ಕಾರಿನ ಸ್ಟೆಪ್ನಿ ಟೈರ್ ನೊಳಗಿತ್ತು 2ಕೋಟಿ 30ಲಕ್ಷ

No comments

ಶಿವಮೊಗ್ಗ : ರಾಜ್ಯದಲ್ಲಿ ಲೋಕಸಭೆ  ಚುನಾವಣೆಯ ಎರಡನೇ ಹಂತದ ಮತದಾನಕ್ಕೂ  ಮುನ್ನ ಐಟಿ ಅಧಿಕಾರಿಗಳು ಶನಿವಾರ ಭರ್ಜರಿ  ಕಾರ್ಯಾಚರಣೆ ನಡೆಸಿದ್ದಾರೆ.
ಸ್ಟೆಪ್ನಿ ಟೈರ್‍ನೊಳಗೆ ಇಟ್ಟಿದ್ದ 2 ಕೋಟಿ 30 ಲಕ್ಷ ರೂಪಾಯಿಯನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಹಣವನ್ನು ಶಿವಮೊಗ್ಗ ಹಾಗೂ ಭದ್ರಾವತಿಗೆ ಚುನಾವಣೆಗೆ ಹಂಚಿಕೆ ಮಾಡಲು ಕೊಂಡೊಯ್ಯುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.ಬೆಂಗಳೂರಿನಿಂದ ಶಿವಮೊಗ್ಗ ಹಾಗೂ ಭದ್ರಾವತಿಗೆ ಹಣವನ್ನು ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಐಟಿ ಅಧಿಕಾರಿಗಳು ವಾಹನವನ್ನು ಅಡ್ಡಗಟ್ಟಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಕಾರಿನ ಸ್ಟೆಪ್ನಿ ಟೈರ್ ನಲ್ಲಿ 2000 ರೂ.ಗಳ ನೋಟಿನ ಕಂತೆಯೇ ಸಿಕ್ಕಿದೆ. ಈ ಟೈರಿನಲ್ಲಿ 2.30 ಕೋಟಿ ರೂ. ಸಿಕ್ಕಿದೆ. ಈ ಹಣವನ್ನು ಟೈರ್ ಒಳಗಡೆಯಿಂದ ತೆಗೆಯುತ್ತಿರುವ ದೃಶ್ಯಾವಳಿಯನ್ನು ಐಟಿ ಇಲಾಖೆ ಬಿಡುಗಡೆ ಮಾಡಿದೆ.

No comments

Post a Comment