ಶ್ರೇಷ್ಠ ಪುಸ್ತಕ ಪ್ರಶಸ್ತಿಗೆ ಆಯ್ಕೆ 


ಮಡಿಕೇರಿ :-ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು 2018-19ನೇ ಸಾಲಿನ ಶ್ರೇಷ್ಠ ಪುಸ್ತಕ ಪ್ರಶಸ್ತಿಗೆ ವಿಜ್ಞಾನ, ತಂತ್ರಜ್ಞಾನ, ಕೃಷಿ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ, ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸಿರುವ ಲೇಖಕರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಲೇಖಕರು ಕಳುಹಿಸಿಕೊಟ್ಟ ಪುಸ್ತಕಗಳನ್ನು ಆಯಾಯ ಕ್ಷೇತ್ರದಲ್ಲಿನ ತಜ್ಞರಿಂದ ಮೌಲ್ಯಮಾಪನ ಮಾಡಿಸಿ, ಪ್ರಶಸ್ತಿಗೆ ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ. ಲೇಖಕರಾದ ಡಾ.ಟಿ.ಎಸ್.ಚನ್ನೇಶ್, ತ್ರಿವೇಣಿ ಸಿ., ಡಾ.ಉದಯ ಶಂಕರ ಪುರಾಣಿಕ, ಡಾ.ರಣಜಿತ ಬೀರಣ್ಣ ನಾಯಕ, ಪ್ರೊ.ಮಹದೇವಯ್ಯ, ಡಾ.ಮುರಲೀಮೋಹನ್ ಚೂಂತಾರು ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಎ.ಎಂ.ರಮೇಶ್ ಅವರು ತಿಳಿಸಿದ್ದಾರೆ.