ಲಂಬಾಣಿ ವೇಷ ತೊಟ್ಟು ಪ್ರಚಾರ ನಡೆಸಿದ ಶೋಭಾ ಕರಂದ್ಲಾಜೆ

No comments

ಕಲಬುರ್ಗಿ : ಚಿಂಚೋಳಿ ವಿಧಾನಸಭಾ ಉಪಚುನಾವಣಾ ಕಣಾ ರಂಗೇರಿದ್ದು, ನಿನ್ನೆ ಸಂಸದೆ ಶೋಭಾ ಕರಂದ್ಲಾಜೆ ಅವರು ಪ್ರಚಾರಕ್ಕೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ಲಂಬಾಣಿ ವೇಷ ಭೂಷಣ ತೊಟ್ಟು ಚಿಂಚೋಳಿ ಕ್ಷೇತ್ರದಲ್ಲಿ ಚಿಂದಾನೂರು ತಾಂಡಾದಲ್ಲಿ ಅಬ್ಬರ ಪ್ರಚಾರ ನಡೆಸಿದರು.
ಲಂಬಾಣಿ ಗೀತೆಗೆ ಮಹಿಳೆಯರ ಜೊತೆ ಸಖತ್ ಸ್ಪೆಪ್ ಹಾಕಿ ಬಿಜೆಪಿ ಅಭ್ಯರ್ಥಿ ಡಾ,ಅವಿನಾಶ್ ಜಾಧವ್ ಪರ ಮತಯಾಚನೆ ನಡೆಸಿದರು. ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕಾಂಗ್ರೆಸ್ ಗೆ 40 ಸೀಟು ಬಂದರೆ ದೆಹಲಿಯ ವಿಜಯ ಚೌಕ್ ನಲ್ಲಿ ಮೋದಿ ನೇಣು ಹಾಕಿಕೊಳ್ಳುತ್ತಾನಾ ಎಂಬ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ' 40 ವರ್ಷ ರಾಜಕೀಯ ಮಾಡಿದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯಿಂದ ಬಹಳ ನೋವಾಗಿದೆ.
ಖರ್ಗೆ ಅವರು ಹತಾಶೆಯಿಂದ ಇಂತಹ ಹೇಳಿಕೆ ನೀಡಿದ್ದಾರೆ. ಕಲಬುರ್ಗಿ ಅವರಿಗೆ ಸೋಲಿನ ಭಯ ಕಾಡುತ್ತಿದೆ. ಅವರ ಸೋಲು ನಿಶ್ಚಿತ ಎಂದು ಶೋಭಾ ಕರಂದ್ಲಾಜೆ ಹೇಳಿದರು.

No comments

Post a Comment