ನವದೆಹಲಿ: ಗುರುಗ್ರಾಮದಲ್ಲಿ ಇತ್ತೀಚೆಗೆ ಮುಸ್ಲಿಂ ಯುವಕನ ಮೇಲೆ ನಡೆದಿದ್ದ ಹಲ್ಲೆ ಮತ್ತು ಧರ್ಮ ನಿಂದನೆಯನ್ನು ಖಂಡಿಸಿರುವ ಪೂರ್ವ ದೆಹಲಿಯ ನೂತನ ಸಂಸದ, ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್, ಪ್ರಕರಣದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಟ್ವಿಟರ್‌ನಲ್ಲಿ ಆಗ್ರಹಿಸಿದ್ದಾರೆ. ಅಲ್ಲದೆ, ನಮ್ಮದು ಜಾತ್ಯತೀತ ರಾಷ್ಟ್ರವೆಂದು ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ನೈರುತ್ಯ ದೆಹಲಿಯ ಗುರುಗ್ರಾಮದಲ್ಲಿ ಕಳೆದ ವಾರ ಪ್ರಾರ್ಥನೆ ಮುಗಿಸಿ ಮನೆ ತೆರಳುತ್ತಿದ್ದ 25 ವರ್ಷದ ಮೊಹಮ್ಮದ್ ಬರ್ಕತ್ ಎಂಬ ಮುಸ್ಲಿಂ ಯುವಕನನ್ನು ತಡೆದಿದ್ದ ಕೆಲ ಹಿಂದೂ ಬಲ ಪಂಥೀಯ ಕಾರ್ಯಕರ್ತರು ಬಲವಂತವಾಗಿ ಆತನ ಟೋಪಿ ತೆಗೆಸಿದ್ದರು. ಅಲ್ಲದೆ, 'ಜೈ ಶ್ರೀರಾಮ್' ಎಂದು ಹೇಳುವಂತೆ ಒತ್ತಾಯಿಸಿದ್ದರು. ಜತೆಗೆ ಹಲ್ಲೆಯನ್ನೂ ನಡೆಸಿದ್ದರೆಂದು ವರದಿಯಾಗಿತ್ತು.

No comments
Post a Comment