ಹಿದಾಯ ಫೌಂಡೇಶನ್ ಬಲಮುರಿ ವತಿಯಿಂದ ರಮಳಾನ್ ಕಿಟ್ ವಿತರಣೆ

No comments

ಮೂರ್ನಾಡು : ಮೂರ್ನಾಡು ಸಮೀಪ ಬಲಮುರಿಯ ಹಳೆ ಮದ್ರಸ ವಿದ್ಯಾರ್ಥಿಗಳ ಸಂಘಟನೆಯಾದ ಹಲವು ಸಾಮಾಜಿಕ ಕಾರುಣ್ಯ ಪದ್ದತಿಗಳನ್ನು ರೂಪಿಸಿಕೊಂಡು ಬರುತ್ತಿರುವ ಹಿದಾಯ ಫೌಂಡೇಶನ್ ಬಲಮುರಿ ವತಿಯಿಂದ ಬಲಮುರಿ ಜಮಾಅತ್ ನಲ್ಲಿ ರಮಳಾನ್ ಕಿಟ್ ವಿತರಣೆ ನಡೆಯಿತು. ಬಲಮುರಿ ಮಖಾಂ ವಠಾರದಲ್ಲಿ ಸ್ಥಳೀಯ ಖತೀಬ್ ಅಬೂಬಕರ್ ಝುಹ್ರಿಯವರ ದುಆ ಮೂಲಕ ಉದ್ಘಾಟನೆಗೊಳಿಸಲಾಯಿತು. ನಂತರ ಮಸೀದಿಗೆ ಒಳಪಟ್ಟ ಎಲ್ಲಾ ಮನೆಗಳಿಗೆ ಕಿಟ್ ತಲುಪಿಸಲಾಯಿತು. ಕಾರ್ಯಕ್ರಮದಲ್ಲಿ ಜಮಾಅತ್ ಸೆಕ್ರೆಟರಿ ಯೂಸುಫ್ ಎಂಕೆ , ಫೌಂಡೇಶನ್ ಅಧ್ಯಕ್ಷ ಶರೀಫ್ ಕೆಎಸ್ ಹಾಗೂ ಎಲ್ಲಾ ಸದಸ್ಯರು , ಇತರರು
ಭಾಗವಹಿಸಿದ್ದರು.

No comments

Post a Comment