ಕೆ.ಎಂ ಇಸ್ಮಾಯಿಲ್ ಕಂಡಕರೆ
ಕನ್ನಡ ಸಾಹಿತ್ಯ ಲೋಕ ಕಂಡ ಅದ್ಭುತ ನಾಟಕಕಾರ, ಸಾಹಿತಿ , ಚಿತ್ರ ನಟ ಮತ್ತು ನಿರ್ದೇಶಕ. ಕನ್ನಡ, ಹಿಂದಿ, ತೆಲಗು,ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತಮ್ಮ ಅಭಿನಯದಿಂದ ವಿಶಿಷ್ಠ ಮುದ್ರೆ ಒತ್ತಿರುವ ಇವರು ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಏಳನೇ ಸಾಹಿತಿ* ಪ್ರಗತಿಶೀಲ ಸಮತಾವಾದ ಮತ್ತು ಜಾತ್ಯಾತೀತತೆಯನ್ನು ಪ್ರತಿಪಾದಿಸುವ ಇವರು ಕೆಲವು ಬಾರಿ ತಮ್ಮ ನೇರ ನುಡಿಗಳ ಮೂಲಕ ಹಲವು ವಿವಾದಗಳಲ್ಲಿ ಸಿಲುಕಿದ್ದುಂಟು. * ಇವರ ತಂದೆ ರಘುನಾಥ ಕಾರ್ನಾಡ ಮುಂಬೈಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ತಾಯಿ ಕೃಷ್ಣಾಬಾಯಿ ಬಾಲ್ಯವಿವಾಹವಾಗಿ ಒಂದು ಮಗುವಾದ ನಂತರ ವಿಧವೆಯಾಗಿದ್ದರು. ರಘುನಾಥರ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇವೇ ಸಲ್ಲಿಸುವಾಗ ಪರಿಚಯವಾದ ಇವರನ್ನು ಆಗಿನ ಸಮಾಜಿಕ ಕಟ್ಟುಪಾಡುಗಳ ವಿರುದ್ಧವಾಗಿ ರಘುನಾಥರು ಕೈಹಿಡಿದರು. ನಂತರ ಈ ದಂಪತಿಗಳ ಮೂರನೇ ಮಗನಾಗಿ ಗಿರೀಶ್ ಜನಿಸಿದರು* ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ನಾಟಕಕಾರ, ನಟ, ಚಲನಚಿತ್ರನಿರ್ದೇಶಕ. 1938 ಮೇ 19ರಂದು ಮುಂಬಯಿ ಸಮೀಪದ ಮಾಥೇರಾನ ಎಂಬ ಊರಲ್ಲಿ ಜನಿಸಿದರು. ತಂದೆ ರಘುನಾಥ ಕಾರ್ನಾಡ್, ವೈದ್ಯರು. ತಾಯಿ ಕೃಷ್ಣಬಾಯಿ. ಗಿರೀಶ್ ಕಾರ್ನಾಡ್ರು ಶಾಲ ಶಿಕ್ಷಣವನ್ನು ಶಿರಸಿಯಲ್ಲಿ ಪಡೆದರು. 1958 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ದಲ್ಲಿ ಗಣಿತಶಾಸ್ತ್ರ ಮತ್ತು ಸಂಖ್ಯಾ ಕಲನಶಾಸ್ತ್ರದಲ್ಲಿ ಬಿ.ಎ.ಪದವಿ ಗಳಿಸಿದರು. ಅನಂತರ ಮುಂಬಯಿ ಯಲ್ಲಿ ಎಂ.ಎ. ವಿದ್ಯಾರ್ಥಿಯಾಗಿ ದ್ದಾಗ ರೋಡ್ಸ್ ವಿದ್ಯಾರ್ಥಿವೇತನ ಪಡೆದು ಮುಂಬಯಿನಲ್ಲಿ ಅಧ್ಯಯನ ಅರ್ಧಕ್ಕೆ ನಿಲ್ಲಿಸಿ ಇಂಗ್ಲೆಂಡಿಗೆ ಪ್ರಯಾಣ ಮಾಡಿದರು. 1963ರಲ್ಲಿ ಆಕ್ಸ್‌ಫರ್ಡಿನ ಎಂ.