ನವದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಕಲಿ ಖಾತೆಗಳನ್ನು ನಿರ್ಮೂಲನೆ ಮಾಡುತ್ತಿರುವ ಪ್ರಮುಖ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಇಂದು ಕಾಂಗ್ರೆಸ್‌ನ ಐಟಿ ವಿಭಾಗಕ್ಕೆ ಸಂಬಂಧಿಸಿದ 687 ವೈಯಕ್ತಿಕ ಖಾತೆಗಳು ಮತ್ತು ಪೇಜ್‌ಗಳನ್ನು ತೆಗೆದುಹಾಕಿದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿಚಾರವನ್ನು ರಾಜಕೀಯದ ವಸ್ತುವಿಷಯವಾಗಿ ಬಳಸಿಕೊಂಡ, ಬಿಜೆಪಿ ಹಾಗೂ ಕಾಂಗ್ರೆಸ್ ಪರವಾಗಿ ಅನಧಿಕೃತ ಚಟುವಟಿಕೆ ನಡೆಸಿದ ಆಧಾರದ ಈ ಪೇಜ್‌ಗಳ ಮೇಲೆ ಫೇಸ್‌ಬುಕ್ ಈ ಕ್ರಮ ಕೈಗೊಂಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಫೇಸ್‌ಬುಕ್, ವಸ್ತುವಿಷಯ ಮತ್ತು ಸುಳ್ಳು ಸುದ್ದಿಗಳ ಕಾರಣಕ್ಕೆ ಸದ್ಯ ಈ ಖಾತೆಗಳು ಮತ್ತು ಪೇಜ್‌ಗಳನ್ನು ತೆಗೆದು ಹಾಕಿಲ್ಲ. ಬದಲಿಗೆ, ಅನಧಿಕೃತ ಮತ್ತು ಅಸಮಂಜಸ ಚಟುವಟಿಕೆಗಳ ಆಧಾರದ ಮೇಲೆ ತೆಗೆದು ಹಾಕಲಾಗಿದೆ ಎಂದು ಹೇಳಿದೆ. ಭಾರತದಲ್ಲಿ ಸದ್ಯ ಲೋಕಸಭೆ ಚುನಾವಣೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸುಳ್ಳು ಸುದ್ದಿಗಳನ್ನು ತಡೆಯಲು ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳು ಹಲವು ಮಹತ್ತರ ಕ್ರಮಗಳನ್ನು ಕೈಗೊಂಡಿವೆ. ಇದರ ಭಾಗವಾಗಿ ಫೇಸ್‌ಬುಕ್ ಇಂದು 687 ಖಾತೆಗಳನ್ನು, ಪೇಜ್‌ಗಳನ್ನು ತೆಗೆದುಹಾಕಿದೆ. ಈ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ಸದ್ಯ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ.

No comments
Post a Comment