ಮಾಲ್ದಾರೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸಿ ಪಿ ಐ ಎಂ ಒತ್ತಾಯ
ಸಿದ್ದಾಪುರ :- ಸಿದ್ದಾಪುರ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗದ ಸಮಸ್ಯೆಯಿಂದ
ಹಲವು ವರ್ಷಗಳಿಂದಲೂ ಎರಡು ಪಂಚಾಯತಿಯ ಗ್ರಾಮಸ್ಥರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಇದೀಗ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗ್ಗೆ ಹರಿಸಲು ಆರೆಂಜ್ ಕೌಂಟ್ ಸಂಸ್ಥೆ ಎರಡು ಪಂಚಾಯಿತಿಗಳ ಅನುಕೂಲಕ್ಕಾಗಿ ಜಾಗ ಖರೀದಿ ಮಾಡಿ ಉಧಾರವಾಗಿ ನೀಡಿದ್ದು
ಆದಷ್ಟು ಬೇಗ ಉದ್ದೇಶಿತ ಜಾಗದಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಬೇಕೆಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎಚ್ ಬಿ ರಮೇಶ್ ಒತ್ತಾಯಿಸಿದ್ದಾರೆ.
ಸಿದ್ದಾಪುರದಲ್ಲಿ ಕರೆದ ಪತ್ರಿಕೆ ಗೋಷ್ಟಿಯಲ್ಲಿ ಮಾತನಾಡಿ.
ಹಲವು ವರ್ಷಗಳಿಂದಲೂ ತ್ಯಾಜ್ಯದ ಸಮಸ್ಯೆ ಮಿತಿಮೀರಿತ್ತು
ಪಕ್ಷದ ವತಿಯಿಂದ ಹಲವು ಬಾರಿ ಪ್ರತಿಭಟನೆ ಮಾಡಲಾಗಿತ್ತು
ವಿರಾಜಪೇಟೆ ಕ್ಷೇತ್ರದ ಶಾಸಕ ಎ ಎಸ್ ಪೊನ್ನಣ್ಣ ಅವರ ಮುತುವರ್ಜಿಯಿಂದ
ಮಾಲ್ದಾರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಘಟಕ ನಿರ್ಮಾಣವಾಗುತ್ತಿದ್ದು
ಎರಡು ಗ್ರಾಮದ ಸಮಸ್ಯೆ ಬಗೆಹರಿಯಲಿದೆ.
ಸಮಸ್ಯೆ ಬಗೆಹರಿಸಲು ಮುಂದಾಗದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿರುವ ಪಟಬದ್ದ ಹಿತಾ ಶಕ್ತಿಗಳು
ಮಾಲ್ದಾರೆ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಜನರನ್ನ ದಾರಿ ತಪ್ಪಿಸುತ್ತಿದೆ.
ಅಧಿಕಾರಿಗಳು ಕೂಡಲೇ ಉದ್ದೇಶಿತ ಜಾಗದಲ್ಲಿ ವೈಜ್ಞಾನಿಕ ಘಟಕ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.
ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯರುಗಳಾದ ಪಿ ಆರ್ ಭರತ್, ಕುಟ್ಟಪ್ಪ, ಶಾಜಿ ಉಪಸ್ಥಿತರಿದರು
No comments
Post a Comment