ಕಡಬ: ಕುಮಾರಧಾರ ನದಿಯಲ್ಲಿ ಮುಳುಗಿ ಬಾಲಕ ಮೃತ್ಯು
ಕಡಬ, ಜೂ.12. ಸ್ನೇಹಿತರೊಂದಿಗೆ ಸ್ನಾನಕ್ಕೆಂದು ತೆರಳಿದ್ದ ಬಾಲಕನೋರ್ವ ಕುಮಾರಧಾರ ನದಿಯಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಆಲಂಕಾರು ಸಮೀಪದ ಶಾಂತಿಮೊಗರು ಎಂಬಲ್ಲಿ ಬುಧವಾರ ಸಂಜೆ ಸಂಭವಿಸಿದೆ.
ಮೃತ ಬಾಲಕನನ್ನು ಸವಣೂರು ಸಮೀಪದ ಪರಣೆ ನಿವಾಸಿ ಹಮೀದ್ ಎಂಬವರ ಪುತ್ರ ಪ್ರೌಢಶಾಲಾ ವಿದ್ಯಾರ್ಥಿ ಅಶ್ಫಾಕ್ ಎಂದು ಗುರುತಿಸಲಾಗಿದೆ.
ಅಶ್ಫಾಕ್ ತನ್ನ ಸ್ನೇಹಿತರೊಂದಿಗೆ ಶಾಂತಿಮೊಗರು ಸೇತುವೆಯ ಬಳಿ ಸ್ನಾನಕ್ಕೆಂದು ಇಳಿದಿದ್ದು, ಈ ವೇಳೆ ನೀರಿನ ಸುಳಿಗೆ ಸಿಲುಕಿ ನಾಪತ್ತೆಯಾಗಿದ್ದು, ಆ ಬಳಿಕ ಸ್ಥಳೀಯ ಈಜುಗಾರರು ಬಾಲಕನಿಗಾಗಿ ಶೋಧ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.
No comments
Post a Comment