PUBG ಆಟಗಾರನ ಕಾರನ್ನೊಮ್ಮೆ ನೋಡಿ

No comments

          

ಆನ್ಲೈನ್ ಗೇಮ್ ಹುಚ್ಚಿಗೆ ಜನರು ಜಗತ್ತು ಮರೆಯುತ್ತಾರೆ. ಇದಕ್ಕೆ ಈ ಯುವಕ ಉತ್ತಮ ನಿದರ್ಶನ. ಆನ್ಲೈನ್ ಗೇಮ್ ಪಬ್ಜಿ ಹುಚ್ಚಿಗೆ ಬಿದ್ದ ಯುವಕ ತನ್ನ ಎಸ್ಯುವಿ ಕಾರನ್ನು ಈ ಸ್ಥಿತಿಗೆ ತಂದಿದ್ದಾನೆ. ಪಬ್ಜಿ ಥೀಮನ್ನು ಕಾರಿಗೆ ಅಳವಡಿಸಿ ಎಲ್ಲರ ಗಮನ ಸೆಳೆದಿದ್ದಾನೆ.
ಪಬ್ಜಿ ಗೇಮ್ ಬಗ್ಗೆ ಇಡೀ ದೇಶದ ಜನರು ಮಾತನಾಡ್ತಿದ್ದಾರೆ. ಈ ಆಟವನ್ನು ತುಂಬಾ ಇಷ್ಟಪಡುವ ವಿನಯ್ ಕುಮಾರ್ ತನ್ನ ಟಾಟಾ ನೆಕ್ಸಸ್ ಕಾಂಪ್ಯಾಕ್ಟ್ ಎಸ್ಯುವಿಗೆ ಪಬ್ಜಿ ಸ್ಟಿಕ್ಕರ್ ಹಾಗೂ ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ಅಳವಡಿಸಿದ್ದಾನೆ. ತನ್ನ ಯುಟ್ಯೂಬ್ ಚಾನೆಲ್ `vinaykapoor99’ನಲ್ಲಿ ಕಾರಿನ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾನೆ.
ಕಾರ್ ಮುಂಭಾಗಕ್ಕೆ ಪಬ್ಜಿ ಸ್ಲೋಗನ್ ಹಾಕಿದ್ದಾನೆ. ಕಾರಿನ ಹಿಂಭಾಗ, ಪಕ್ಕದ ಭಾಗಕ್ಕೆ ಅನೇಕ ಸ್ಟಿಕ್ಕರ್ ಅಳವಡಿಸಿದ್ದಾನೆ.ಇದಕ್ಕಾಗಿ ವಿನಯ್ ಸಾಕಷ್ಟು ಖರ್ಚು ಮಾಡಿದ್ದಾನಂತೆ. ಪಬ್ಜಿಗೆ ಸಂಬಂಧಿಸಿದ ಬಿಡಿ ಭಾಗಕ್ಕೆ 4500 ರೂಪಾಯಿ ಖರ್ಚಾಗಿದೆಯಂತೆ. ರೆಡ್ ರೈನೋ ಕಿಟ್ ಗೆ 35 ಸಾವಿರ ರೂಪಾಯಿ ಹಾಗೂ ಸ್ಟಿಕ್ಕರ್ ಗೆ 1800 ರೂಪಾಯ ಖರ್ಚಾಗಿದೆಯಂತೆ.

No comments

Post a Comment