ಎ. ಪದವಿ ಸಂಪಾದಿಸಿದರು. ಇಂಗ್ಲೆಂಡಿನಲ್ಲಿ ಆಕ್ಸ್‌ಫರ್ಡ್ ಯೂನಿಯನ್ನಿನ ಅಧ್ಯಕ್ಷರಾಗಿ ಇದ್ದರು. ಯೂನಿಯನ್ನಿಗೆ ಪ್ರಪ್ರಥಮವಾಗಿ ಮಹಿಳೆಯರಿಗೂ ಪ್ರವೇಶ ದೊರಕಿದ್ದು ಕಾರ್ನಾಡರ ಅಧ್ಯಕ್ಷತೆಯ ಅವಧಿಯಲ್ಲಿ. ಅವರು ಇಂಗ್ಲೆಂಡಿನಿಂದ ಭಾರತಕ್ಕೆ ಹಿಂದಿರುಗಿದ ಮೇಲೆ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಸಂಸ್ಥೆಯ ಮದರಾಸು ಶಾಖೆಯಲ್ಲಿ ಉಪವ್ಯವಸ್ಥಾಪಕರಾದರು (1963-69); ಅನಂತರ ಅದರ ವ್ಯವಸ್ಥಾಪಕರಾದರು (1969-70). ಇವರು ಹವ್ಯಾಸಿ ರಂಗಭೂಮಿಯ ಒಳ್ಳೆಯ ನಟರೆಂದೂ ನಾಟಕ ಲೇಖಕರೆಂದೂ ಹೆಸರುಗಳಿಸಿದ್ದಾರೆ. ಇವರು 1961 ರಲ್ಲಿ ಪ್ರಕಟಿಸಿದ ಯಯಾತಿ ನಾಟಕ ಹಲವು ಬಾರಿ ರಂಗಭೂಮಿಯ ಮೇಲೆ ಪ್ರದರ್ಶಿತವಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಪುರಾಣದ ಯಯಾತಿಯನ್ನು ಆಧುನಿಕ ದೃಷ್ಟಿಕೋನದಿಂದ ಪರಿವೀಕ್ಷಿಸಿ ಅವನ ಬಾಳಿನ ದುರಂತತೆಯನ್ನು ಎತ್ತಿ ತೋರುವ ಯಯಾತಿಯ ತಂತ್ರ ಅತ್ಯಂತ ಯಶಸ್ವಿಯಾಗಿದೆ. ಭಾರತೀಯ ಇತಿಹಾಸದ ವಾದಗ್ರಸ್ತ ಸುಲ್ತಾನರಲ್ಲೊಬ್ಬನ ಬಾಳಿನ ಸುತ್ತ ಹೆಣೆದಿರುವ ‘ತುಘಲಕ್’ ನಾಟಕವೂ (1964) ನವೀನ ತಂತ್ರದಿಂದ ಕೂಡಿ, ಅವನ ಬಾಳಿನ ಕಥೆಗೆ ಹೊಸ ಆಯಾಮವೊಂದನ್ನು ನೀಡುತ್ತದೆ. ಅದು ಕನ್ನಡದಲ್ಲಿ ಮಾತ್ರವಲ್ಲದೆ ಇಂಗ್ಲಿಷ್, ಹಿಂದಿ ಮತ್ತು ಮರಾಠಿಯಲ್ಲೂ ರಂಗಪ್ರಯೋಗಗೊಂಡು ಆ ಭಾಷೆಗಳ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ನಾಟಕಗಳು : - ಮಾ ನಿಷಾದ (1964), ಹಯವದನ (1977), ಅಂಜುಮಲ್ಲಿಗೆ (1980), ಹಿಟ್ಟಿನ ಹುಂಜ (1980), ನಾಗಮಂಡಲ (1988), ತಲೆದಂಡ (1990), ಅಗ್ನಿ ಮತ್ತು ಮಳೆ (1995), ಟಿಪ್ಪುವಿನಕನಸುಗಳು(2000) ಮತ್ತು ಒಡಕಲು ಬಿಂಬ (2005) ಇವು ಕಾರ್ನಾಡರು ಬರೆದ ಇತರ ನಾಟಕಗಳು. ಇವರ ಯಯಾತಿಗೆ ರಾಜ್ಯಪ್ರಶಸ್ತಿಯೂ (1961) ತುಘಲಕ್ಗೆ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಯೂ (1969) ಲಬಿಸಿವೆ. 