏ.೧೩ : ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಏ.೧೭ ರಂದು ಮಸ್ಟರಿಂಗ್ ಕಾರ್ಯ ನಡೆಯಲಿದ್ದು, ಮತಗಟ್ಟೆ ಅಧಿಕಾರಿಗಳನ್ನು ಕೇಂದ್ರ ಸ್ಥಾನದಿಂದ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಮಸ್ಟರಿಂಗ್ ಕೇಂದ್ರಕ್ಕೆ ಕರೆದುಕೊಂಡು ಹೋಗಲು ಜಿಲ್ಲಾಡಳಿತ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. ಮತಗಟ್ಟೆ ಅಧಿಕಾರಿಗಳನ್ನು ಮಸ್ಟರಿಂಗ್ ಕೇಂದ್ರಕ್ಕೆ ಕರೆದುಕೊಂಡು ಹೋಗುವ ಬಸ್ ಮಾರ್ಗದ ವಿವರ ಹೀಗಿದೆ.

ಮಡಿಕೇರಿ ತಾಲ್ಲೂಕು ಸಂತ ಮೈಕಲರ ಪ್ರೌಢಶಾಲೆಯ (ಗಾಂಧಿ ಮೈದಾನ) ಬೆಳಗ್ಗೆ ೬ ಗಂಟೆಗೆ ಬಸ್ ಹೊರಡಲಿದ್ದು, ಮೂರ್ನಾಡು ಮಾರ್ಗವಾಗಿ ವಿರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜಿಗೆ ತಲುಪಲಿದೆ.

ನಗರದ ಸಂತ ಮೈಕಲರ ಪ್ರೌಢ ಶಾಲೆಯಿಂದ ಬೆಳಗ್ಗೆ ೫ ಗಂಟೆಗೆ ಬಸ್ ಹೊರಡಲಿದ್ದು, ಬೆಟ್ಟಗೇರಿ, ನಾಪೋಕ್ಲು, ಪಾರಾಣೆ, ಬೆಳ್ಳುಮಾಡು, ಕಡಂಗ, ಕದನೂರು ಮಾರ್ಗವಾಗಿ ವಿರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು ತಲುಪಲಿದೆ. ಹಾಗೆಯೇ ಮತ್ತೊಂದು ಬಸ್ ಇದೇ ಸ್ಥಳದಿಂದ ಬೆಳಗ್ಗೆ ೫ ಗಂಟೆಗೆ ಹೊರಡಲಿದ್ದು, ಹಾಕತ್ತೂರು, ಮರಗೋಡು, ಸಿದ್ದಾಪುರ, ಅಮ್ಮತ್ತಿ ಮಾರ್ಗವಾಗಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲುಪಲಿದೆ.
ಕರಿಕೆ ಗ್ರಾಮ ಪಂಚಾಯಿತಿ ಕಚೇರಿಯಿಂದ ಬೆಳಗ್ಗೆ ೫ ಗಂಟೆಗೆ ಬಸ್ ಹೊರಡಲಿದ್ದು, ಭಾಗಮಂಡಲ, ಅಯ್ಯಂಗೇರಿ, ನೆಲಜಿ, ಬಲ್ಲಮಾವಟಿ, ಕಕ್ಕಬೆ, ಚೆಯ್ಯಂಡಾಣೆ ಮಾರ್ಗವಾಗಿ ವಿರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು ತಲುಪಲಿದೆ.

ಸಂತ ಮೈಕಲರ ಪ್ರೌಢ ಶಾಲೆ ಆವರಣದಿಂದ ಬೆಳಗ್ಗೆ ೫ ಗಂಟೆಗೆ ಬಸ್ ಹೊರಡಲಿದ್ದು ಕತ್ತಲೆಕಾಡು, ಕಡಗದಾಳು, ಚೆಟ್ಟಳ್ಳಿ, ಸಿದ್ದಾಪುರ, ಅಮ್ಮತ್ತಿ ಮಾರ್ಗವಾಗಿ ವಿರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು ತಲುಪಲಿದೆ.

ಭಾಗಮಂಡಲದಿಂದ ಬೆಳಗ್ಗೆ ೬.೩೦ ಗಂಟೆಗೆ ಬಸ್ ಹೊರಡಲಿದ್ದು, ಭಾಗಮಂಡಲ, ಚೆಟ್ಟಿಮಾನಿ, ಚೇರಂಬಾಣೆ, ಕಾರುಗುಂದ, ಬೆಟ್ಟಗೇರಿ, ಪಾಲೂರು, ಮೂರ್ನಾಡು ಮಾರ್ಗವಾಗಿ ವಿರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು ತಲುಪಲಿದೆ.

ಸಂಪಾಜೆ ನಾಡ ಕಚೇರಿಯಿಂದ ಬೆಳಗ್ಗೆ ೬.೩೦ ಗಂಟೆಗೆ ಬಸ್ ಹೊರಡಲಿದ್ದು, ಮದೆನಾಡು, ಕಾಟಕೇರಿ, ಮಡಿಕೇರಿ, ಮೂರ್ನಾಡು ಮಾರ್ಗವಾಗಿ ವಿರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು ತಲುಪಲಿದೆ.

ಭಾಗಮಂಡಲ ನಾಡ ಕಚೇರಿಯಿಂದ ಬೆಳಗ್ಗೆ ೬.೩೦ ಗಂಟೆಗೆ ಬಸ್ ಹೊರಡಲಿದ್ದು, ಚೇರಂಬಾಣೆ ಮಾರ್ಗವಾಗಿ ನಗರದ ಸಂತ ಜೋಸೆಫರ ಕಾನ್ವೆಂಟ್ ತಲುಪಲಿದೆ.

ನಾಪೋಕ್ಲು ನಾಡ ಕಚೇರಿಯಿಂದ ಬೆಳಗ್ಗೆ ೬.೩೦ ಗಂಟೆಗೆ ಬಸ್ ಹೊರಡಲಿದ್ದು, ಬೆಟ್ಟಗೇರಿ ಮಾರ್ಗವಾಗಿ ನಗರದ ಸಂತ ಜೋಸೆಫರ ಕಾನ್ವೆಂಟ್ ತಲುಪಲಿದೆ.
ಸಂಪಾಜೆ ನಾಡ ಕಚೇರಿಯಿಂದ ಬೆಳಗ್ಗೆ ೬.೩೦ ಗಂಟೆಗೆ ಬಸ್ ಹೊರಡಲಿದ್ದು, ಮದೆನಾಡು, ಕಾಟಕೇರಿ ಮಾರ್ಗವಾಗಿ ನಗರದ ಸಂತ ಜೋಸೆಫರ ಕಾನ್ವೆಂಟ್ ತಲುಪಲಿದೆ.

ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ಬಸ್ ನಿಲ್ದಾಣದಿಂದ ಬೆಳಗ್ಗೆ ೫ ಗಂಟೆಗೆ ಬಸ್ ಹೊರಡಲಿದ್ದು, ಶನಿವಾರಸಂತೆ, ಸೋಮವಾರಪೇಟೆ, ಮಾದಾಪುರ, ಸುಂಟಿಕೊಪ್ಪ, ಚೆಟ್ಟಳ್ಳಿ, ಸಿದ್ದಾಪುರ ಮಾರ್ಗವಾಗಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲುಪಲಿದೆ.

ಕುಶಾಲನಗರ ನಾಡ ಕಚೇರಿಯಿಂದ ಬೆಳಗ್ಗೆ ೫.೩೦ ಗಂಟೆಗೆ ಬಸ್ ಹೊರಡಲಿದ್ದು, ಸಿದ್ದಾಪುರ ಮಾರ್ಗವಾಗಿ ವಿರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು ತಲುಪಲಿದೆ.

ಸೋಮವಾರಪೇಟೆ ತಾಲ್ಲೂಕು ಕಚೇರಿಯಿಂದ ಬೆಳಗ್ಗೆ ೫.೩೦ ಗಂಟೆಗೆ ಬಸ್ ಹೊರಡಲಿದ್ದು, ಮದಲಾಪುರ, ಕೂಡಿಗೆ, ಕುಶಾಲನಗರ, ಸಿದ್ದಾಪುರ ಮಾರ್ಗವಾಗಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲುಪಲಿದೆ.

ಶನಿವಾರಸಂತೆ ನಾಡ ಕಚೇರಿಯಿಂದ ಬೆಳಗ್ಗೆ ೫.೩೦ ಗಂಟೆಗೆ ಬಸ್ ಹೊರಡಲಿದ್ದು, ಅಂಕನಳ್ಳಿ, ಆಲೂರುಸಿದ್ದಾಪುರ, ಕುಶಾಲನಗರ, ಸಿದ್ದಾಪುರ ಮಾರ್ಗವಾಗಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲುಪಲಿದೆ.
ಹೆಬ್ಬಾಲೆಯಿಂದ ಬೆಳಗ್ಗೆ ೬.೩೦ ಗಂಟೆಗೆ ಬಸ್ ಹೊರಡಲಿದ್ದು, ಹೆಬ್ಬಾಲೆ, ಕೂಡಿಗೆ, ಕುಶಾಲನಗರ ಮಾರ್ಗವಾಗಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲುಪಲಿದೆ.

ಶಿರಂಗಾಲದಿಂದ ಬೆಳಗ್ಗೆ ೬.೩೦ ಗಂಟೆಗೆ ಬಸ್ ಹೊರಡಲಿದ್ದು, ಶಿರಂಗಾಲ, ಹೆಬ್ಬಾಲೆ, ಕುಶಾಲನಗರ ಮಾರ್ಗವಾಗಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲುಪಲಿದೆ.

