ಪಠಾಣ್ ಕೋಟ್ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟ ಕಥುವಾ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ: 6 ಮಂದಿ ದೋಷಿಗಳು

No comments

 ಶ್ರೀನಗರ, ಜೂ.10: ಜಮ್ಮು –ಕಾಶ್ಮೀರದ ಜಿಲ್ಲೆಯ ಕಥುವಾದಲ್ಲಿ 8ರ ಹರೆಯದ ಬಾಲಕಿಯ ಮೇಲೆ ಸರಣಿ ಅತ್ಯಾಚಾರ ನಡೆಸಿ ಆಕೆಯನ್ನು ಕೊಲೆಗೈದ ಪ್ರಕರಣದ ಆರೋಪಿಗಳ ಪೈಕಿ ಆರು ಮಂದಿ ದೋಷಿಗಳೆಂದು ಪಠಾಣ್ ಕೋಟ್ ವಿಶೇಷ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ. ಸಾಂಝಿರಾಮ್, ದೀಪಕ್ ಖಜುರಿಯಾ, ತಿಲಕ್ ರಾಜ್, ಸುರೇಂದ್ರ, ಆನಂದ್ ದತ್ತಾ, ಪ್ರವೇಶ್ ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ವಿಶಾಲ್ ನನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ. 2018 , ಜನವರಿ 10ರಂದು ಬಾಲಕಿಯನ್ನು ದುಷ್ಕರ್ಮಿಗಳ ತಂಡವೊಂದು ಅಪಹರಿಸಿ, ಸರಣಿ ಅತ್ಯಾಚಾರ ನಡೆಸಿ ಕೊಲೆಗೈದು ಪರಾರಿಯಾಗಿತ್ತು.

No comments

Post a Comment