ಬಿಎಸ್ಎನ್ಎಲ್‌ ಸೇವೆಯಲ್ಲಿ ವ್ಯತ್ಯಯ. ನಾಳೆ ಮರಗೋಡಿನಲ್ಲಿ ಭಿಕ್ಷೆ ಎತ್ತಿ ಪ್ರತಿಭಟನೆ


ಮಡಿಕೇರಿ: ಮರಗೋಡು ಗ್ರಾಮ‌ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಬಿಎಸ್ಎನ್ಎಲ್ ಮೊಬೈಲ್ ನೆಟ್ವರ್ಕ್ ಸೇವೆಯಲ್ಲಿ ತೀವ್ರ ಅಡಚಣೆಯಾಗಿದ್ದು ಬಿಎಸ್ಎನ್ ಗ್ರಾಹಕರು ಇನ್ನಿಲ್ಲದಂತೆ ಪರದಾಡುತ್ತಿದ್ದಾರೆ. ಮರಗೋಡು ಬಿಎಸ್ಎನ್ಎಲ್ ಕೇಂದ್ರದಲ್ಲಿ ವಿದ್ಯುತ್ ಕೈಕೊಟ್ಟಾಗ ಜನರೇಟರ್ ಮೂಲಕ ಕಾರ್ಯನಿರ್ವಹಿಸಬೇಕು. ಆದರೆ ಜನರೇಟರ್ ಗೆ ಡೀಸೆಲ್ ಪೂರೈಸಲು ಬಿಎಸ್ಎನ್ಎಲ್ ಮಡಿಕೇರಿ ಕಚೇರಿಯಿಂದ ಅಧಿಕಾರಿಗಳು ಹಣ ನೀಡುತ್ತಿಲ್ಲ. ಹಾಗಾಗಿ ವಿದ್ಯುತ್ ಕೈಕೊಟ್ಟಾಗಲೆಲ್ಲಾ ಮರಗೋಡು ವ್ಯಾಪ್ತಿಯಲ್ಲಿ ಮೊಬೈಲ್ ಸೇವೆ ಸ್ಥಗಿತಗೊಳ್ಳುತ್ತಿದೆ. ಆದ್ದರಿಂದ ಬಿಎಸ್ಎನ್ಎಲ್ ಅಧಿಕಾರಿಗಳ ಈ ನಿರ್ಲಕ್ಷ್ಯದ ವಿರುದ್ಧ ನಾಳೆ (14-06-19, ಶುಕ್ರವಾರ) ಬೆಳಗ್ಗೆ 9 ಗಂಟೆಗೆ ಮರಗೋಡುವಿನಲ್ಲಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರಿಂದ ನಾಳೆ ಸಾರ್ವಜನಿಕರಿಂದ ಭಿಕ್ಷೆಯ ರೂಪದಲ್ಲಿ ಹಣ ಸಂಗ್ರಹಿಸಿ ಆ ಹಣದಿಂದ ಡೀಸೆಲ್ ಖರೀದಿಸಿ ಬಿಎಸ್ಎನ್ಎಲ್ ಗೆ ನೀಡುವ ಕಾರ್ಯಕ್ರಮವಿದೆ. ಆದ್ದರಿಂದ ಎಲ್ಲಾ ಸಾರ್ವಜನಿಕ ಬಂಧುಗಳು ಮರಗೋಡಿಗೆ ಸಮಯಕ್ಕೆ‌ ಸರಿಯಾಗಿ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕಾಗಿ ಮನವಿ. *ವಿ.ಸೂ* ಈ ಪ್ರತಿಭಟನೆಗೆ ಯಾವುದೇ ಸಂಘ ಸಂಸ್ಥೆಗಳು ನೇತೃತ್ವ ವಹಿಸಿಲ್ಲ. ಸಮಾನ ಮನಸ್ಕರು ಎಲ್ಲರೂ ಸೇರಿ ಗ್ರಾಮದ ಸಮಸ್ಯೆ ವಿರುದ್ಧ ಪ್ರಜಾಸತ್ತಾತ್ಮಕವಾಗಿ ಧನಿಎತ್ತಲು ಈ ಕಾರ್ಯಕ್ರಮಕ್ಕೆ ಕರೆ ನೀಡಲಾಗಿದೆ.