1971ರಲ್ಲಿ ಭಾರತೀಯ ಭಾಷೆಗಳಲ್ಲಿ ಸೃಷ್ಟಿಯಾದ ನಾಟಕಗಳ ಪೈಕಿ ಅತ್ಯುತ್ಕೃಷ್ಟವಾದದ್ದೆಂದು ಭಾರತೀಯ ನಾಟ್ಯ ಸಂಘದ ಬಹುಮಾನ ಗಳಿಸಿದ ಹಯವದನದಲ್ಲಿ ಯಕ್ಷಗಾನದ ತಂತ್ರವನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ಕಾರ್ನಾಡರು ನಾಟಕಗಳಿಗೆ ಆಯ್ದುಕೊಳ್ಳುವ ವಸ್ತು ಪುರಾಣ, ಇತಿಹಾಸ, ಜನಪದಗಳಾದರೂ ಅವರ ಕೃತಿಗಳಲ್ಲಿ ಸಮಕಾಲೀನ ಸಮಸ್ಯೆ ಸಂವೇದನಗೆಳನ್ನು ಅರ್ಥೈಸುವ ಪ್ರಾಮಾಣಿಕ ಪ್ರಯತ್ನ ಗಮನಾರ್ಹ. ಗಿರೀಶ್ ಕಾರ್ನಾಡರು ಹೆಚ್ಚು ಪ್ರಸಿದ್ಧಿ ಪಡೆದದ್ದು ಯು.ಆರ್.ಅನಂತಮೂರ್ತಿ ಯವರ ಸಂಸ್ಕಾರ ಕಾದಂಬರಿಯನ್ನು ಆಧರಿಸಿ ತಯಾರಿಸಲಾದ ಅದೇ ಹೆಸರಿನ ಕನ್ನಡ ಚಲನಚಿತ್ರದಿಂದಾಗಿ. ಸಂಸ್ಕಾರದ ಚಿತ್ರಕಥಾ ಲೇಖಕರೂ ಅದರಲ್ಲಿ ಪ್ರಾಣೇಶಾಚಾರ್ಯನ ಪಾತ್ರ ವಹಿಸಿದವರೂ ಗಿರೀಶ್ ಕಾರ್ನಾಡರೇ. ತುಂಬ ವಾದಗ್ರಸ್ತ ವಾದ ಈ ಚಿತ್ರ ಮೊದಲು ಭಾರತದ ಸೆನ್ಸಾರ್ ಬೋರ್ಡಿನಿಂದ ಬಹಿಷ್ಕೃತವಾಗಿ ಅನಂತರ ಒಪ್ಪಿಗೆಯ ಮುದ್ರೆ ದೊರಕಿಸಿಕೊಂಡಿತು. ಇದು ಅನೇಕ ವಿಮರ್ಶಕರ ಮೆಚ್ಚುಗೆ ಗಳಿಸಿತಲ್ಲದೆ, 1971ರ ಶ್ರೇಷ್ಠ ಚಿತ್ರವೆಂದು ರಾಷ್ಟ್ರಪತಿಗಳ ಸ್ವರ್ಣಪದಕ ಗಳಿಸಿತು. ಬಿ.ವಿ.ಕಾರಂತರ ಸಹಯೋಗದಲ್ಲಿ ಇವರು ನಿರ್ದೇಶಿಸಿದ ಎಸ್.ಎಲ್.ಭೈರಪ್ಪನವರ ವಂಶವೃಕ್ಷ ಕಾದಂಬರಿ ಆಧಾರಿತ ಚಿತ್ರವೂ ತುಂಬ ಯಶಸ್ಸು ಗಳಿಸಿತು. ಇದರ ಚಿತ್ರ ಕಥೆಯನ್ನು ಬರೆದವರೂ ಕಾರ್ನಾಡರೇ. ಇದರಲ್ಲೂ ಕಾರ್ನಾಡರು ಪಾತ್ರವಹಿಸಿದ್ದಾರೆ. ಇದಕ್ಕೆ ರಾಜ್ಯ ಪ್ರಶಸ್ತಿಯೂ ಫಿಲ್ಮ್ ಫೇರ್ ಪ್ರಶಸ್ತಿಯೂ ದೊರಕಿವೆ. ಇವರು ನಿರ್ದೇಶಿಸಿರುವ ಇನ್ನೊಂದು ಚಿತ್ರ ಶ್ರೀಕೃಷ್ಣ ಆಲನಹಳ್ಳಿಯವರ ಕಾಡು ಕಾದಂಬರಿಯನ್ನು ಆಧರಿಸಿದ್ದು. ಉತ್ಸವ್ ಇವರು ನಿರ್ದೇಶಿಸಿದ ಹಿಂದಿ ಚಿತ್ರ. ನಿಶಾಂತ್ ಎಂಬ ಹಿಂದಿ ಚಿತ್ರದಲ್ಲಿ ಕಾರ್ನಾಡರು ಅಭಿನಯಿಸಿದ್ದಾರೆ. ಕುವೆಂಪು ಅವರ ಕಾನೂರು ಹೆಗ್ಗಡತಿ ಕಾದಂಬರಿ ಯನ್ನು ಆಧರಿಸಿ ಅದೇ ಹೆಸರಿನ ಚಿತ್ರವನ್ನು ನಿರ್ದೇಶಿಸಿ, ಅಭಿನಯಿಸಿದ್ದಾರೆ (1999). ನಾಗಮಂಡಲವು ಸೇರಿದಂತೆ ಇವರ ನಾಟಕಗಳು ವಿದೇಶಗಳಲ್ಲೂ ಪ್ರದರ್ಶಿಸಲ್ಪಟ್ಟಿವೆ. ಇವು ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿವೆ. ಸಾಹಿತ್ಯ, ರಂಗಭೂಮಿ, ಚಲನಚಿತ್ರ-ಇವುಗಳ ನಡುವೆ ನಿಕಟಬಾಂಧವ್ಯ ಇದ್ದಾಗಲೇ ಹೊಸಹೊಸ ಪ್ರಯೋಗಗಳು ಸಾಧ್ಯವೆಂದೂ ಬಂಗಾಲದಲ್ಲಿ ಇವು ಮೂರೂ ಪರಸ್ಪರ ಪೂರಕವಾಗಿರುವುದರಿಂದಲೇ ಅಲ್ಲಿಯ ಚಲನಚಿತ್ರ ನವ್ಯತೆಯ ಹಾದಿ ಹಿಡಿದಿದೆಯೆಂದೂ ಭಾವಿಸಿರುವ ಕಾರ್ನಾಡರು ಈ ಮೂರೂ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಗಣಿತಶಾಸ್ತ್ರದ ಶಿಸ್ತಿನಂತೆಯೇ ರಂಗಕರ್ಮಕೂಡ ಎಂಬುದು ಕಾರ್ನಾಡರ ನಂಬುಗೆ. ಸ್ವತಃ ಗಣಿತಶಾಸ್ತ್ರದ ವಿದ್ಯಾರ್ಥಿಯಾಗಿ, ವಿದೇಶಯಾತ್ರೆ ಮಾಡಿ ಅಲ್ಲಿಯ ರಂಗಭೂಮಿ, ಚಿತ್ರರಂಗವನ್ನು ವೀಕ್ಷಿಸಿರುವ ಗಿರೀಶ ಕಾರ್ನಾಡರು ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದಲ್ಲೂ ನವ್ಯ ವಿಧಾನವನ್ನು ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ. ತೆರೆಯ ಮೇಲೆ ಪ್ರಸಿದ್ಧರಾದ ಮತ್ತು ಹಣ ದೊರಕಿಸುವ ಭರವಸೆ ಇರುವ ನಟನಟಿಯರನ್ನು ಬಿಟ್ಟು ತಾವು ಚಿತ್ರೀಕರಿಸಲಿರುವ ಕಥೆಗೆಸಾಹಿತ್ಯ, ರಂಗಭೂಮಿ, ಚಲನಚಿತ್ರ-ಇವುಗಳ ನಡುವೆ ನಿಕಟಬಾಂಧವ್ಯ ಇದ್ದಾಗಲೇ ಹೊಸಹೊಸ ಪ್ರಯೋಗಗಳು ಸಾಧ್ಯವೆಂದೂ ಬಂಗಾಲದಲ್ಲಿ ಇವು ಮೂರೂ ಪರಸ್ಪರ ಪೂರಕವಾಗಿರುವುದರಿಂದಲೇ ಅಲ್ಲಿಯ ಚಲನಚಿತ್ರ ನವ್ಯತೆಯ ಹಾದಿ ಹಿಡಿದಿದೆಯೆಂದೂ ಭಾವಿಸಿರುವ ಕಾರ್ನಾಡರು ಈ ಮೂರೂ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಗಣಿತಶಾಸ್ತ್ರದ ಶಿಸ್ತಿನಂತೆಯೇ ರಂಗಕರ್ಮಕೂಡ ಎಂಬುದು ಕಾರ್ನಾಡರ ನಂಬುಗೆ. ಸ್ವತಃ ಗಣಿತಶಾಸ್ತ್ರದ ವಿದ್ಯಾರ್ಥಿಯಾಗಿ, ವಿದೇಶಯಾತ್ರೆ ಮಾಡಿ ಅಲ್ಲಿಯ ರಂಗಭೂಮಿ, ಚಿತ್ರರಂಗವನ್ನು ವೀಕ್ಷಿಸಿರುವ ಗಿರೀಶ ಕಾರ್ನಾಡರು ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದಲ್ಲೂ ನವ್ಯ ವಿಧಾನವನ್ನು ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ. ತೆರೆಯ ಮೇಲೆ ಪ್ರಸಿದ್ಧರಾದ ಮತ್ತು ಹಣ ದೊರಕಿಸುವ ಭರವಸೆ ಇರುವ ನಟನಟಿಯರನ್ನು ಬಿಟ್ಟು ತಾವು ಚಿತ್ರೀಕರಿಸಲಿರುವ ಕಥೆಗೆ ಸೂಕ್ತರಾದವರನ್ನು ಅಬಿsನಯಕ್ಕೆ ಆರಿಸಿಕೊಳ್ಳುವುದೂ ವೇಷಭೂಷಣಗಳಿಗಾಗಲಿ ಚಿತ್ರನಿರ್ಮಾಣ ಶಾಲೆಯ ಪೂರ್ವಸಿದ್ಧ ದೃಶ್ಯ ಸಂಯೋಜನೆ ಗಾಗಲಿ ಪ್ರಾಮುಖ್ಯ ಕೊಡದೆ ಹೊರಾಂಗಣದ ಸಹಜ ಪರಿಸರದಲ್ಲಿ ನೇರವಾಗಿ ಚಿತ್ರ ತೆಗೆಯುವುದೂ ಇವರು ಸಾಮಾನ್ಯವಾಗಿ ಅನುಸರಿಸುವ ಕ್ರಮ. ಇವರು ಸ್ವಲ್ಪ ಕಾಲ ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ ನಿರ್ದೇಶಕರಾಗಿದ್ದರು. ಇವರು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರಿಗೆ ಪದ್ಮಶ್ರೀ (1974), ಪದ್ಮಭೂಷಣ (1992), ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ (1976) ಮತ್ತು ಜ್ಞಾನಪೀಠ ಪ್ರಶಸ್ತಿ (1998) ದೊರಕಿವೆ. ಸಂತ ಶಿಶುನಾಳ ಷರೀಫ 1990 ಗುರು ಗೋವಿಂದಭಟ್ಟರು ಕನ್ನಡ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪೋಷಕ ನಟ ಗೌರವ. ಮಿಲ್ ಗಯೀ ಮಂಜಿಲ್ ಮುಝೆ 1989 ಆಕರ್ಷಣ್ 1988 ಸೂತ್ರಧಾರ್ 1987 ಜಮೀನ್ದಾರ ನಾನ್ ಅದಿಮೈ ಇಲ್ಲೈ 1986 ರಜನೀಕಾಂತ್ರ ಮಾವ ತಮಿಳು ನೀಲ ಕುರಿಂಜಿ ಪೋತಪ್ಪೋಳ್ 1986 ಅಪ್ಪು ಮೆನನ್ ಮಲಯಾಳಂ ಸುರ್ ಸಂಗಮ್ 1985 ಪಂಡಿತ್ ಶಿವಶಂಕರ ಶಾಸ್ತ್ರಿ ಮೇರಿ ಜಂಗ್ 1985 ದೀಪಕ್ ವರ್ಮ ಜಮಾನ 1985 ಸತೀಶ್ ಕುಮಾರ್ ನೀ ತಂದ ಕಾಣಿಕೆ 1985 ಡಾ.ವಿಷ್ಣುವರ್ಧನ್ರ ತಂದೆ ಡೈವೋರ್ಸ್ 1984 ತರಂಗ್ 1984 ದಿನೇಶ್ ಅನ್ವೇಷಣೆ 1983 ರೊಟ್ಟಿ ಏಕ್ ಬಾರ್ ಚಲೇ ಆವೋ 1983 ದೀನದಯಾಳ್ ಆನಂದ ಭೈರವಿ 1983 ನಾರಾಯಣ ಶರ್ಮ ತೇರೀ ಕಸಮ್ 1982 ರಾಕೇಶ್ ಅಪರೂಪ್ 1982 ಉಂಬರ್ಥಾ 1982 ಅಡ್ವೋಕೇಟ್ ಸುಭಾಷ್ ಮಹಾಜನ್ ಮರಾಠಿ ಶಮಾ 1981 ನವಾಬ್ ಯೂಸುಫ್ ಖಾನ್ ಅಪ್ನೇ ಪರಾಯೇ 1980 ಹರೀಶ್ ಹಿಂದಿ ಮನ್ ಪಸಂದ್ 1980 ಖಿನಾಥ್ ಆಶಾ 1980 ದೀಪಕ್ ಬೇಕಸೂರ್ 1980 ಡಾ. ಆನಂದ್ ಭಟ್ನಾಗರ್ ರತ್ನದೀಪ್ 1979 ಸಂಪರ್ಕ್ 1979 ಹೀರಾ ಜೀವನ್ಮುಕ್ತ್ 1977 ಅಮರಜೀತ್ ಹಿಂದಿ ಸ್ವಾಮಿ 1977 ಘನಶ್ಯಾಮ್ ಹಿಂದಿ ಮಂಥನ್ 1976 ಡಾ. ರಾವ್ ಹಿಂದಿ ನಿಶಾಂತ್ 1975 ಸ್ಕೂಲ್ ಮಾಸ್ಟರ್ ಹಿಂದಿ ಜಾದೂ ಕಿ ಶಂಖ್ 1974 ಹಿಂದಿ ವಂಶವೃಕ್ಷ 1971 ಕನ್ನಡ ಸಂಸ್ಕಾರ 1970 ಪ್ರಾಣೇಶಾಚಾರ್ಯ ಕನ್ನಡ ಸಿನಿಮಾ ಸೇವೆ ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. "ಕಾರ್ನಾಡರು ವಸ್ತುವನ್ನು ಗ್ರಹಿಸುವ ಕ್ರಮದಲ್ಲೇ ಅವರ ಅನನ್ಯತೆ ಇದೆ. ಈ ಗ್ರಹಿಕೆಗೆ ಪೂರಕವಾದ ರಚನಾಕ್ರಮವನ್ನು ಅವರು ಕಂಡುಕೊಂಡಿದ್ದಾರೆ. ಒಂದು ಸಮಸ್ಯೆಯನ್ನು ನಾಟಕ ರೂಪಕ್ಕೆ ಒಗ್ಗಿಸಿಕೊಂಡು ಅದಕ್ಕೊಂದು structure ಕೊಟ್ಟು ಜನರ ಮುಂದಿಡುವುದರಲ್ಲೇ ನಾಟಕಕಾರನ ಸೋಲು ಗೆಲುವು ಎರಡೂ ಅಡಗಿದೆ." ಎಂದು ಕಾರ್ನಾಡರ ನಾಟಕಗಳ ವಸ್ತು, ಗ್ರಹಿಕೆ ಬಗ್ಗೆ ಭಾರತೀಯ ರಂಗಭೂಮಿಯ ಹಿರಿಯ ನಿರ್ದೇಶಕ ಬಿ. ವಿ. ಕಾರಂತರು ದಾಖಲಿಸುತ್ತಾರೆ. ಕಾರ್ನಾಡರಿಗೆ ಹಲವಾರು ಹುದ್ದೆಗಳು, ಪ್ರಶಸ್ತಿಗಳು ಲಭಿಸಿವೆ.ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ -೧೯೭೪ ಪದ್ಮಭೂಷಣ -೧೯೯೨ ಜ್ಞಾನಪೀಠ -೧೯೯೮ ಕಾಳಿದಾಸ ಸಮ್ಮಾನ್ - ೧೯೯೮ ಪ್ರಶಸ್ತಿಗಳ ಗೌರವ ದೊರೆಕಿದೆ. ಕಾರ್ನಾಡ್ ಕೇಂದ್ರ ಸಂಗೀತ-ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ೧೯೮೮-೯೩ ಕಾರ್ಯನಿರ್ವಹಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ನೆಹರು ಸೆಂಟರ್‌ನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೦೮ -೦೯ ರ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಮಂಡಳಿ ಘೋಷಿಸಿದ್ದ " ಪುಟ್ಟಣ್ಣ ಕಣಗಾಲ್ "ಪ್ರಶಸ್ತಿಯನ್ನು ಪ್ರಶಸ್ತಿಯನ್ನು ಗಿರೀಶ್ ಕಾರ್ನಾಡ್ ನಿರಾಕರಿಸಿದ್ದಾರೆ . ಅವರ ಜೀವಮಾನದ ಸಾಧನೆಗಾಗಿ ಕೆ.ಎಸ್.ಆರ್.ದಾಸ್ ಅವರಿಗೆ ನೀಡಲಾಗಿದ್ದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಕೆಲ ಕ್ಷಣಗಳಲ್ಲಿಯೇ ಹಿಂದಕ್ಕೆ ಪಡೆದು ಅದನ್ನು ಗಿರೀಶ್ ಕಾರ್ನಾಡ್ ಅವರಿಗೆ ನೀಡಲಾಗಿತ್ತು.