ಬ್ಲಡ್ ಡೋನರ್ಸ್ ಮಂಗಳೂರು(ರಿ) ತಂಡದಿಂದ ಬಡ ಕುಟುಂಬದ ಮನೆ ನಿರ್ಮಾಣಕ್ಕೆ ಕೈ ಜೋಡಿಸಲು ಮನವಿ
ಧಾನವು ಎಲ್ಲಾ ಆಪತ್ತುಗಳಿಂದ ನಮ್ಮನ್ನು ರಕ್ಷಿಸುತ್ತದೆ
ಸಹಾಯ ನೀಡಲು ಬಯಸುವವರು ಈ ಖಾತೆಗೆ ಹಣ ಜಮೆ ಮಾಡಬಹುದು.
Account details:
Blood Donor's Manglore
Karnataka Bank
A/c No:6992000100011701
Someshwara Branch
IFSE Code:KARB0000699
ಹೆಚ್ಚಿನ ಮಾಹಿತಿಗಾಗಿ:
+919731325670
+919845707090
+919108582527
+918867777771
ಮುಡಿಪು ಜೂನ್ 13
ಬ್ಲಡ್ ಡೋನರ್ಸ್ ಮಂಗಳೂರು (ರಿ)ಕಳೆದ ಐದು ವರ್ಷಗಳಿಂದ ನಿರಂತರವಾಗಿ ಸಾಮಾಜಿಕ ಕ್ಷೇತ್ರಗಳಲ್ಲಿ ಸಹಾಯ ಸಹಕಾರದ ಮೂಲಕ ಅರಿವು ಮತ್ತು ಜಾಗೃತಿ ಮೂಡಿಸಿ, ನಮ್ಮ ತಂಡದ ಕೈಲಾದ ಸಹಾಯ ರಕ್ತದಾನ ಶಿಬಿರ, ಜಾಗೃತಿ ಶಿಬಿರ, ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ, ಬಡಕುಟುಂಬಕ್ಕೆ ಆಹಾರ ಧಾನ್ಯ ವಿತರಣೆ, ರೋಗಿಗಳ ಚಿಕಿತ್ಸಾ ವೆಚ್ಚಕ್ಕೆ ಧನಸಹಾಯ ಮೊದಲಾದ ಕಾರ್ಯಕ್ರಮದ ಮೂಲಕ ಕರಾವಳಿ ಭಾಗದಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸುವುದರೊಂದಿಗೆ ಕರ್ನಾಟಕ ಕೇರಳ ಹಾಗೂ ದೇಶ ವಿದೇಶಗಳಲ್ಲೂ ಕಾರ್ಯಚರಿಸುತ್ತಿದೆ.
ಈ ನಮ್ಮ ತಂಡ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ 5 ನೇ ವರ್ಷದ ಸಂಭ್ರಮದ ಬಳಿಕ 6 ನೇ ವಾರ್ಷಿಕ ಸಂಭ್ರಮದಲ್ಲಿ ನೆಲೆನಿಂತಿದೆ.ಈ ಸಲುವಾಗಿ ಮೂರು ಅರ್ಹ ಬಡ ಕುಟುಂಬಕ್ಕೆ ಮನೆ ನಿರ್ಮಾಣ ಮಾಡಲು ತೀರ್ಮಾನಿಸಿತ್ತು. ಮುಡಿಪು ಸಮೀಪದ ಒಂದು ಯತೀಮ್ ಕುಟುಂಬಕ್ಕೆ ಕುಟುಂಬದ ದಾನಿಗಳ ಸಹಾಯದಿಂದ ಮನೆ ನಿರ್ಮಾಣಕ್ಕೆ ಕೈ ಹಾಕಿತ್ತು. ಆದರೆ ಮನೆ ನಿರ್ಮಾಣದ ಅರ್ಧ ಕಾಮಗಾರಿ ಮುಗಿದ ಬಳಿಕ ಮನೆಯ ಕಾಮಗಾರಿಗೆ ಕುಟುಂಬದ ದಾನಿಗಳು ಮುಂದೆ ಬರದಿದ್ದಾಗ, ಆ ಮನೆಯನ್ನು ಪೂರ್ತಿಗೊಳಿಸಿ ಕೊಡುವ ಜವಾಬ್ದಾರಿಯನ್ನು ಬ್ಲಡ್ ಡೋನರ್ಸ್ ಮಂಗಳೂರು(ರಿ) ತಂಡವು ವಹಿಸಿಕೊಂಡಿತ್ತು. ಏಳು ತಿಂಗಳ ಹಿಂದೆ ಈ ಮನೆಯ ಯಜಮಾನ ತೀರಿಕೊಂಡಿದ್ದಾರೆ. ಇದೀಗ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಕುಟುಂಬ ಬಾಡಿಗೆ ಮನೆಯ ಒಡೆಯರು ಮನೆ ಖಾಲಿ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ.
