ಹೊಸದಿಲ್ಲಿ, ಜೂ.11: ಬಿಜೆಪಿಯ ಸಂಸದ ಡಾ.ವೀರೇಂದ್ರ ಕುಮಾರ್ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಓರ್ವ ಹಂಗಾಮಿ ಸ್ಪೀಕರ್ ಆಗಿ ಡಾ.ಕುಮಾರ್ ಅವರು ಲೋಕಸಭೆಗೆ ಹೊಸತಾಗಿ ಚುನಾಯಿತರಾಗಿರುವ ಜನಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ನೂತನ ಸ್ಪೀಕರ್ ಆಯ್ಕೆಗಾಗಿ ನಡೆಯಲಿರುವ ಲೋಕಸಭೆಯ ಮೊದಲ ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ವೀರೇಂದ್ರ ಕುಮಾರ್ ಮಧ್ಯಪ್ರದೇಶದ ಟಿಕಾಮ್‌ಗಢದ ಸಂಸತ್ ಸದಸ್ಯರಾಗಿದ್ದಾರೆ. 17ನೇ ಲೋಕಸಭೆಯ ಮೊದಲ ಅಧಿವೇಶನ ಜೂ.17 ರಂದು ಆರಂಭವಾಗಲಿದೆ. ನೂತನ ಸಂಸತ್ ಸದಸ್ಯರು ಮೊದಲೆರಡು ದಿನ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ಜೂ.19 ರಂದು ನೂತನ ಸ್ಪೀಕರ್ ಆಯ್ಕೆ ನಡೆಯಲಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಜೂ.20 ರಂದು ಬೆಳಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್‌ನಲ್ಲಿ ಸಂಸತ್ತಿನ ಎರಡೂ ಸದನಗಳ ಜಂಟಿ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಬಿಜೆಪಿ ಸಂಸದ ಡಾ. ವೀರೇಂದ್ರ ಕುಮಾರ್ ಲೋಕಸಭೆಯ ಹಂಗಾಮಿ ಸ್ಪೀಕರ್

No comments
Post a Comment