ಬೆಂಗಳೂರಿನ ಹಲವೆಡೆ ಭಾರಿ ಮಳೆ: ಸಂಚಾರ ಅಸ್ತವ್ಯಸ್ತ

No comments

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಭಾರಿ ಮಳೆಯಾಗಿದೆ.
ಬಿಸಿಲಿನ ಝಳದಿಂದ ತತ್ತರಿಸಿದ್ದ ರಾಜಧಾನಿಯ ನಾಗರಿಕರಿಗೆ ಮಳೆರಾಯ ಸ್ವಲ್ಪ ತಂಪು ನೀಡಿದ್ದಾನೆ.
ಬೆಂಗಳೂರಿನ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಮಳೆ ಸುರಿದಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.
ನಾಗರಿಕರು, ವಾಹನ ಸವಾರರು ಮಳೆಯಿಂದ ತೊಂದರೆಗೀಡಾದರು.ಬೆಂಗಳೂರಿನಲ್ಲಿ ಸಂಜೆಯೂ ಹಲವೆಡೆ ಬಿದ್ದ ಭಾರಿ ಮಳೆಯಿಂದಾಗಿ ವಾಹನ ಸಂಚಾರ ವ್ಯತ್ಯಯವಾಗಿದೆ. ಕೆಲವಡೆ ಮರಗಳು ಉರುಳಿ ಬಿದ್ದಿವೆ.
ವಿಧಾನಸೌಧ, ಶಾಂತಿ ನಗರ, ಆಡುಗೋಡಿ, ಎಂಜಿ ರಸ್ತೆ, ಮಲ್ಲೇಶ್ವರ, ರಾಜಾಜಿನಗರ, ಶ್ರೀನಿವಾಸನಗರ, ಹನುಮಂತನಗರ, ಮೈಸೂರು ರಸ್ತೆ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ.

No comments

Post a Comment