ಸಿದ್ದಾಪುರ : ಸರಕಾರಿ ಶಾಲೆಗಳಲ್ಲಿ ಸಿಗುವ ಸೌಲಭ್ಯಗಳನ್ನು ಪಡೆದು ಶಿಕ್ಷಣದ ಮೂಲಕ ಪ್ರತಿಭಾನ್ವಿತರಾಗಿ ಮುಂದೆ ಬರಬೇಕೆಂದು ವಿರಾಜಪೇಟೆ ತಹಸೀಲ್ದಾರ್ ಗೋವಿಂದರಾಜು ಕರೆ ನೀಡಿದರು ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಸಂಸ್ಥೆ ವತಿಯಿಂದ ಚೆನ್ನಯ್ಯನ ಕೋಟೆಯ ಸರ್ಕಾರಿ ಶಾಲೆಯ 200ಕ್ಕೊ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ಸೌಲಭ್ಯಗಳು ಇದ್ದು ವಿದ್ಯಾರ್ಥಿಗಳು ಶಿಕ್ಷ ಣದಿಂದ ವಂಚಿತರಾಗದೆ ಓದಿ ಗುರಿ ಮುಟ್ಟುವ ಛಲದೊಂದಿಗೆ ಮುಂದೆ ಬರಬೇಕೆಂದು ಕಿವಿಮಾತು ಹೇಳಿದರು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ದಾನಿಗಳು ಮುಂದೆ ಬರಬೇಕೆಂದು ಮನವಿ ಮಾಡಿದ ಅವರು ಬೆಂಗಳೂರಿನ ಬಿಎಸ್ಎಸ್ ಸಂಸ್ಥೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು
ಮೆಚ್ಚುಗೆ ವ್ಯಕ್ತಪಡಿಸಿದರು ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಸಂಸ್ಥೆ ವತಿಯಿಂದ ಜಿಲ್ಲೆಯ ಸರ್ಕಾರಿ ಶಾಲೆಯ ಎರಡು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ ಮಾಡಲಾಗುತ್ತಿದೆ. ಕಳೆದ ಬಾರಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ದುರಂತ ಸಂದರ್ಭದಲ್ಲಿ ಕಡು ಬಡ ಕುಟುಂಬಗಳಿಗೆ ಆಹಾರ ಧಾನ್ಯ ಸೇರಿದಂತೆ ಅಗತ್ಯ ನೆರವು ನೀಡಲಾಗಿದೆ.ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಸುಮಾರು ಐದು ಲಕ್ಷಕ್ಕೂ ಹೆಚ್ಚು ಮಂದಿಗೆ ಕಿರು ಹಣಕಾಸು ಯೋಜನೆಯ ಮೂಲಕ ಗ್ರಾಮೀಣ ವರ್ಗದ ಜನರನ್ನು ಅಭಿವೃದ್ಧಿಯ ಮೂಲಕ ಮುಂದೆ ತರುವ ಕಾರ್ಯಕ್ರಮ ನಡೆಯುತ್ತಿದೆ ಎಂದು ಸಂಸ್ಥೆಯ ವಲಯ ವ್ಯವಸ್ಥಾಪಕ ಮಧುಸೂದನ್ ತಿಳಿಸಿದರು ಈ ಸಂದರ್ಭ ಚೆನ್ನಯ್ಯನಕೊಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ,ಶಾಲಾ ಎಸ್ಡಿಎಂಸಿ ಅಧ್ಯಕ್ಷ ಶೋಭಾ ,ಪ್ರೌಢ ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಸಾಬೀರಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ರೋಸಿ ರಾಣಿ, ಪ್ರೌಢಶಾಲಾ ಮುಖ್ಯ ಶಿಕ್ಷಕ ರವಿಚಂದ್ರನ್ ,ಕಂದಾಯ ಇಲಾಖೆ ಅಧಿಕಾರಿ ಅನಿಲ್ , ಡಿಎಸ್ಎಸ್ ಸಂಸ್ಥೆಯ ಪ್ರಮುಖರಾದ ಸುರೇಶ್, ಮಹೀಂದ್ರ, ಶರತ್ , ಚಂದ್ರಶೇಖರ್ ಸೇರಿದಂತೆ ಮತ್ತಿತರರು ಹಾಜರಿದ್ದರು ಚಿತ್ರ : ಚಿತ್ರ ಎಂ ಡಿ ಕೆ 18ಎಸ್ ಡಿ ಆರ್1 ಬಿ ಎಸ್ ಎಸ್ ಸಂಸ್ಥೆ ವತಿಯಿಂದ ಚೆನ್ನಯ್ಯನ ಕೋಟೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣಾ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಗೋವಿಂದರಾಜ್ ಚಿತ್ರ : ಚಿತ್ರ ಎಂ ಡಿ ಕೆ 18ಎಸ್ ಡಿ ಆರ್ 2 ಬಿ ಎಸ್ ಎಸ್ ಸಂಸ್ಥೆ ವತಿಯಿಂದ ಚೆನ್ನಯ್ಯನ ಕೋಟೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

