ಏಪ್ರಿಲ್ ೨೭ ರಿಂದ ಮೇ ೨ ರವರೆಗೆ ಕೊಡಗಿನಲ್ಲಿ ಕೆ.ಸಿ.ಎಲ್ ಹಬ್ಬ

No comments

*ಏಪ್ರಿಲ್ ೨೭ ರಿಂದ ಮೇ ೨ರವರೆಗೆ ಕೊಡಗಿನಲ್ಲಿ ಕೆ.ಸಿ.ಎಲ್ ಹಬ್ಬ*
*ಈ ಸಲ ಕಪ್ ಯಾರ ಮಡಿಲಿಗೆ*
*ಕೆ.ಎಂ ಇಸ್ಮಾಯಿಲ್ ಕಂಡಕರೆ*
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಸಿದ್ದಾಪುರ ಸಿಟಿ ಬಾಯ್ಸ್ ಯುವಕ ಸಂಘದ ವತಿಯಿಂದ ನಡೆಯುತ್ತಿರುವ ಐಪಿಎಲ್ ಮಾದರಿಯ ಕೊಡಗು ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾಟ ನಾಲ್ಕನೇ ಆವೃತ್ತಿಯ ಪಂದ್ಯಾಟವು ಏಪ್ರಿಲ್ ೨೭ ರಿಂದ ಮೇ ೨ ರವರೆಗೆ ಸಿದ್ದಾಪುರ ಸಮೀಪದ ಕರಡಿಗೋಡಿನ ಕುಕ್ಕನೂರು ಕುಟುಂಬಸ್ಥರು ದಾನ‌ ನೀಡಿರುವ ಮೈದಾನದಲ್ಲಿ ಅಧ್ದೂರಿ ಕ್ರಿಕೆಟ್  ಪಂದ್ಯಾಟ ನಡೆಯಲಿದೆ.
ಜಿಲ್ಲೆಯ ಗ್ರಾಮೀಣ ಭಾಗದ ಬೆಳೆದ ಬರುತ್ತಿರುವ  ಕ್ರೀಡಾಪಟುಗಳಿಗೆ ಕಳೆದ ಮೂರು ವರ್ಷಗಳಿಂದ ಸಿಟಿ ಬಾಯ್ಸ್ ಯುವಕ ಸಂಘ ಕೆಸಿಎಲ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜನೆ ಮಾಡುವುದರ ಮುಖಾಂತರ ಎಲೆ ಮರೆ ಕಾಯಿಯಂತಿರುವ ಯುವ ಕ್ರಿಕೆಟ್ ಪಟುಗಳಿಗೆ ಸೂಕ್ತ ವೇದಿಕೆ ಒದಗಿಸುತ್ತಿದೆ.
ಪಂದ್ಯಾಟವು ಲೀಗ್ ಮಾದರಿಯಲ್ಲಿ ನಡೆಯಲಿದೆ. ಒಟ್ಟು ೧೪ ತಂಡಗಳು ಪ್ರಶಸ್ತಿಗೆ ಸೆಣಸಾಟ ನಡೆಸಲಿದೆ.ಜಿಲ್ಲೆಯ ವಿವಿಧ ಭಾಗದಿಂದ ೩೦೦ ಕ್ಕೂ ಹೆಚ್ಚು ಕ್ರೀಡಾಪಟುಗಳು ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಪಾಳ್ಗೊಳ್ಳಲು ಅರ್ಜಿಯನ್ನು ಸಲ್ಲಿಸಿದ್ದಾರೆ.
ಐಕಾನ್ ಆಟಗಾರ ಬಿಡ್ಡಿಂಗ್ ಏಪ್ರಿಲ್ ೬ ಹಾಗೂ ಆಟಗಾಯ ಬಿಡ್ಡಿಂಗ್ ಪ್ರಕ್ರಿಯೆ ಏಪ್ರಿಲ್ ೯ ರಂದು ನಡೆಯಲಿದೆ.
*ವಿಜೇತ ತಂಡಕ್ಕೆ ಒಂದು ಲಕ್ಷ ಬಹುಮಾನ*
ಕೆಸಿಎಲ್ ಕ್ರೀಡಾಕೂಟದಲ್ಲಿ ವಿಜೇತ ತಂಡಕ್ಕೆ ಒಂದು ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ ಮತ್ತು ದ್ವಿತೀಯ ಸ್ಥಾನ‌ ಪಡೆದ ತಂಡವು೫೦ ಸಾವಿರ ರೂ ನಗದು ಬಹುಮಾನವನ್ನು ಪಡೆಯಲಿದ್ದಾರೆ.
ಅಲ್ಲದೆ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಪಡೆಯುವ ಆಟಗಾರ ಸ್ಮಾರ್ಟ್ ಫೋನ್ ಸಿಗಲಿದೆ.
*ನೂತನ ಮೈದಾನ*
