ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟ: ಯಂಗ್ ಇಂಡಿಯಾ ಪಾಲಿಪೆಟ್ಟ ಸೆಮಿಫೈನಲ್ಗೆ

No comments

ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟ:
ಚೆಟ್ಟಳ್ಳಿ: ಕೊಂಡಂಗೇರಿಯ ಫ್ರೌಡ ಶಾಲಾ ಮೈದಾನದಲ್ಲಿ ಕೆ.ವೈ.ಸಿ ಯುವಕ ವತಿಯಿಂದ ನಡೆಯುತ್ತಿರುವ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟದಲ್ಲಿ ಯಂಗ್ ಇಂಡಿಯಾ ಪಾಲಿಪೆಟ್ಟ ತಂಡವು ಬಿ ಪೂಲ್ ಪಂದ್ಯದಲ್ಲಿ ಸೆಮಿಫೈನಲ್ಗೆ ಅರ್ಹತೆ ಪಡೆದಿದ್ದಾರೆ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಯುನೈಟೆಡ್ ಕುಂಜಿಲ ತಂಡವನ್ನು ೧-೦ ಗೋಲುಗಳ ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್ಗೆ ಪಾಲಿಪೆಟ್ಟ ತಂಡವು ಅರ್ಹತೆ ಪಡೆದಿದ್ದಾರೆ.
ಗರಗಂದೂರು ಹಾಗೂ ಕೆ.ವೈ.ಸಿ ಕೊಂಡಂಗೇರಿ ನಡುವಿನ ಪಂದ್ಯದಲ್ಲಿ  ಗರಂಗದೂರು ಪೆನಾಲ್ಟಿ ಶೂಟೌಟ್ ನಲ್ಲಿ ೩-೨ ಗೋಲುಗಳ ಅಂತರದಿಂದ ಗೆದ್ದಿತು.
ಫ್ಯಾನ್ಸಿ ಕಂಡಕರೆ ಹಾಗೂ  ಗರಗಂದೂರು ನಡುವಿನ ಪಂದ್ಯಾಟದಲ್ಲಿ ಫ್ಯಾನ್ಸಿ ಕಂಡಕರೆ ತಂಡವು ೨-೦ ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಫ್ರೀ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿತು.
ರೋಜಾರಿಯನ್ಸ್ ಗೋಣಿಕೊಪ್ಪ ಹಾಗೂ ಯಂಗ್ ಇಂಡಿಯಾ ಜೂನಿಯರ್ ತಂಡಗಳ ನಡುವಿನ ಪಂದ್ಯಾಟದಲ್ಲಿ ೪-೩ ಗೋಲುಗಳ ಅಂತರದಿಂದ ಪಾಲಿಪೆಟ್ಟ ತಂಡವನ್ನು   ಮಣಿಸಿ ರೋಜಾರಿಯನ್ಸ್ ಗೋಣಿಕೊಪ್ಪ ತಂಡವು ಫ್ರೀ ಕ್ವಾರ್ಟರ್ಗೆ ಪ್ರವೇಶಿಸಿತು.
 ಅಮ್ಮತ್ತಿ ಎಫ್.ಸಿ ಹಾಗೂ ರೋಕಿಂಗ್ ಸ್ಟಾರ್ ಕುಂಜಿಲ ತಂಡವನ್ನು ಅಮ್ಮತ್ತಿ ತಂಡವು ೪ -೦ ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು.
 ಮೂರ್ನಾಡು ಹಾಗೂ ಫ್ಯಾನ್ಸಿ ಕಂಡಕರೆ ನಡುವಿನ ಪಂದ್ಯಾಟದಲ್ಲಿ ಫ್ಯಾನ್ಸಿ ಕಂಡಕರೆ ತಂಡವು ೧-೦ ಗೋಲುಗಳ ಅಂತರದಿಂದ ಗೆದ್ದಿತು.
ಇಂದಿನ ಪಂದ್ಯಾಟ:
ಸಿ.ಎಫ್‌.ಸಿ ಮಡಿಕೇರಿ- ಬ್ರದರ್ಸ್ ಹೊಸತೋಟ
ಫ್ಯಾನ್ಸಿ ಕಂಡಕರೆ-ಅಮ್ಮತ್ತಿ ಎಫ್‌.ಸಿ 
ಸೋಮವಾರಪೇಟೆ-ಅಮ್ಮತ್ತಿ ಎಫ್‌.ಸಿ ಬಿ 
ಸಿ.ಟಿ ಬ್ರದರ್ಸ್ ಕಡಂಗ-ಚೆಟ್ಟಿಮಾನಿ 
ಯಂಗ್ ಇಂಡಿಯಾ ಪಾಲಿಪೆಟ್ಟ -ಟೀಂ ಸೆವೆನ್ ಕುಶಾಲನಗರ

No comments

Post a Comment