ಸ್ವಚ್ಛ ಮೇವ ಜಯತೆ"* ಕಾರ್ಯಕ್ರಮದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ 


ಚೆಟ್ಟಳ್ಳಿ:ಸ್ವಚ್ಛ ಮೇವ ಜಯತೆ ಮತ್ತು ಜಲಾಮೃತ ಕಾರ್ಯಕ್ರಮದ ಅಂಗವಾಗಿ ಚೆಟ್ಟಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಗಿಡನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಂದೀಶ್ ಹಾಗೂ ಅಧ್ಯಕ್ಷರಾದ ವತ್ಸಲ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಂದೀಶ್, ಸ್ವಚ್ಛ ಮೇವ ಜಯತೆ , ಜಲಾಮೃತ ಕಾರ್ಯಕ್ರಮವು ಜೂನ್ ೧೧ ರಿಂದ ಆರಂಭಗೊಂಡಿದ್ದು, ಜುಲೈ ೧೦ರವರೆಗೆ ನಡೆಯಲಿದೆ ಎಂದರು. ಜಿಲ್ಲಾಡಳಿತ ಪ್ರತೀ ಗ್ರಾಮ

ಪಂಚಾಯತಿಗೆ ೩ಸಾವಿರ ಗಿಡಗಳನ್ನು ನೀಡಲಾಗಿದ್ದು, ಚೆಟ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಲೆಗಳು ಹಾಗೂ ಸರ್ಕಾರ ಆಸ್ಪತ್ರೆಯಲ್ಲಿ ಸಸಿಗಳನ್ನು ನೆಡಲಾಗುವುದು ಎಂದು ಮಾಹಿತಿ ನೀಡಿದರು. ಈ ಸಂದರ್ಭ ಕಾರ್ಯದರ್ಶಿ ಮಂಜುಳಾ, ಸದಸ್ಯರಾದ ಮೊಹಮ್ಮದ್ ರಫಿ, ಸುಲೋಚನಾ, ಸಿಬ್ಬಂದಿಗಳಾದ ಚಂದ್ರ, ಸಾಹೀರ, ಕಂದಸ್ವಾಮಿ, ಗಣೇಶ, ಹಸನ್ ಇದ್ದರು.