ಮಡಿಕೇರಿ -ವಿರಾಜಪೇಟೆ ತಾಲ್ಲೂಕಿನಾದ್ಯಂತ ಕಾಫಿ ಬೆಳೆಗಾರರ ತೋಟಗಳ ಲೈನ್‍ಮನೆಗಳಲ್ಲಿ ವಾಸಿಸುತ್ತಿರುವ ಎಲ್ಲಾ ಜನಾಂಗದವರ ಕುಟುಂಬ ಸರ್ವೆ ಕಾರ್ಯವನ್ನು ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿದ್ದು, ಅದರಂತೆ ಗ್ರಾಮ ಪಂಚಾಯಿತಿ ಹಂತದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಧ್ಯಕ್ಷರು, ಸ್ಥಳೀಯ ಶಾಲಾ ಓರ್ವ ಶಿಕ್ಷಕರು ಸದಸ್ಯರು, ಸ್ಥಳೀಯ ಗ್ರಾಮ ಲೆಕ್ಕಿಗರು, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು, ಸ್ಥಳೀಯ ಬೀಟ್ ಪೊಲೀಸರು ಮತ್ತು ಸ್ಥಳೀಯ ನಿಲಯ/ ಆಶ್ರಮ ಶಾಲಾ ಸಿಬ್ಬಂದಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಸಮಿತಿಯು ಕುಟುಂಬಗಳ ಸರ್ವೆ ಕಾರ್ಯವನ್ನು ಈಗಾಗಲೇ ಪ್ರಾರಂಭಿಸಿದ್ದು, ಈ ಸಮಿತಿಯವರು ತಮ್ಮ ತೋಟದ ಲೈನ್‍ಮನೆಗಳಿಗೆ ಸಮೀಕ್ಷೆಗಾಗಿ ಆಗಮಿಸುವಾಗ ಎಲ್ಲಾ ತೋಟದ ಮಾಲೀಕರು, ಕಾರ್ಮಿಕರು ಮಾಹಿತಿಯನ್ನು ನೀಡಿ ಸಹಕರಿಸುವಂತೆ ವಿರಾಜಪೇಟೆ ತಾಲ್ಲೂಕು ತಹಶೀಲ್ದಾರ್ ಅವರು ತಿಳಿಸಿದ್ದಾರೆ.
ಲೈನ್‍ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬ ಸರ್ವೆ ಕಾರ್ಯ