ಕೊಲಂಬೊ: ಶ್ರೀಲಂಕಾದಲ್ಲಿ ಹೇರಲಾಗಿರುವ ತುರ್ತು ಪರಿಸ್ಥಿತಿಯನ್ನು ಇನ್ನೊಂದು ತಿಂಗಳಲ್ಲಿ ತೆರವುಗೊಳಿಸಲಾಗುವುದು ಎಂದು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸೋಮವಾರ ಹೇಳಿದ್ದಾರೆ.
'ಏಪ್ರಿಲ್ 21ರ ಈಸ್ಟರ್ ಭಾನುವಾರದ ಆತ್ಮಾಹುತಿ ದಾಳಿ
ನಂತರ ದೇಶದ ಭದ್ರತಾ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಈಗ ವ್ಯವಸ್ಥೆ ಶೇ 99ರಷ್ಟು ಸಹಜ ಸ್ಥಿತಿಗೆ ಮರಳಿದೆ. ಆದ್ದರಿಂದ ಈ ನಿರ್ಣಯ ಕೈಗೊಳ್ಳಲಾಗಿದೆ' ಎಂದು ಅವರು ಹೇಳಿದ್ದಾರೆ.
ನಂತರ ದೇಶದ ಭದ್ರತಾ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಈಗ ವ್ಯವಸ್ಥೆ ಶೇ 99ರಷ್ಟು ಸಹಜ ಸ್ಥಿತಿಗೆ ಮರಳಿದೆ. ಆದ್ದರಿಂದ ಈ ನಿರ್ಣಯ ಕೈಗೊಳ್ಳಲಾಗಿದೆ' ಎಂದು ಅವರು ಹೇಳಿದ್ದಾರೆ.
ದಾಳಿ ಶಂಕಿತರನ್ನು ವಶಕ್ಕೆ ಪಡೆಯಲು ಹಾಗೂ ಬಂಧಿಸಲು ಸೇನೆಗೆ ಸಂಪೂರ್ಣ ಅಧಿಕಾರ ನೀಡಿ ಸಿರಿಸೇನಾ ಅವರು ಕಠಿಣವಾದ ತುರ್ತು ಪರಿಸ್ಥಿತಿ ಘೋಷಿಸಿದ್ದರು.

No comments
Post a Comment