ಹೊಲಿಗೆ ಮತ್ತು ಕಂಪ್ಯೂಟರ್ ತರಬೇತಿಗೆ ಚಾಲನೆ
ಮಡಿಕೇರಿ :-ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದ ಆಶ್ರಮ, ಶ್ರೀ ಶಾರದ ವೃತ್ತಿ ತರಬೇತಿ ಕೇಂದ್ರ ಹಾಗೂ ಶ್ರೀ ಸದ್ಗುರು ಕೈಗಾರಿಕಾ ತರಬೇತಿ ಸಂಸ್ಥೆ ಇವರ ಸಹಯೋಗದಲ್ಲಿ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ಹೊಲಿಗೆ ಮತ್ತು ಕಂಪ್ಯೂಟರ್ ವೃತ್ತಿ ಕೌಶಲ್ಯ ಉಚಿತ ಶಿಕ್ಷಣ ತರಬೇತಿ ಕಾರ್ಯಕ್ರಮಕ್ಕೆ ನಗರದ ಶ್ರೀನಿಕೇತನ್ ಸಭಾಂಗಣದಲ್ಲಿ ಬುಧವಾರ ಪೊನ್ನಂಪೇಟೆ ರಾಮಕೃಷ್ಣ ಶಾರದ ಆಶ್ರಮದ ಭೋದ ಸ್ವರೂಪಾನಂದ ಸ್ವಾಮೀಜಿ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ವ್ಯಾಪ್ತಿಯ 75 ಜನರಿಗೆ ಮೊದಲ ಹಂತದ ತರಬೇತಿಯನ್ನು ನೀಡಲಾಗುತ್ತಿದ್ದು, ಈ ತರಬೇತಿಯ ಸದುಪಯೋಗವನ್ನು ಸಂಪೂರ್ಣವಾಗಿ ಪಡೆದುಕೊಂಡು ಸ್ವಯಂ ಅಭಿವೃದ್ಧಿಯನ್ನು ಹೊಂದಬೇಕು ಎಂದು ಅವರು ತಿಳಿಸಿದರು.
ನೆರೆ ಸಂತ್ರಸ್ತರ ಆರ್ಥಿಕ ಉನ್ನತ್ತೀಕರಣಕ್ಕಾಗಿ ಹೊಲಿಗೆ ತರಬೇತಿ, ಕಂಪ್ಯೂಟರ್ ಶಿಕ್ಷಣ, ಜೇನು ಕೃಷಿ ತರಬೇತಿ ಹಾಗೂ ಲಘು ವಾಹನ ಚಾಲನ ತರಬೇತಿ ಹೀಗೆ ಹಲವು ಕಾರ್ಯಕ್ರಮಗಳನ್ನು ಆಶ್ರಮದ ವತಿಯಿಂದ ನಡೆಸಲಾಗುತ್ತಿದೆ. ಈ ತರಬೇತಿಯನ್ನು ಪರಿಪೂರ್ಣವಾಗಿ ಬಳಸಿಕೊಂಡು ಸ್ವಾವಲಂಭಿಗಳಾಗಬೇಕು ಎಂದು ಅವರು ಹೇಳಿದರು.
ಪ್ರಕೃತಿ ವಿಕೋಪದಿಂದಾಗಿ ಕೊಡಗಿನ ಜನತೆ ತೀವ್ರ ಹತಾಶರಾಗಿದ್ದರು. ಈ ಸಂದರ್ಭದಲ್ಲಿ ಪಡಿತರ ಸಾಮಗ್ರಿಗಳನ್ನು ಸಂತ್ರಸ್ಥರಿಗೆ ನೀಡಿ ಆಶ್ರಯವನ್ನು ನೀಡಲಾಗಿತ್ತು. ಇಡೀ ಕರ್ನಾಟಕ ಜನತೆ ಸಹಾಯ ಹಸ್ತವನ್ನು ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಶ್ಲಾಘೀಸಿದರು. ಸ್ವಾಭಿಮಾನ, ದೃಢಸಂಕಲ್ಪ ಮತ್ತು ಕಾಯಕ ನಿಷ್ಠೆಯಿಂದ ಮಾನವ ಜೀವನ ಅಭಿವೃದ್ಧಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕರಾದ ಬಿ.ಜಿ.ಅನಂತಶಯನ ಅವರು ಮಾತನಾಡಿ ಒಬ್ಬ ವ್ಯಕ್ತಿಯ ಉದ್ಧಾರವು ಅವರ ಕುಟುಂಬದ ಸಂಪೂರ್ಣ ಅಭಿವೃದ್ಧಿಯಾಗುತ್ತದೆ. ಚೈತನ್ಯ ತುಂಬಿದ ಮಾನವ ಶಕ್ತಿ ಅದ್ಧುತವಾದದು.್ದ ನಮಗೆ ಸಿಗುವ ಪ್ರತಿಯೊಂದು ಅವಕಾಶಗಳನ್ನು ಪಡೆದುಕೊಳ್ಳಬೇಕು ಹಾಗೂ ಇಂದಿನ ವೃತ್ತಿ ಶಿಕ್ಷಣ ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಬರಹಗಾರರಾದ ಜಿ.ಪಿ.ರಾಘವೇಂದ್ರ ಅವರು ಮಾತನಾಡಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮಾನವೀಯ ಧರ್ಮವಾಗಿದೆ. ಪ್ರತಿಯೋಬ್ಬರು ಜೀವನದಲ್ಲಿ ಸಹಾಯ ಮಾಡುವ ಮಾನವೀಯ ಮೌಲ್ಯವನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ತರಬೇತಿಯನ್ನು ಪಡೆದು ನಿಷ್ಠೆಯಿಂದ ವೃತ್ತಿಯನ್ನು ನಡೆಸಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ರಾಮ್ ಪ್ರಸಾದ್ ಹಾಗೂ ಇತರರು ಹಾಜರಿದ್ದರು. ಶೋಭಾ ಸ್ವಾಗತಿಸಿ, ನಿರೂಪಿಸಿದರು, ಕುಮಾರಿ ರಕ್ಷಿತಾ ವಂದಿಸಿದರು.

No comments
Post a Comment