(ದಾಸ್ ಅವರಿಗೆ ಪ್ರಶಸ್ತಿ ನೀಡಿದ್ದನ್ನು ಘೋಷಿಸಿದ ಕೂಡಲೆ "ಕೆ.ಎಸ್.ಆರ್.ದಾಸ್" ಅವರು ಕನ್ನಡ ಚಿತ್ರರಂಗಕ್ಕೆ ಹೆಚ್ಚಿನ ಸೇವೆ ಸಲ್ಲಿಸಿಲ್ಲವೆಂಬುದು ಪತ್ರಕರ್ತರಿಂದ ಪ್ರತಿಭಟನೆ ವ್ಯಕ್ತವಾಗಿದ್ದರಿಂದ ಅದನ್ನು ಕೂಡಲೆ ಹಿಂದೆ ಪಡೆದು ಅದನ್ನು ಕಾರ್ನಾಡ್ ಅವರಿಗೆ ಭಾರ್ಗವ ನೀಡಿದ್ದರು. *ಗಿರೀಶ್ ಕಾರ್ನಾಡರ "ಸಿನಿಮಾ ಪ್ರಪಂಚ"* ಗಿರೀಶ್ ಕಾರ್ನಾಡರು ಕೇವಲ ಸಾಹಿತ್ಯ ಕೃಷಿಯಷ್ಟೇ ಅಲ್ಲದೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ನಟರಾಗಿ, ನಿರ್ದೇಶಕರಾಗಿ, ಚಲನಚಿತ್ರ, ರಂಗದಲ್ಲೂ ಖ್ಯಾತಿ ಪಡೆದಿದ್ದಾರೆ. ಸಂಸ್ಕಾರ ಚಲನಚಿತ್ರದ ಚಿತ್ರಕಥೆ ಸಂಭಾಷಣೆ, ಮುಖ್ಯ ನಟರಾಗಿದ್ದರು. ಇದು ಕನ್ನಡಕ್ಕೆ ಪ್ರಥಮ ಸ್ವರ್ಣಕಮಲವನ್ನು ತಂದು ಕೊಟ್ಟ ಚಿತ್ರ. ೧೯೭೦ರಲ್ಲಿ ತೆರೆಕಂಡ ಯು.ಆರ್ ಅನಂತಮೂರ್ತಿ ಕಾದಂಬರಿ ಆಧಾರಿತ 'ಸಂಸ್ಕಾರ' ಚಿತ್ರದ ಮೂಲಕ ನಟನೆಗೆ ಇಳಿದರು. ಈ ಚಿತ್ರದಲ್ಲಿನ ಪ್ರಾಣೇಶಾಚಾರ್ಯ ಪಾತ್ರವನ್ನು ತುಂಬಾ ಪ್ರಬುಧ್ದರಾಗಿ ನಿಭಾಯಿಸಿದರು. ಈ ಚಿತ್ರಕ್ಕೆ ಚಿತ್ರಕಥೆ ಸಂಭಾಷಣೆಯನ್ನು ಕೂಡ ಇವರೇ ಬರೆದಿದ್ದರು ನಂತರ ಶಂಕರ್ ನಾಗ್ ನಿರ್ದೇಶನದ "ಮಾಲ್ಗುಡಿ ಡೇಸ್" ಕಿರುತೆರೆ ಧಾರಾವಾಹಿಯಲ್ಲಿ ನಟಿಸಿದರು. ಎಸ್.ಎಲ್ ಭೈರಪ್ಪನವರ ಕಾದಂಬರಿ ಆಧಾರಿತ 'ವಂಶ ವೃಕ್ಷ' ವನ್ನು ತೆರೆಗೆ ತರುವ ಮೂಲಕ ಚಿತ್ರ ನಿರ್ದೇಶನಕ್ಕೂ ಕಾಲಿಟ್ಟರು. ಈ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದರು. ಕುವೆಂಪುರವರ 'ಕಾನೂರು ಹೆಗ್ಗಡತಿ' ಕೃತಿಯನ್ನು ಪರದೆಗೆ ತಂದ ಕೀರ್ತಿ ಕಾರ್ನಾಡರದು. ನಂತರ ಹಲವಾರು ಚಿತ್ರಗಳನ್ನು ಮತ್ತು ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿದ್ದಾರೆ . ತಮ್ಮ ನಟನೆಯಿಂದಲೂ ಪ್ರಸಿದ್ದರಾಗಿರುವ ಇವರು ಹಲವು ಕನ್ನಡ ,ತೆಲುಗು, ಮತ್ತು ಹಿಂದಿ, ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವಂಶವೃಕ್ಷ ಮತ್ತು ತಬ್ಬಲಿಯು ನೀನಾದೆ ಮಗನೆ ಚಿತ್ರವನ್ನು ಬಿ.