ನಾಲ್ಕನೇ ಆವೃತ್ತಿಯ ಕೆಸಿಎಲ್ ಕ್ರಿಕೆಟ್ ಪಂದ್ಯಾಟವು ಸಿದ್ದಾಪುರದ ಕರಡಿಗೋಡುವಿನ ಕುಕ್ಕನೂರು ಪಿ.ಪುರುಷೋತ್ತಮ ಹಾಗೂ ದೇವ ಪ್ರಕಾಶ್ ಅವರಿಗೆ ಸೇರಿದ ಜಾಗದಲ್ಲಿ ನಡೆಯಲಿದೆ.ಈಗಾಗಲೇ ನೂತನ ಮೈದಾನದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಏಳು ಎಕರೆ ಪ್ರದೇಶದಲ್ಲಿ ವಿಶಾಲವಾದ ಮೈದಾನ ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ಏರ್ಪಡಿಸಲಾಗಿದ್ದು ಗುಣಮಟ್ಟದ ಪಿಚ್ ತಯಾರಾಗುತ್ತಿದೆ.
*ಬಾಕ್ಸ್*
*ಕೆಸಿಎಲ್ ೪ನೇ ಆವೃತ್ತಿಯ ತಂಡಗಳು*
ಗೋಣಿಕೊಪ್ಪಲುವಿನ ಬ್ಲ್ಯಾಕ್ ತಂಡರ್ ,ಆಶ್ಯಸ್ ಗೋಣಿಕೊಪ್ಪ, ಸಿದ್ದಾಪುರದ ಟೀಂ ಕೂಲ್,ಫಯರ್ ಟೈಗರ್ಸ್, ಮಡಿಕೇರಿಯ ಸ್ಪೋರ್ಟ್ಸ್ ವರ್ಲ್ಡ್, ತ್ಯಾಗ್ ಬಾಯ್ಸ್, ನೆಲ್ಲಿಹುದಿಕೇರಿಯ ಝಲ್ಲಾ ಕ್ರಿಕೆಟರ್ಸ್, ಗ್ರೀನ್ ಕ್ರಿಕೆಟರ್ಸ್, ರೇಂಬೋ ಕ್ರಿಕೆಟರ್ಸ್, ಕಳತ್ಮಾಡುವಿನ ವಿರಾಟ್ ಕ್ರಿಕೆಟರ್ಸ್ , ಕರಡಿಗೋಡಿನ ಕುಕ್ಕನೂರು ರಾಯಲ್, ಬೆಟ್ಟದಕಾಡುವಿನ ಬ್ಲ್ಯಾಕ್ ವಾರಿಯರ್ಸ್, ತ್ಯಾಗತ್ತೂರಿನ‌ ಕೂರ್ಗ್ ಫ್ರೆಂಡ್ಸ್, ಹಾಗೂ ಮೂರ್ನಾಡುವಿನ ಎಸ್.ಆರ್.ಎಸ್.ತಂಡಗಳು ಭಾಗವಹಿಸಿಲಿದೆ.
*ಬಾಕ್ಸ್*
ಹದಿನಾಲ್ಕು ತಂಡಗಳನ್ನು ಎರಡು ಗುಂಪಿನಲ್ಲಿ ತಲಾ ಏಳು ತಂಡಗಳಾಗಿ ಆಡಿಸಲಾಗುತ್ತಿದೆ.ಎರಡು ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ಸೆಮಿಸ್ಗೆ ಅರ್ಹತೆ ಪಡೆಯುತ್ತಾರೆ.
ಲೀಗ್ ಹಾಗೂ ಸೆಮಿಫೈನಲ್ ಪಂದ್ಯಾಟವು ೦೮ ಓವರ್ ಹಾಗೂ ಫೈನಲ್ ಪಂದ್ಯ ೧೦ ಓವರ್ ಪಂದ್ಯಾಟವಾಗಿದೆ.
ಏಪ್ರಿಲ್ ೨೭ ರಂದು ಕೆಸಿಎಲ್ ನಾಲ್ಕನೇ ಆವೃತ್ತಿಯನ್ನು ಅಂತರಾಷ್ಟ್ರೀಯ ಅಥ್ಲೀಟ್ ಪಟು ತೀತಮಾಡ ಅರ್ಜುನ್ ದೇವಯ್ಯ ಉದ್ಘಾಟಿಸಲಿದ್ದಾರೆ.ಕೊಡಗು ಪ್ರೆಸ್ ತಂಡ ಹಾಗೂ ಕೊಡಗು ಪೊಲೀಸ್ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ..
*ಬಾಕ್ಸ್*
ಕಳೆದ ಮೂರು ಆವೃತ್ತಿಯ ಚಾಂಪಿಯನ್ ಹಾಗೂ ರನ್ನರ್ ಅಪ್ ತಂಡಗಳು.
೨೦೧೬:ಟೀಂ ಕೂಲ್ ಸಿದ್ದಾಪುರ ವಿನ್ನರ್
ರಂಜಿತ್ ಫ್ರೆಂಡ್ಸ್ ಕುಶಾಲನಗರ ರನ್ನರ್
೨೦೧೭:ಲಯನ್ಸ್ ಸಿದ್ದಾಪುರ ವಿನ್ನರ್
ಫಯರ್ ಟೈಗರ್ಸ್ ಸಿದ್ದಾಪುರ ರನ್ನರ್
೨೦೧೮:ಫಯರ್ ಟೈಗರ್ಸ್ ಸಿದ್ದಾಪುರ ವಿನ್ನರ್
ವಿರಾಜಪೇಟೆ ರನ್ನರ್
*ಕೋಟ್*
ಕೆಸಿಎಲ್ ನಾಲ್ಕನೇ ಆವೃತ್ತಿಯ ಮೈದಾನ ಗುಣಮಟ್ಟದ ಕಾಮಗಾರಿ ಅಂತಿಮ ಹಂತದಲ್ಲಿದೆ.ವೀಕ್ಷಕರಿಗಾಗಿ ಪ್ರತ್ಯೇಕ ಗ್ಯಾಲರಿ, ಹಾಗೂ ಪಾರ್ಕಿಂಗ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
*ರೆಜಿತ್ ಕುಮಾರ್ ಗುಹ್ಯ*
*ಕೆಸಿಎಲ್ ಸಮಿತಿ ಅಧ್ಯಕ್ಷರು*

No comments

Post a Comment