ಬೆಂಗಳೂರು (ಜೂನ್.4); ರಾಜ್ಯದಲ್ಲಿ ವಿದ್ಯುತ್ ಅಪಘಾತಕ್ಕೆ ಬಲಿಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅದರಲ್ಲೂ ಬೆಂಗಳೂರಿನಲ್ಲಂತೂ ಚಿಕ್ಕ ಮಕ್ಕಳು ವಿದ್ಯುತ್ ತಂತಿಗಳಿಗೆ ಬಲಿಯಾಗುತ್ತಿರುವುದು ಆಘಾತಕರ ವಿಚಾರವಾಗಿದೆ.ಇತ್ತೀಚೆಗೆ ಬಾಣಸವಾಡಿಯ 7 ವರ್ಷದ ಬಾಲಕ ಉದಯ್ ಹಾಗೂ ಮತ್ತೀಕೆರೆಯ ಕಟ್ಟಡ ಕಾರ್ಮಿಕ ಶಿವು ವಿದ್ಯುತ್ ಅಪಘಾತದಿಂದ ಮೃತರಾಗಿದ್ದರು. ಇನ್ನೂ ಮತ್ತೀಕೆರೆಯ 14 ವರ್ಷದ ಬಾಲಕ ಲಿಖಿತ್ ಶೇ.60 ರಷ್ಟು ಸುಟ್ಟುಗಾಯಗಳಿಗೆ ಒಳಗಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾನೆ. ಇನ್ನೂ ಜೂನ್. 2 ರ ಭಾನುವಾರ ರಾಯಚೂರಿನಲ್ಲಿ ಇಬ್ಬರು ಅಣ್ಣ-ತಮ್ಮಂದಿರು ವಿದ್ಯುತ್ಗೆ ಅಪಘಾತಕ್ಕೆ ಬಲಿಯಾಗಿದ್ದರು.
ಇವೆಲ್ಲ ಕಳೆದ ಮೂರು ತಿಂಗಳ ಅಂತದಲ್ಲಿ ನಡೆದ ಘಟನೆಗಳು. ಇದಲ್ಲದೆ ರಾಜ್ಯದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಸುಮಾರು 350ಕ್ಕೂ ಹೆಚ್ಚು ಜನ ವಿದ್ಯುತ್ ಶಾಕ್ಗೆ ಒಳಗಾಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹೀಗೆ ಪ್ರಾಣ ಕಳೆದುಕೊಂಡವರ ಪೈಕಿ ಬಹುಪಾಲು ಮಕ್ಕಳ ಸಂಖ್ಯೆಯೇ ಅಧಿಕ ಎಂಬುದು ಆಘಾತಕಾರಿ ವಿಚಾರವಾಗಿದೆ.
ಇದೀಗ ಎಲ್ಲಾ ಕಹಿ ಘಟನೆಗಳು ಮಾಸುವ ಮುನ್ನವೇ ಬೆಂಗಳೂರಿನಲ್ಲಿ ವಿದ್ಯುತ್ ಅವಘಡಕ್ಕೆ ಮತ್ತೊಬ್ಬ ಬಾಲಕ ಬಲಿಯಾಗಿದ್ದಾನೆ. ಮೃತ ಬಾಲಕನನ್ನು 8 ವರ್ಷದ ಅಕ್ಷಯ್ ಎಂದು ಗುರುತಿಸಲಾಗಿದೆ.
ಇದೀಗ ಎಲ್ಲಾ ಕಹಿ ಘಟನೆಗಳು ಮಾಸುವ ಮುನ್ನವೇ ಬೆಂಗಳೂರಿನಲ್ಲಿ ವಿದ್ಯುತ್ ಅವಘಡಕ್ಕೆ ಮತ್ತೊಬ್ಬ ಬಾಲಕ ಬಲಿಯಾಗಿದ್ದಾನೆ. ಮೃತ ಬಾಲಕನನ್ನು 8 ವರ್ಷದ ಅಕ್ಷಯ್ ಎಂದು ಗುರುತಿಸಲಾಗಿದೆ.
ಶಾಲೆಯ ನಿರ್ಲಕ್ಷ್ಯಕ್ಕೆ ಬಾಲಕ ಬಲಿ; ಮುನಿರಾಜು ಎಂಬುವವರ ಪುತ್ರನಾದ ಅಕ್ಷಯ್ ಬೆಂಗಳೂರಿನ ಜೆ.ಪಿ. ನಗರದ ಜಂಬೂ ಸವಾರಿ ದಿಣ್ಣೆ ಬಳಿ ಇರುವ ಸೆಂಟ್ ಪ್ರಾನ್ಸಿನ್ ಶಾಲೆಯಲ್ಲಿ 2ನೇ ತರಗತಿ ವಿದ್ಯಾರ್ಥಿ.
ಶಾಲೆಯಲ್ಲಿ ಕಳೆದ ಶನಿವಾರ ಗೆಳೆಯರ ಜೊತೆ ಆಟವಾಡುತ್ತಾ ಸ್ಟೇರ್ ಕೇಸ್ ಹತ್ತುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ತಗಲಿ ಬಾಲಕ ಅಸ್ವಸ್ಥನಾಗಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ.
ಶಾಲಾ ಮಂಡಳಿಯ ನಿರ್ಲಕ್ಷ್ಯದಿಂದಲೇ ಇಂತಹ ಅನಾಹುತಕಾರಿ ಘಟನೆ ನಡೆದಿದೆ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

No comments
Post a Comment