ಈ ಕುಟುಂಬದಲ್ಲಿ ಮದುವೆ ಪ್ರಾಯದ ಎರಡು ಹೆಣ್ಣು ಮಕ್ಕಳು ಮತ್ತು ಒಂದು ತಾಯಿ ವಾಸವಿದ್ದಾರೆ. ಒಂದು ಸ್ವಂತ ಮನೆಯಲ್ಲಿ ವಾಸಿಸಬೇಕೆಂಬ ಕನಸು ಕಂಡಿರುವ ಈ ಕುಟುಂಬವು ಮನೆ ಪೂರ್ತಿಯಾಗಿ ಸಿಕ್ಕರೆ, ನಮ್ಮ ಮದುವೆ ಕಾರ್ಯಕ್ರಮವು ಅದೇ ಮನೆಯಲ್ಲಿ ನಡಿಬೇಕೆಂಬ ಆಸೆಯು ಇಟ್ಟಿದ್ದಾರೆ. ಗಂಡು ಮಕ್ಕಳಿಲ್ಲದ ಈ ಕುಟುಂಬಕ್ಕೆ ದಾನಿಗಳಾದ ನಾವೇ ಗಂಡು ಮಕ್ಕಳು.
ಒಂದು ಬಡ ಯತೀಂ ಕುಟುಂಬದ ಆಗ್ರಹವನ್ನು ನೆರವೇರಿಸಿ ಕೊಡುವ ಜವಾಬ್ದಾರಿಯನ್ನು ಸಾಮಾಜಿಕ ಸಂಘಟನೆ ಎಂಬ ನೆಲೆಯಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ತಂಡವು ವಹಿಸಿಕೊಂಡಿದ್ದು ಊರಿನ ದಾನ, ಸಹಕಾರ, ಬೆಂಬಲ ಮನಸ್ಸುಳ್ಳ ಸಹೃದಯಿ ದಾನಿಗಳ ಮುಂದೆ ಕೈ ಚಾಚುತ್ತಿದೆ. ತಾವೆಲ್ಲರೂ ತಮ್ಮ ಕೈಲಾದ ಧನ ಸಹಾಯವನ್ನು ನೀಡಿ ಈ ಒಂದು ಮನೆ ನಿರ್ಮಾಣಕ್ಕೆ ಸಹಕರಿಸಬೇಕಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ.
ಇದಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅತ್ಯಮೂಲ್ಯ.ಧಾನವು ಎಲ್ಲಾ ಆಪತ್ತುಗಳಿಂದ ನಮ್ಮನ್ನು ರಕ್ಷಿಸುತ್ತದೆ
ಸಹಾಯ ನೀಡಲು ಬಯಸುವವರು ಈ ಖಾತೆಗೆ ಹಣ ಜಮೆ ಮಾಡಬಹುದು.
Account details:
Blood Donor's Manglore
Karnataka Bank
A/c No:6992000100011701
Someshwara Branch
IFSE Code:KARB0000699
ಹೆಚ್ಚಿನ ಮಾಹಿತಿಗಾಗಿ:
+919731325670
+919845707090
+919108582527
+918867777771




No comments
Post a Comment