ಅರ್ಜಿ ಆಹ್ವಾನ


ಮಡಿಕೇರಿ ಜೂ.17(ಕರ್ನಾಟಕ ವಾರ್ತೆ):-ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಕೊಡಗು ಜಿಲ್ಲೆ ಮಡಿಕೇರಿ ನೆಹರು ಯುವ ಕೇಂದ್ರವು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ರಾಷ್ಟ್ರೀಯ ಯುವಧಳ ಸೇವಾ ಕಾರ್ಯಕರ್ತರಾಗಿ ಒಂದು ವರ್ಷದ ಅವಧಿಗೆ ಸೇವೆ ಸಲ್ಲಿಸಲು 2019-20ನೇ ಸಾಲಿಗೆ ಅರ್ಹ ಯುವಜನರಿಂದ ಅರ್ಜಿ ಆಹ್ವಾನಿಸಲಾಗಿದೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುವವರು ಅರ್ಜಿ ಸಲ್ಲಿಸುವಂತಿಲ್ಲ. 18 ರಿಂದ 29 ವರ್ಷ ವಯೋಮಾನದೊಳಗಿರುವ ಹತ್ತನೇ ತರಗತಿಯಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗಿರುವ(ಗರಿಷ್ಠಮಿತಿ ಇರುವುದಿಲ್ಲ) ಯುವಜನರು ಅರ್ಜಿ ಸಲ್ಲಿಸಬಹುದಾಗಿದೆ. ಮಾಸಿಕ ಗೌರವಧನವನ್ನು ನೀಡಲಾಗುತ್ತದೆ. ಪದವಿ ಪೂರ್ವ, ಪದವೀಧರ ಮಹಿಳೆಯರಿಗೆ ಆದ್ಯತೆ ಇದೆ. ಆಯ್ಕೆಯಾದ ಸೇವಾ ಕಾರ್ಯಕರ್ತರು ಯುವ ಹಾಗೂ ಗ್ರಾಮೀಣಾಭಿವೃದ್ಧಿಗೆ ಪೂರಕವಾದ ಸ್ವಚ್ಛ ಭಾರತ್ ಮಿಷನ್, ಪ್ರಧಾನ ಮಂತ್ರಿಯ ಜನ್-ಧನ್ ಯೋಜನೆ, ಜಾಗೃತಾಂದೋಲನ, ಇತರೆ ಕಾರ್ಯಕ್ರಮಗಳನ್ನು ಹಾಗೂ ಆರೋಗ್ಯ, ಸಾಕ್ಷರತೆ, ಗ್ರಾಮ ನೈರ್ಮಲ್ಯ ಮುಂತಾದ ಕಾರ್ಯಕ್ರಮಗಳನ್ನು ಆಯಾಯ ತಾಲ್ಲೂಕುಗಳಲ್ಲಿ ನೆಹರು ಯುವ ಕೇಂದ್ರದ ಮುಖಾಂತರ ಅನುಷ್ಠಾನಗೊಳಿಸಬೇಕು. ನೂತನವಾಗಿ ಸಂಘ ಮಂಡಳಿಗಳನ್ನು ಸಂಸ್ಥಾಪಿಸಬೇಕು. ಅರ್ಜಿ ಸಲ್ಲಿಸುವವರು ನಿಗಧಿತ ಅರ್ಜಿ ನಮೂನೆಯನ್ನು ಜಿಲ್ಲಾ ಯುವಜನ ಸಮನ್ವಯಾಧಿಕಾರಿ, ನೆಹರು ಯುವ ಕೇಂದ್ರ, ಯಶು ನಿಲಯ, ಕಾವೇರಿ ಲೇಔಟ್, ಬ್ಲಾಕ್ ನಂ.8, ಮಡಿಕೇರಿ-571201, ಇಲ್ಲಿ ಪಡೆದು ಜೂನ್, 21 ರೊಳಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸದ ಅಭ್ಯರ್ಥಿಗಳು, ಸಲ್ಲಿಸದವರು ನೇರವಾಗಿ ಜೂನ್, 24 ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಂದರ್ಶನಕ್ಕೆ ಮೂಲ ದಾಖಲಾತಿಗಳೊಂದಿಗೆ ಹಾಜರಾಗುವಂತೆ ಕೋರಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ :9901312526, 9008137503, 08272-225470 ನ್ನು ಸಂಪರ್ಕಿಸಬಹುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಜಸಿಂತಾ ಡಿಸೋಜ ಅವರು ತಿಳಿಸಿದ್ದಾರೆ.



 ಮಡಿಕೇರಿ ಜೂ.17(ಕರ್ನಾಟಕ ವಾರ್ತೆ):-ಪ್ರಸಕ್ತ(2019-20) ಸಾಲಿನಲ್ಲಿ ಪೊಲೀಸ್ ಇಲಾಖೆಯ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್ (ಪುರುಷ ಮತ್ತು ಮಹಿಳೆ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಇಲಾಖೆಯ ಅಧಿಕೃತ ವೆಬ್‍ಸೈಟ್ ತಿತಿತಿ.ಞsಠಿ.gov.iಟಿ ಮುಖಾಂತರ ಮಾತ್ರ ಜೂನ್, 29 ರೊಳಗೆ ಹಾಗೂ ಅಧಿಕೃತ ಬ್ಯಾಂಕ್ ಖಾತೆಗಳ, ಅಂಚೆ ಕಚೇರಿಯಲ್ಲಿ ಶುಲ್ಕವನ್ನು ಪಾವತಿಸಲು ಜುಲೈ, 03 ಕೊನೆಯ ದಿನವಾಗಿದೆ. ಕರ್ನಾಟಕ ಅರಣ್ಯ ಪ್ರದೇಶಗಳ್ಲಲಿ ವಾಸಿಸುತ್ತಿರುವ ಬುಡಕಟ್ಟು (ಸಿದ್ಧಿಗರು, ಜೇನುಕುರುಬ, ಕಾಡುಕುರುಬ, ಯರವ, ಸೋಲಿಗ, ಕುಡಿಯ, ಗೌಡ್ಲು, ಹಸಲರು, ಮಲೆಕುಡಿಯ ಮತ್ತು ಕೊರಗ) ಅಭ್ಯರ್ಥಿಗಳಿಗೆ ವಯೋಮಿತಿ 30 ವರ್ಷಗಳು. ಆನ್‍ಲೈನ್ ಮೂಲಕ ಅರ್ಜಿ ಭರ್ತಿ ಮಾಡುವ ಸಂದರ್ಭದಲ್ಲಿ ಸಮಸ್ಯೆ ಎದುರಾದಲ್ಲಿ ಸಹಾಯವಾಣೆ 080-22943346 ನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು ಎಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.