ಮಡಿಕೇರಿ ಜೂ.17(ಕರ್ನಾಟಕ ವಾರ್ತೆ):-ಕರ್ನಾಟಕ ಜಾನಪದ ಅಕಾಡೆಮಿಯು 2018ರ ಜನವರಿ, 01 ರಿಂದ 2018ರ ಡಿಸೆಂಬರ್, 31 ರವರೆಗೆ ಪ್ರಥಮ ಆವೃತ್ತಿಯಲ್ಲಿ ಮುದ್ರಣಗೊಂಡಿರುವ ಕನಿಷ್ಠ 150 ಪುಟಗಳಿಗೂ ಮೇಲ್ಪಟ್ಟಂತೆ ಮಿತಿಯಲ್ಲಿರುವ ಜನಪದ ಗದ್ಯ, ಜನಪದ ಪದ್ಯ, ಜನಪದ ವಿಚಾರ-ವಿಮರ್ಶೆ ಸಂಶೋಧನೆ ಮತ್ತು ಜನಪದ ಸಂಕೀರ್ಣ ಈ ನಾಲ್ಕು ಪ್ರಕಾರಗಳ ಅತ್ಯುತ್ತಮ ಜಾನಪದ ಕೃತಿಗಳಿಗೆ ಬಹುಮಾನ ನೀಡುವ ಯೋಜನೆಯಡಿಯಲ್ಲಿ ಜಾನಪದ ಕೃತಿಗಳನ್ನು ಪುಸ್ತಕ ಬಹುಮಾನಕ್ಕಾಗಿ ಆಹ್ವಾನಿಸಲಾಗಿದೆ. ಲೇಖಕರು, ಪ್ರಕಾಶಕರು, ಸಂಪಾದಕರು 4 ಕೃತಿಗಳನ್ನು ದ್ವಿಪ್ರತಿ ಬಿಲ್ಲಿನೊಂದಿಗೆ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಇವರಿಗೆ ಜುಲೈ, 15 ರೊಳಗೆ ಖುದ್ದಾಗಿ, ಕೊರಿಯರ್ ಅಥವಾ ಅಂಚೆ ಮೂಲಕ ಕಳುಹಿಸಿಕೊಡುವಂತೆ ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಅವರು ತಿಳಿಸಿದ್ದಾರೆ.
ಪುಸ್ತಕ ಬಹುಮಾನಕ್ಕೆ ಜಾನಪದ ಕೃತಿಗಳ ಆಹ್ವಾನ