ವಿ ಕಾರಂತರೊಡನೆ ನಿರ್ದೇಶನ ಮಾಡಿದ್ದಾರೆ. ಕಾಡು, ಒಂದಾನೊಂದು ಕಾಲದಲ್ಲಿ ಹಿಂದಿಯಲ್ಲಿ ಉತ್ಸವ್ ಗೋಧೂಳಿ ನಿರ್ದೇಶನ ಮಾಡಿದ್ದಾರೆ. ಹಿಂದಿ ಚಿತ್ರ ನಿಶಾಂತ್ ,ಕನ್ನಡದ ಮೈಸೂರು ಮಲ್ಲಿಗೆ, ಶಿಶುನಾಳ ಷರೀಫ್ ಮುಂತಾದವುಗಳಲ್ಲಿ ಅಭಿನಯ ,ಕನಕ-ಪುರಂದರ ,ದಾ.ರಾ ಬೇಂದ್ರೆ ,ಸೂಫಿಪಂಥ ಸಾಕ್ಷ್ಯಚಿತ್ರಗಳನ್ನು . 'ಚೆಲುವಿ' ಪರಿಸರ ವಿನಾಶ ಕುರಿತು ಕಿರುಚಿತ್ರ .. ರಾಷ್ಟ್ರಕವಿ ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿಯನ್ನು ಆಧರಿಸಿ "ಕಾನೂನು ಹೆಗ್ಗಡತಿ" ಚಿತ್ರವನ್ನು ನಿರ್ದೇಶಿಸಿದ್ದಾರೆ.. ಈ ಚಿತ್ರವು ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪುರಸ್ಕಾರ ಪಡೆದು , ಪನೋರಮಕ್ಕೂ ಆಯ್ಕೆಯಾಯಿತು. ೨೦೦೭ರಲ್ಲಿ ತೆರೆಕಂಡ ಆ ದಿನಗಳು ಚಿತ್ರಕ್ಕೆ ಅಗ್ನಿ ಶ್ರೀಧರ್ ಅವರ ಜೊತೆಗೂಡಿ ಚಿತ್ರಕಥೆಯನ್ನು ಬರೆದಿದ್ದಾರೆ.. ಒಂದಾನೊಂದು ಕಾಲದಲ್ಲಿ ಚಿತ್ರವನ್ನು ೧೯೭೭ರಲ್ಲಿ ಚಿತ್ರವನ್ನು ನಿರ್ದೇಶಿಸುವಾಗ ಕಳರಿಪಯಟ್ಟು ಮತ್ತು ಮುಂತಾದ ಸಾಹಸಕಲೆಗಳನ್ನು ಮೊದಲ ಬಾರಿ ಕನ್ನಡ ತೆರೆಯಲ್ಲಿ ಅಳವಡಿಸಿದ ಹಿರಿಮೆ ಕಾರ್ನಡರದ್ದು. ಹತ್ತು ರಾಷ್ಟ್ರ ಪ್ರಶಸ್ತಿ, ಆರು ಸಲ ರಾಜ್ಯ ಪ್ರಶಸ್ತಿ, ಏಳು ಫಿಲಂಫೇರ್ ಪ್ರಶಸ್ತಿಗಳ ಗೌರವಕ್ಕೆ ಭಾಜನರಾಗಿದ್ದಾರೆ ಗಿರೀಶ್ ಕಾರ್ನಾಡ್. ಟೈಗರ್ ಜಿಂದ್ ಹೈ, ಶಿವಾಯ್, ರುದ್ರ ತಾಂಡವ, ಧೀರ, ರಣವಿಕ್ರಮ, ಸವಾರಿ ೨, ಏಕ್ತಾ ಟೈಗರ್, ಎಕೆ೪೭, ಕಾನೂನು ಹೆಗ್ಗಡತಿ, ಪ್ರತ್ಯರ್ಥ, ಚೈನಾ ಗೇಟ್ , ಮಿನ್ಸಾರ, ಕನವು, ಆತಂಕ್, ಆಘಾತ, ಕಾದಲನ್ , ಪೂರ್ಣ ಸತ್ಯ, ಮೈಸೂರು ಮಲ್ಲಿಗೆ, ಸಂತ ಶಿಶುನಾಳ ಷರೀಫ, ಪ್ರಥಮ ಉಷಾಕಿರಣ, ಕಾಡಿನ ಬೆಂಕಿ, ಸೂತ್ರಧಾರ, ನೀ ತಂದ ಕಾಣಿಕೆ, ಅನಂದ ಭೈರವಿ, ಮುಂತಾದ ಚಿತ್ರಗಳಲ್ಲಿ ಅವರಿಗೆ ಹೆಸರು ತಂದುಕೊಟ್ಟಂತವು. ಇದಿಷ್ಟೇ ಅಲ್ಲದೇ ಕಿರುತೆರೆಯ ಮಾಲ್ಗುಡಿ ಡೇಸ್, ಇಂದ್ರಧನುಷ್ ಧಾರವಾಹಿಗಳಲ್ಲೂ ಅಭಿನಯಿಸಿದ್ದಾರೆ.

No comments
Post a Comment