ಸಹಕಾರ ತರಬೇತಿಗೆ ಅರ್ಜಿ ಆಹ್ವಾನ


ಮಡಿಕೇರಿ ಜೂ.13(ಕರ್ನಾಟಕ ವಾರ್ತೆ):-ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ರಾಜ್ಯದ ಮಡಿಕೇರಿ, ಬೆಂಗಳೂರು, ಮೈಸೂರು, ಮೂಡಬಿದರೆ, ಶಿವಮೊಗ್ಗ, ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ಈ ಸ್ಥಳಗಳಲ್ಲಿ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ ತರಬೇತಿ ಸಂಸ್ಥೆಗಳನ್ನು ನಡೆಸಲಾಗುತ್ತಿದೆ. ಈ ತರಬೇತಿ ಸಂಸ್ಥೆಗಳ ಮೂಲಕ ಸಹಕಾರ ಸಂಘ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಮಾತ್ರ “6 ತಿಂಗಳು/ 180 ದಿನಗಳ” ಅವಧಿಯ ದೂರ ಶಿಕ್ಷಣದ ಮೂಲಕ “ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್” ತರಬೇತಿಯನ್ನು ಜುಲೈ ಮಾಹೆಯಿಂದ ಪ್ರಾರಂಭಿಸಲಾಗುತ್ತಿದ್ದು, ಈ ತರಬೇತಿ ಪಡೆಯಲಿಚ್ಚಿಸುವ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ದೂರ ಶಿಕ್ಷಣ ಡಿ.ಸಿ.ಎಂ., ತರಬೇತಿಯ ಅರ್ಜಿ ಫಾರಂ ಮತ್ತು ಕೈಪಿಡಿ ಪುಸ್ತಕವನ್ನು ಕೆ.ಐ.ಸಿ.ಎಂ. ನಗರದ ತರಬೇತಿ ಸಂಸ್ಥೆ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮತ್ತು ಹಾಸನ ಜಿಲ್ಲಾ ಸಹಕಾರ ಯೂನಿಯನ್ಗಳಿಂದ ಪಡೆಯಬಹುದು