ವಿಜಯಶಂಕರ್ ವಿರುದ್ದ ಕೋರ್ಟ್ ನಲ್ಲಿ ದೂರು

No comments

ಮೈಸೂರು ಮಾ.೨೭ : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ನಾಮಪತ್ರದಲ್ಲಿನ ಗೊಂದಲ ಆರೋಪಕ್ಕೆ ಸಂಬಂಧಿಸಿದಂತೆ ನಾಳೆ ಹೈಕೋರ್ಟ್ ನಲ್ಲಿ ದೂರು ದಾಖಲಿಸುವುದಾಗಿ ಬಿಜೆಪಿ ಹೇಳಿದೆ.
ಮೈಸೂರಿನಲ್ಲಿ ಬುಧವಾರ ಮಧ್ಯಾಹ್ನ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿಯ ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಹೇಳಿದಿಷ್ಟು.
ಜಿಲ್ಲಾಧಿಕಾರಿಗಳ ಮೇಲೆ ಆಡಳಿತ ಸರ್ಕಾರ ಪ್ರಭಾವ ಬೀರ್ತಿದೆ ಅನ್ನೋ ಅನುಮಾನ ಇದೆ. ನಾವು ಸಿ.ಹೆಚ್.ವಿಜಯಶಂಕರ್ ನಾಮಪತ್ರದ ಬಗ್ಗೆ ಹೈಕೋರ್ಟ್ ನಲ್ಲಿ ಅರ್ಜಿ ಹಾಕ್ತೆವೇ. ನಾಮಪತ್ರ ಸಲ್ಲಿಕೆ ವೇಳೆ ಠೇವಣಿ ಹಣವನ್ನೇ ಮರೆತು ಬಂದ ಮಾಹಿತಿ ಇದೆ. ಸಚಿವ ಸಾ.ರಾ.ಮಹೇಶ್ ಠೇವಣಿ ಹಣ ಪಾವತಿಸಿದರು ಎಂಬ ಮಾಹಿತಿ ಬಂದಿದೆ. ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಮಾನಸಿಕ ಸಂತುಲತೆ ಕಳೆದುಕೊಳ್ಳುತ್ತಿದ್ದಾರೆ. ಒಂದು ಕಡೆ ಮೋದಿ ಭಯ, ಮತ್ತೊಂದು ಕಡೆ ಜನತಾ ದಳದ ಭಯ. ಯುದ್ದಕ್ಕೆ ಮುಂಚೆಯೇ ಸೋಲಿನ ಆಬಾಸ ಕಾಡುತ್ತಿದೆ. ಇಷ್ಟಾದರು ವಿಜಯಶಂಕರ್ ಕಣದಲ್ಲಿ ಇರಬೇಕೆಂಬುದು ನಮ್ಮ ಆಶಯ.
ನಮಗೆ ಪುಕ್ಸಟೆ ಗೆಲ್ಲುವ ಆಸೆ ಇಲ್ಲ. ನಮಗೆ ಚುನಾವಣೆಯಲ್ಲಿ ಸೋಲಿಸುವ ಆಸೆ ಇದೆ. ನಾವು ಸೋಲಿಸುತ್ತಿರೋದು ಸಿದ್ದರಾಮಯ್ಯರನ್ನ. ನಾವು
ಸೋಲಿಸುತ್ತಿರೋದು ಸಿದ್ದರಾಮಯ್ಯ ಅವ್ರ ಅಹಂಕಾರವನ್ನ, ದುರಾಂಕರವನ್ನ. ನಾನು ವಿಜಯಶಂಕರ್ ೬ ವರ್ಷ ಜೊತೆಯಲ್ಲಿದವ್ರು. ವಿಧಾನಸಭೆಯಲ್ಲಿ ೬ ವರ್ಷ ಅಕ್ಕಪಕ್ಕ ಕುಳಿತಿದ್ದೇವು. ಆತನ ನಾಮಪತ್ರ ತಿರಸ್ಕೃತವಾಗಲಿ ಎನ್ನುವ ನೀಚ ನಾನಾಲ್ಲ. ಆದರೆ ಕಾನೂನಿನ ಪ್ರಕಾರ ನಾವು ಈ ಬಗ್ಗೆ ಹೋರಾಟ ಮಾಡ್ತೀವಿ ಎಂದು ಗೋ.ಮಧುಸೂದನ್ ತಿಳಿಸಿದರು.

No comments

Post a Comment