ಮಡಿಕೇರಿ: ಪ್ರತಿಷ್ಠಿತ ಸರಕಾರಿ ಮುಸ್ಲಿಂ ಧಾರ್ಮಿಕ ಸಂಸ್ಥೆಯಾದ ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರಾಗಿ ಗೋಣಿಕೊಪ್ಪಲು ಸಮೀಪದ ಬೆಮ್ಮತ್ತಿ-ಧನುಗಾಲದವರಾದ, ಅಲ್ಪಸಂಖ್ಯಾತ ಮುಖಂಡ ಕೆ.ಎಂ.ಅಬ್ದುಲ್ ರಹಿಮಾನ್ (ಬಾಪು) ಅವರನ್ನು ಸರಕಾರ ನೇಮಕಗೊಳಿಸಿ ಅದೇಶ ಹೊರಡಿಸಿದೆ. ರಾಜ್ಯ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈ ಸಮಿತಿಯ ಅಧ್ಯಕ್ಷರನ್ನಾಗಿ ಕೆ.ಎ.ಯಾಕುಬ್ ಅವರನ್ನು ಸರಕಾರ ನೇಮಿಸಿತು. ನಂತರ ಲೋಕಸಭಾ ಚುನಾವಣೆಯ ನೀತಿ ಸಂಹಿತೆಯಿಂದಾಗಿ ಪೂರ್ಣಪ್ರಮಾಣದ ಜಿಲ್ಲಾ ಸಮಿತಿಯನ್ನು ಘೋಷಿಸಲು ಸರಕಾರಕ್ಕೆ ಸಾಧ್ಯವಾಗಿರಲಿಲ್ಲ. ಇದೀಗ ಚುನಾವಣಾ ನೀತಿ ಸಂಹಿತೆ ಕೊನೆಗೊಂಡ ಕೂಡಲೆ ಸರಕಾರದ ಪರವಾಗಿ ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನೇಮಕ ಆದೇಶವನ್ನು ಹೊರಡಿಸಿದ್ದಾರೆ. ನೂತನ ಜಿಲ್ಲಾ ಸಮಿತಿ ಪಟ್ಟಿಯಲ್ಲಿ ಜಿಲ್ಲೆಯ ವಿವಿದೆಡೆಯ 20 ಮಂದಿ ಅಲ್ಪಸಂಖ್ಯಾತ ಪ್ರಮುಖರು ಸ್ಥಾನ ಪಡೆದುಕೊಂಡಿದ್ದಾರೆ. ಕೆ.ಎಂ.ಅಬ್ದುಲ್ ರಹಿಮಾನ್ (ಬಾಪು) ಅವರು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿ ಸೇರಿದಂತೆ ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷರಾಗಿ ಕೆ.ಎಂ.ಅಬ್ದುಲ್ ರಹಿಮಾನ್ (ಬಾಪು) ನೇಮಕ

No comments
Post a Comment