ಹೈದರಾಬಾದ್: ಕಾಂಗ್ರೆಸ್ ಮತ್ತು ಬಿಜೆಪಿಯೇತರ ರಂಗವೊಂದನ್ನು ಕಟ್ಟುವ ತೆಲಂಗಾಣ ಸಿಎಂ ಕೆ.ಸಿ.ಚಂದ್ರಶೇಖರ್ ಅವರ ಪ್ರಯತ್ನಕ್ಕೆ ಆರಂಭದಲ್ಲೇ ಹಿನ್ನಡೆಯಾಗಿದೆ.
ಸೋಮವಾರವಷ್ಟೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿದ್ದ ಕೆಸಿಆರ್, ಪ್ರತ್ಯೇಕ ರಂಗದ ಬಗ್ಗೆ ಚರ್ಚೆ ನಡೆಸಿದ್ದರು. ಅಲ್ಲದೆ ಮೇ 13ರಂದು ತಮಿಳುನಾಡಿನ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿ ಯಾಗುವು ದಾಗಿ ಹೇಳಿದ್ದರು. ಆದರೆ ಸದ್ಯಕ್ಕೆ ಕೆಸಿಆರ್ ಅವರನ್ನು ಭೇಟಿ ಯಾಗಲು ಕಾಲಾವಕಾಶ ಇಲ್ಲ, ಪ್ರಚಾರದ ಒತ್ತಡ ದಲ್ಲಿದ್ದೇನೆ ಎಂದು ಸ್ಟಾಲಿನ್ ಹೇಳಿದ್ದಾರೆ. ಈ ಮೂಲಕ ಮೊದಲು ಭೇಟಿ ಯಾಗುವುದಾಗಿ ಹೇಳಿ, ಈಗ ಯೂಟರ್ನ್ ಹೊಡೆದಿದ್ದಾರೆ.ಈಗಾಗಲೇ ದೇಶದಲ್ಲಿ ಮಹಾಘಟಬಂಧನ್ ಇದ್ದು, ಇದರಲ್ಲಿ ಕಾಂಗ್ರೆಸ್ ಕೂಡ ಪಾಲುದಾರನಾಗಿದೆ.
ಆದರೆ ಕೆಸಿಆರ್ ಅವರಿಗೆ ಕಾಂಗ್ರೆಸ್ ಜತೆಗೆ ಹೋಗಲು ಇಷ್ಟವಿಲ್ಲ. ಹೀಗಾಗಿ ಅವರು ದಕ್ಷಿಣ ಭಾರತ ದಲ್ಲೇ ಪ್ರಬಲ ರಂಗವೊಂದನ್ನು ಕಟ್ಟುವ ಆಲೋಚನೆ ಯಲ್ಲಿದ್ದಾರೆ. ಹೀಗಾಗಿಯೇ ಸ್ಟಾಲಿನ್ ಬಳಿಕ ಕರ್ನಾಟಕ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನೂ ಭೇಟಿಯಾಗಲಿದ್ದಾರೆ.

No comments
Post a Comment