ಬೆಂಗಳೂರಿಗೆ ಬರುತ್ತಿದ್ದ SRS ಬಸ್ ಹಾಗೂ ತೂಫಾನ್ ನಡುವೆ ಡಿಕ್ಕಿ : 18 ಮಂದಿ ಸಾವು

No comments

ಆಂಧ್ರ ಪ್ರದೇಶ : ಬೆಂಗಳೂರಿಗೆ ಬರುತ್ತಿದ್ದ ಎಸ್ ಆರ್ ಎಸ್ ಟ್ರಾವೆಲ್ಸ್ ವೋಲ್ವೋ ಬಸ್ ಹಾಗೂ ತೂಫಾನ್ ಜೀಪ್ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಕರ್ನೂಲು ಜಿಲ್ಲೆಯ ವೆಲದುರ್ತಿ ಚೆಕ್ ಪೋಸ್ಟ್ ಬಳಿ ನಡೆದಿದೆ.
ಈ ದುರ್ಘಟನೆಯಲ್ಲಿ 18 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಸಂಜೆ ಬೆಂಗಳೂರಿಗೆ ಬರುತ್ತಿದ್ದ ಎಸ್ ಆರ್ ಎಸ್ ಟ್ರಾವೆಲ್ಸ್ ವೋಲ್ವೋ ಬಸ್ ಹಾಗೂ ತೂಫಾನ್ ಜೀಪ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.

No comments

Post a Comment