ಮಂಡ್ಯ: ಮಂಡ್ಯದ ಜನತೆ ಪಕ್ಷೇತರ ಅಭ್ಯರ್ಥಿಗೆ ಸ್ವಾಭಿಮಾನದ ಮತನವನ್ನು ನೀಡುವ ಮೂಲಕ ಮಂಡ್ಯದ ಸೊಸೆ ಸುಮಲತಾ ಅಂಬರೀಶ್ ಅವರನ್ನು ಗೆಲುವಿನ ದಡಕ್ಕೆ ಸೇರಿಸಿದ್ದಾರೆ.
ಈ ಮೂಲಕ ‘ಎಲ್ಲಿದೀಯಪ್ಪಾ ನಿಖಿಲ್’’ ಎಂದು ಟ್ರೋಲ್ ಆದ ಮಂಡ್ಯದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಇದೀಗ ಮಂಡ್ಯದಲ್ಲಿ ಎಲ್ಲಿ ಹೋದಿಯಪ್ಪಾ ಅನ್ನುವ ಪರಿಸ್ಥಿತಿ ಉಂಟಾಗಿದೆ. ಪ್ರಭಾವಿ ಜೆಡಿಎಸ್ ಸಚಿವರುಗಳು ಇರುವ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಸೋಲನ್ನು ಅನುಭವಿಸಿದ್ದರಿಂದ ಮಂಡ್ಯದ ಜನತೆ ಮೈತ್ರಿ ಸರ್ಕಾರವನ್ನು ಸ್ವೀಕರಿಸಲಿಲ್ಲ ಎಂದು ತೋರಿಸಿ ಕೊಟ್ಟಿದ್ದಾರೆ.
ಸುಮಲತಾ ಅವರು ಪಕ್ಷೇತರವಾಗಿ ಮಂಡ್ಯದಲ್ಲಿ ನಿಂತ ವೇಳೆ ಜೆಡಿಎಸ್ ಮುಖಂಡರು ವೈಯ್ಯಕ್ತಿವಾಗಿ ಟಾರ್ಗೇಟ್ ಮಾಡಿ ಹೀಯಾಳಿಸಿದರು. ಅದಲ್ಲದೆ ನಿಖಿಲ್ ಕುಮಾರಸ್ವಾಮಿ ಅವರು 1ಲಕ್ಷಕ್ಕೂ ಅಧಿಕ ಮತಗಳಲ್ಲಿ ನಿಖಿಲ್ ಗೆಲುವು ಪಡೆಯುತ್ತಾರೆ ಎಂದು ಜೆಡಿಎಸ್ ನಾಯಕರು ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.
ಇದೀಗ ಸುಮಲತಾ ಅವರು 90.000 ಮತಗಳಿಂದ ನಿಖಿಲ್ ವಿರುದ್ಧ ಭರ್ಜರಿ ಜಯವನ್ನು ಸಾಧಿಸಿದ್ದಾರೆ.

No comments
Post a Comment