ಕುಶಾಲನಗರ ನಾಡ ಕಚೇರಿಯಿಂದ ಬೆಳಗ್ಗೆ ೬ ಗಂಟೆಗೆ ಬಸ್ ಹೊರಡಲಿದ್ದು, ಗುಡ್ಡೆಹೊಸೂರು, ನಂಜರಾಯಪಟ್ಟಣ, ನೆಲ್ಲಿ ಹುದಿಕೇರಿ ಮಾರ್ಗವಾಗಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲುಪಲಿದೆ.

ಕುಶಾಲನಗರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಬೆಳಗ್ಗೆ ೬.೩೦ ಗಂಟೆಗೆ ಬಸ್ ಹೊರಡಲಿದ್ದು, ಸುಂಟಿಕೊಪ್ಪ ಮಾರ್ಗವಾಗಿ ನಗರದ ಸಂತ ಜೋಸೆಫರ ಕಾನ್ವೆಂಟ್ ತಲುಪಲಿದೆ.

ಸೋಮವಾರಪೇಟೆ ತಾಲ್ಲೂಕು ಕಚೇರಿಯಿಂದ ಬೆಳಗ್ಗೆ ೫.೩೦ ಗಂಟೆಗೆ ಬಸ್ ಹೊರಡಲಿದ್ದು, ಮಾದಾಪುರ ಮಾರ್ಗವಾಗಿ ನಗರದ ಸಂತ ಜೋಸೆಫರ ಕಾನ್ವೆಂಟ್ ತಲುಪಲಿದೆ. ಕುಶಾಲನಗರ ನಾಡ ಕಚೇರಿಯಿಂದ ಬೆಳಗ್ಗೆ ೬ ಗಂಟೆಗೆ ಬಸ್ ಹೊರಡಲಿದ್ದು, ಸುಂಟಿಕೊಪ್ಪ ಮಾರ್ಗವಾಗಿ ನಗರದ ಸಂತ ಜೋಸೆಫರ ಕಾನ್ವೆಂಟ್ ತಲುಪಲಿದೆ.

ಕೊಡ್ಲಿಪೇಟೆ ನಾಡ ಕಚೇರಿಯಿಂದ ಬೆಳಗ್ಗೆ ೬ ಗಂಟೆಗೆ ಬಸ್ ಹೊರಡಲಿದ್ದು, ಸೋಮವಾರಪೇಟೆ, ಮಾದಾಪುರ ಮಾರ್ಗವಾಗಿ ನಗರದ ಸಂತ ಜೋಸೆಫರ ಕಾನ್ವೆಂಟ್ ತಲುಪಲಿದೆ.

ಶಿರಂಗಾಲದಿಂದ ಬೆಳಗ್ಗೆ ೬.೩೦ ಗಂಟೆಗೆ ಬಸ್ ಹೊರಡಲಿದ್ದು, ಶಿರಂಗಾಲ, ಹೆಬ್ಬಾಲೆ, ಕುಶಾಲನಗರ ಮಾರ್ಗವಾಗಿ ನಗರದ ಸಂತ ಜೋಸೆಫರ ಕಾನ್ವೆಂಟ್ ತಲುಪಲಿದೆ.

ವಿರಾಜಪೇಟೆ ತಾಲ್ಲೂಕಿಗೆ ಸಂಬಂಧಿಸಿದಂತೆ ವಿರಾಜಪೇಟೆ ಪಟ್ಟಣದ ತಾಲ್ಲೂಕು ಮೈದಾನದಿಂದ ಬೆಳಗ್ಗೆ ೬ ಗಂಟೆಗೆ ಬಸ್ ಹೊರಡಲಿದ್ದು, ಮೂರ್ನಾಡು ಮಾರ್ಗವಾಗಿ ನಗರದ ಸಂತ ಜೋಸೆಫರ ಕಾನ್ವೆಂಟ್ ತಲುಪಲಿದೆ.

ಶ್ರೀಮಂಗಲ ಬಸ್ ನಿಲ್ದಾಣದಿಂದ ಬೆಳಗ್ಗೆ ೬ ಗಂಟೆಗೆ ಬಸ್ ಹೊರಡಲಿದ್ದು, ಹುದಿಕೇರಿ, ಗೋಣಿಕೊಪ್ಪ, ವಿರಾಜಪೇಟೆ ಮೂರ್ನಾಡು ಮಾರ್ಗವಾಗಿ ನಗರದ ಸಂತ ಜೋಸೆಫರ ಕಾನ್ವೆಂಟ್ ತಲುಪಲಿದೆ.

ಕುಟ್ಟ ಬಸ್ ನಿಲ್ದಾಣದಿಂದ ಬೆಳಗ್ಗೆ ೬ ಗಂಟೆಗೆ ಬಸ್ ಹೊರಡಲಿದ್ದು, ಶ್ರೀಮಂಗಲ, ವಿರಾ

No comments

Post a Comment