ಮತಎಣಿಕೆ ಕೇಂದ್ರದಲ್ಲಿ ಹೃದಯಾಘಾತವಾಗಿ ಮಧ್ಯಪ್ರದೇಶ ಕಾಂಗ್ರೆಸ್ ನಾಯಕ ಸಾವು

No comments

ಭೋಪಾಲ್: ಚುನಾವಣಾ ಫಲಿತಾಶದ ದಿನವಾದ ಗುರುವಾರ ಮತ ಎಣಿಕೆ ಕೇಂದ್ರದಲ್ಲಿದ್ದ ಕಾಂಗ್ರೆಸ್ ನಾಯಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶ ಖಾಂಗ್ರೆಸ್ ಸೆಹೂರ್ ಜಿಲ್ಲಾ ಮುಖ್ಯಸ್ಥ ರತನ್ ಸಿಂಗ್ ಮತ ಎಣಿಕೆ ಕೇಂದ್ರದಲ್ಲಿದ್ದಾಗಲೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಮತ ಎಣಿಕೆ ಕೇಂದ್ರದಲ್ಲಿ ಮಾಹಿತಿ ಕಲೆ ಹಾಕಲಿಕ್ಕಾಗಿ ತೆರಳಿದ್ದಾಗ ಸಿಂಗ್ ಅವರಿಗೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ.
ಲೋಕಸಭೆ ಫಲಿತಾಂಶದಲ್ಲಿ ಕಾಂಗ್ರೆಸ್ ಗೆ ತೀವ್ರ ಹಿನ್ನೆಡೆ ಅನುಭವಿಸಿದೆ.

No comments

Post a Comment