ನೆಲ್ಯಾಹುದಿಕೇರಿ,: ದಾರುನ್ನಜಾತ್ ಎಜುಕೇಶನಲ್ ಅಕ್ಯಾಡೆಮಿ ನೆಲ್ಯಾಹುದಿಕೇರಿ ಇದರ ನೂತನ ಕಾರ್ಯಕ್ರಮವಾದ "ಮಹಿಳಾ ಶರೀಅತ್ ಕಾಲೇಜಿನ" ಪ್ರಥಮ ವರ್ಷದ ಉದ್ಘಾಟನೆಯು ಇಂದು ಸೈಯದ್ VPS ಮುತ್ತುಕೋಯ ತಂಙ್ಞಳ್ ಅಲ್ ಬುಖಾರಿ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತ್ತು.ಗ್ರಾಮದ ಸುತ್ತಿಮುತ್ತನ 10ನೇ ತರಗತಿಯನ್ನು ಪೂರೈಸಿದ ಮುಸ್ಲಿಂ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡಿಸಿ ಧಾರ್ಮಿಕ ಮತ್ತು ಭೌತಿಕ ವಿದ್ಯಾಭ್ಯಾಸವನ್ನು ಪಡೆಯುವುದರೊಂದಿಗೆ "ಹಾದಿಯ" ಎಂಬ ಬಿರುದನ್ನು ಕೂಡ ಗಳಿಸಬಹುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಫೀಲ್ ಸಅದಿಯವರು ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು.ಈ ಒಂದು ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಮುಸ್ತಫ ಎಂ.ಎಂ, ಕೋಶಾಧಿಕಾರಿ ಅಬ್ದುಲ್ಲಾ ಪಿ.ಎ, ಸಹಕಾರ್ಯದರ್ಶಿ ರಸಾದ್, ಮಜೀದ್ ಸಿ.ಎಂ, ಅಲವಿ ಹಾಜಿ, ಹಂಸ ಸಿ.ಎಂ, ಸಿದ್ದಾಪುರ ವಲಯ SSF ಉಪಾಧ್ಯಕ್ಷರಾದ ಸಯ್ಯದ್ ಶಿಹಾಬುದ್ದೀನ್ ತಂಙ್ಞಳ್ ಅಲ್ ಬುಖಾರಿ VPS ಭಾಗವಹಿಸಿದರು.ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಧ್ಯಾಪಕರಾದ ಜುಬೈರ್ ಸಅದಿಯವರು ನಿರೂಪಿಸಿದರು.
ವರದಿ:ರಿಯಜ್
ಶಾಖಾ ಕಾರ್ಯದರ್ಶಿ
No comments
Post a Comment